ಮನೆ ರಾಜ್ಯ ‘ನಗರಾಡಳಿತ’ ವಿಷಯ ಕುರಿತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ತರಬೇತಿ ಕಾರ್ಯಗಾರ

‘ನಗರಾಡಳಿತ’ ವಿಷಯ ಕುರಿತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ತರಬೇತಿ ಕಾರ್ಯಗಾರ

0

ಮೈಸೂರು: ‘ನಗರಾಡಳಿತ’ ವಿಷಯ ಕುರಿತು ನೆಲಮಂಗಲ ಮತ್ತು ಗದಗ ಬೆಟಗೇರಿ ನಗರಸಭೆ ಮತ್ತು ಪಿರಿಯಾಪಟ್ಟಣ, ಚಿಂಚಲಿ ಪುರಸಭೆಗೆ ಆಯ್ಕೆಗೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ “ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮೈಸೂರು” ವತಿಯಿಂದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

Join Our Whatsapp Group

ತರಬೇತಿ ಕಾರ್ಯಗಾರವನ್ನು ಸಂಸ್ಥೆ ನಿರ್ದೇಶಕರಾದ ವೆಂಕಟೇಶ ಕಡಗದ ಕೈ ಉದ್ಘಾಟಿಸಿದರು.

ಈ ವೇಳೆ ನಿರ್ದೇಶಕರು ಮಾತನಾಡಿ, ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗಳಿಗೆ ಸರ್ಕಾರ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಮುಖಾಂತರ ಪುರಸಭೆ, ನಗರಸಭೆ, ಪಾಲಿಕೆಗಳ ಸದಸ್ಯರಿಗೆ ನಗರಾಡಳಿತ ಕುರಿತು ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯ ವೇಳೆಯಲ್ಲಿ ಆಡಳಿತ, ಕಾರ್ಯವೈಖರಿ, ಸರ್ಕಾರದ ಯೋಜನೆಗಳು, ವಾರ್ಡ್ ಗಳಲ್ಲಿ ಸದಸ್ಯರ ಜವಾಬ್ದಾರಿಗಳನ್ನು ಕುರಿತು ತರಬೇತಿ ನೀಡಲಾಗುತ್ತದೆ. ಆದ್ದರಿಂದ ಈ ಕಾರ್ಯಗಾರವನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಿದರು.

ಸಂಸ್ಥೆ ಉಪನಿರ್ದೇಶರಾದ ರಾಜು. ಸಿ ರವರು ಪ್ರೇರಣಾ ನುಡಿಯನ್ನಾಡಿದರೆ, ಬೋಧಕರಾದ ಯಾದವ್ ಕುಮಾರ್ ಪ್ರಾರ್ಥಿಸಿದರು. ತರಬೇತಿಯ ಸಂಯೋಜಕರು ಹಾಗೂ ಬೋಧಕರಾದ ಬಿ . ವಿ ವೆಂಕಟೇಶ್ ಮತ್ತು ಸುನೀತಾ ಹಾಗೂ  ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಹಿಂದಿನ ಲೇಖನಇ.ವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜತೆ ಒಡಂಬಡಿಕೆ, 8 ಸಾವಿರ ಕೋಟಿ ರೂ. ಹೂಡಿಕೆಗೆ ಅಸ್ತು
ಮುಂದಿನ ಲೇಖನಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ದಂಧೆ: ಇಬ್ಬರ ಬಂಧನ