ಮೈಸೂರು: ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೂಸಿನ ಮನೆ ಆರೈಕೆ ತರಬೇತಿ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಾಲ್ಲೂಕು ಉಸ್ತುವಾರಿ ಅಧಿಕಾರಿಗಳಾದ ಎಂ.ಕೆ. ಸವಿತಾ ಅವರು ತೊಟ್ಟಿಲಿಗೆ ಮಗುವನ್ನು ಮಲಗಿಸಿ ತೂಗುವ ಮೂಲಕ ತರಬೇತಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕೂಸಿನ ಮನೆಯೊಂದು ಉತ್ತಮವಾದ ಯೋಜನೆಯಾಗಿದ್ದು ಆರೈಕೆದಾರರು ಮಕ್ಕಳನ್ನು ಸೂಕ್ಷ್ಮವಾಗಿ ಜಾಗೃತಿಯಿಂದ ಗಮನ ವಿಟ್ಟು ನೋಡಿಕೊಳ್ಳಬೇಕೆಂದು ಎಂಬ ಸಲಹೆ ನೀಡಿದರು.
ಏಳು ದಿನಗಳ ತರಬೇತಿಯಲ್ಲಿ ಆರೈಕೆದಾರರು ಆಸಕ್ತಿದಾಯಕವಾಗಿ ಕಲಿತು ನೀವು ಕೆಲಸ ನಿರ್ವಹಿಸುವ ಕೂಸಿನ ಮನೆಗಳಲ್ಲಿ ತರಬೇತಿಯಲ್ಲಿನ ವಿಷಯಗಳನ್ನು ಅಳವಡಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಮಕ್ಕಳನ್ನು ನೋಡಿಕೊಳ್ಳುವ ಕೆಲಸವು ಉತ್ತಮವಾದದ್ದು ಅದು ನಿಮಗೆ ದೊರಕಿರುವುದರಿಂದ ಆರೈಕೆದಾರರಾಗಿರುವ ನೀವು ಕೂಸಿನ ಮನೆಯ ಮಕ್ಕಳಿಗೆ ಪೋಷಕರ ಸ್ಥಾನದಲ್ಲಿ ಇದ್ದು ಮಕ್ಕಳ ಲಾಲನೆ ಪಾಲನೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳ ಹಾರೈಕೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಂತರಾಜು ಪಿ ಎಸ್ ರವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗ ದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೂಸಿನ ಮನೆ ತೆರೆಯುತ್ತಿರುವುದು ಕೂಲಿ ಕಾರ್ಮಿಕರ ಮಕ್ಕಳ ಲಾಲನೆ ಪಾಲನೆಗೆ ನೆರವಾಗಲಿದೆ. ಕೂಸಿನ ಮನೆಗೆ ಆರು ತಿಂಗಳಿoದ ಮೂರು ವರ್ಷದ ಮಕ್ಕಳು ದಾಖಲಾಗುವುದರಿಂದ ಹಾರೈಕೆದಾರರ ಕೆಲಸವು ಜವಾಬ್ದಾರಿ ಉತ್ತಮವಾದದ್ದು, ಅದನ್ನು ಅರಿತು ಕೂಸಿನ ಮನೆಯಲ್ಲಿ ಕೆಲಸ ಮಾಡುವಂತೆ ಆರೈಕೆದಾರರಿಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಮೇಲ್ವಿಚಾರಕಿ ಮಂಜುಳ ಇ.ಡಿ ಹಾಗೂ ಜಿಲ್ಲಾ ಐಇಸಿ ಸಂಯೋಜಕಿ ರಮ್ಯಾ ಅವರು ಆರೈಕೆದಾರರಿಗೆ ಮಕ್ಕಳ ಲಾಲನೆ ಪೋಷಣೆ ಹಾಗೂ ಆಟೋಟಗಳ ಬಗ್ಗೆ ಮಾಹಿತಿ ನೀಡಿ ಹಾರೈಕೆದಾರರಿಗೆ ಕೆಲವು ಆಟಗಳನ್ನು ಆಡಿಸಿ ಹಾಗೂ ಹಾಡುಗಳನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಟಿ.ನರಸೀಪುರದ ತಹಶೀಲ್ದಾರ್ ಸುರೇಶ ಆಚಾರ್ , ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶಾಂತ ಎಂ, ತಾಲೂಕು ಯೋಜನಾಧಿಕಾರಿಗಳಾದ ಡಾ ಕೆ ರಂಗಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಗೌಡ, ತಾಲೂಕು ಐಇಸಿ ಸಂಯೋಜಕ ಹರ್ಷಿತ್, ಡಿ ಟಿ ಸಿ ನಟರಾಜು ಹಾಗೂ ಗ್ರಾಮ ಕಾಯಕ ಮಿತ್ರರು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.














