ಮನೆ ಸ್ಥಳೀಯ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಕುರಿತು ತರಬೇತಿ ಕಾರ್ಯಾಗಾರ

ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಕುರಿತು ತರಬೇತಿ ಕಾರ್ಯಾಗಾರ

0

ಮೈಸೂರು: ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮೂರು ತಂಡಗಳಾಗಿ ಜಿಲ್ಲಾ ಪಂಚಾಯತ್‌ ನ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲ್ಲೂಕುಗಳು, ಹೆಗ್ಗಡದೇವನಕೋಟೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹೆಗ್ಗಡದೇವನಕೋಟೆ, ಸರಗೂರು ಮತ್ತು ಹುಣಸೂರು ತಾಲ್ಲೂಕುಗಳು ಹಾಗೂ ಕೃಷ್ಣರಾಜನಗರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೃಷ್ಣರಾಜನಗರ, ಸಾಲಿಗ್ರಾಮ ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ Field Test Kit (FTK) ಮೂಲಕ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಕುರಿತು ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.

Join Our Whatsapp Group

ಕಾರ್ಯಾಗಾರವನ್ನು ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಕೆ.ಎಂ. ಗಾಯಿತ್ರಿರವರು ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಿಂದ ಚಾಲನೆ ನೀಡಿದರು.

 ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷಿಸಿ ಸಾರ್ವಜನಿಕರಿಗೆ ಶುದ್ಧ-ಸುರಕ್ಷಿತ ನೀರನ್ನು ಪೂರೈಸುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ.  ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಬರುವ ಎಲ್ಲಾ ನೀರಿನ ಮೂಲಗಳನ್ನು ಪರೀಕ್ಷಿಸಲು, OHT ಗಳನ್ನು ಮತ್ತು ನೀರಿನ ತೊಂಬೆಗಳನ್ನು ಕಾಲಕಾಲಕ್ಕೆ ಶುಚಿಗೊಳಿಸಿ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಲು ಹಾಗೂ ನೀರಿನ ಮಾದರಿಗಳನ್ನು ಪರೀಕ್ಷಿಸಿದ ವರದಿಯನ್ನು WQMIS ಪೋರ್ಟಲ್ ನಲ್ಲಿ ಅಪಲೋಡ್‌ ಮಾಡಲು ಸೂಚನೆ ನೀಡಿದರು.

 WQMS ಟಾಸ್ಕ್ ಫೋರ್ಸ್ ಸಮಿತಿಯ ಜವಾಬ್ದಾರಿ ಮತ್ತು ಕಾರ್ಯವೈಖರಿಯ ಕುರಿತು ಸೂಚನೆ ನೀಡಿದರು.

ಸದರಿ ಕಾರ್ಯಾಗಾರಕ್ಕೆ ಹೆಗ್ಗಡದೇವನಕೋಟೆ ಮತ್ತು ಕೃಷ್ಣರಾಜನಗರದಲ್ಲಿ ನೆಡೆಯುತ್ತಿದ್ದ ಕಾರ್ಯಾಗಾರಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಡಿಯೋ ಸಂವಾದದ ಮುಖಾಂತರ ಸೂಚನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ರಂಜಿತ್ ಕುಮಾರ್ ಎ. ಎಸ್., ರವರು ಮಾತನಾಡಿ FTK Kit ಮತ್ತು H2S ಪರೀಕ್ಷೆಗಳನ್ನು ಬಳಸಿಕೊಂಡು ಗ್ರಾಮಗಳ ಹಂತದಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು ಮತ್ತು WQMIS ಪೋರ್ಟಲ್ ನಲ್ಲಿನ ವರದಿಗಳನ್ನು ಪರಿಶೀಲಿಸಿಕೊಳ್ಳುವ ಕುರಿತು Hands-on ತರಬೇತಿ ನೀಡಿದರು. ನಂತರ FTK Kit  ಮೂಲಕ ಕುಡಿಯುವ ನೀರಿನ ಮಾದರಿಗಳ ಪರೀಕ್ಷೆ ಮಾಡುವ ವಿಧಾನಗಳು ಮತ್ತು ಪರೀಕ್ಷೆಯ ನಂತರ ಕೈಗೊಳ್ಳಬೇಕಾಗಿರುವ ಚಟುವಟಿಕೆಯ ಕುರಿತು ಪ್ರಾಯೋಗಿಕವಾಗಿ  ಜಿಲ್ಲಾ ಪ್ರಯೋಗಾಲಯದ ಸಿಬ್ಬಂದಿಗಳು ತರಬೇತಿ ನೀಡಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ. ಕೃಷ್ಣರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ  ಕಾರ್ಯಪಾಲಕ ಅಭಿಯಂತರಾದ ರಂಜಿತ್ ಕುಮಾರ್ , ಜಿಪಂ ಉಪಕಾರ್ಯದರ್ಶ (ಆಡಳಿತ) ಸವಿತಾ, ಶ್ರೀಮತಿ ಮೇಘಲ, ಯೋಜನಾ ನಿರ್ದೇಶಕರು, ಶ್ರೀ ರುದ್ರೇಶ್, ಉಪ ನಿರ್ದೇಶಕರು ಹಾಗೂ ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಮೈಗ್ರೇನ್: ಭಾಗ ಎರಡು
ಮುಂದಿನ ಲೇಖನಕರ್ನಾಟಕವನ್ನ ಬರ್ಬಾದ್‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಮಾಡೆಲ್: ಬಿಜೆಪಿ ವಾಗ್ದಾಳಿ