ಮೈಸೂರು(Mysuru): ನಗರದ ಇಶ್ರೇ ಇಂಜಿನಿಯರ್ಸ್ ಸೊಸೈಟಿ ವತಿಯಿಂದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ತುರ್ತು ಸಂದರ್ಭ ನಿರ್ವಹಣೆ ಸನ್ನದ್ದತೆಗಾಗಿ ತರಬೇತಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಶ್ರೇ ಮೈಸೂರು ಘಟಕದ ಅಧ್ಯಕ್ಷ ಇಂಜಿನಿಯರ್ ಅನಿಲ್ ಕುಮಾರ್ ನಾಡಿಗೇರ್, ಇಶ್ರೇ ಸಂಸ್ಥೆ ದೇಶದಾದ್ಯಂತ 44 ಘಟಕ ಗಳನ್ನು ಹೊಂದಿದ್ದು, ಇಪ್ಪತೈದು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇದು ಹವಾನಿಯಂತ್ರಣ, ಇಂಧನ ಕ್ಷಮತೆ, ಸುಸ್ಥಿರತೆ, ಸುರಕ್ಷತೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಲಾಭೊದ್ದೇಶ ರಹಿತ ಸ್ವಯಂ ಸೇವಕರ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ರಚನಾ ಎನರ್ ಕೇರ್ ಸಂಸ್ಥೆಯ ಸುರಕ್ಷ, ಸ್ವಾಸ್ಥ್ಯ, ಪರಿಸರ ಸಲಹೆಗಾರ ವೆಂಕೋಬ ರಾವ್, ಇತರ ಸಂಪನ್ಮೂಲ ವ್ಯಕ್ತಿಗಳಾಗಿ ಆಪ್ತ ಸಲಹೆಗಾರ ಪ್ರೋ.ಬಾಬು ರಾಜೇಂದ್ರ ಪ್ರಸಾದ್, ಬಾಬ ಅಟೊಮಿಕ್ ರೀಸರ್ಚ್ (ನಿವೃತ್ತ) ಇಂಜಿನಿಯರ್ ಅರಿಣಿ ಶ್ರೀನಿವಾಸ್, ಸಲಹೆಗಾರರಾದ ನಾಗಭೂಷಣ್ .ಎನ್. ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂವತ್ತು ಕೈಗಾರಿಕಾ ಹಿನ್ನೆಲೆಯ ವ್ಯಕ್ತಿಗಳು ಭಾಗವಹಿಸಿದ್ದರು.
ತುರ್ತು ಸಮಯದಲ್ಲಿ ಉಪಕರಣಗಳನ್ನು ಬಳಸುವ ಬಗ್ಗೆ, ಜೀವ ಸುರಕ್ಷೆ, ಮಾನಸಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಯಿತು.
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾದ ಮುಖ್ಯಸ್ಥರಾದ ಡಾ.ನವೀನ್ ಪ್ರಕಾಶ ತರಬೇತಿ ಪಡೆದವರಿಗೆ ಶುಭಕೋರಿದರು.
ಇಶ್ರೇ ನಿಯೊಜಿತ ಅಧ್ಯಕ್ಷ ಹಾಗೂ ವಿ.ವಿ.ಸಿ.ಇ. ಪ್ರೋ.ಡಾ. ಮೊಹನ ಕೃಷ್ಣ.ಎಸ್.ಎ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿ ಕಾರ್ಯಕ್ರಮದ ಧ್ಯೇಯೊದ್ದೇಶದ ಬಗ್ಗೆ ತಿಳಿಸಿದರು. ಪ್ರೊ. ಅಮೃತ .ಇ. ವಂದನಾರ್ಪಣೆ ಮಾಡಿದರು.