ಬೆಂಗಳೂರು(Bengaluru): ರಾಜ್ಯ ಸರ್ಕಾರದ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸ್ ಇನ್ಸ್’ಪೆಕ್ಟರ್ (ಸಿವಿಲ್) ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
103 ಮಂದಿ ಪೊಲೀಸ್ ಇನ್ಸ್’ಪೆಕ್ಟರ್ ಗಳನ್ನು ತಕ್ಷಣದಿಂದ ಜಾರಿಗೆ ವರ್ಗಾವಣೆ ಮಾಡಲಾಗಿದೆ.
ಇದರಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಹಿತಿ ಇಲ್ಲಿದೆ.
ರಮೇಶ್ ಜಿ.ಎನ್. ಅವರನ್ನು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಿಂದ ಮೈಸೂರು ನಗರದ ಅಶೋಕ್ ಪುರಂ ಪೊಲೀಸ್ ಠಾಣೆಗೆ, ಮಹೇಶ್ ಬಿ ಅವರನ್ನು ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿ ವೃತ್ತದಿಂದ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಗೆ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಸವರಾಜ್ ಅವರನ್ನು ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿ ವೃತ್ತಕ್ಕೆ ವರ್ಗಾಯಿಸಲಾಗಿದೆ.
ಪುರುಷೋತ್ತಮ್ ಜಿ. ಅವರನ್ನು ಎಸಿಬಿಯಿಂದ ಮೈಸೂರು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ, ಅಜರುದ್ದೀನ್ ಅವರನ್ನು ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯಿಂದ ಚೆಸ್ಕಾಂ ಜಾಗೃತದಳ ಚಾಮರಾಜನಗರಕ್ಕೆ, ಲಕ್ಷ್ಮೀಕಾಂತ್ ಕೆ.ತಲವಾತ್ ಅವರನ್ನು ನಂಜನಗೂಡು ನಗರ ವೃತ್ತದಿಂದ ನರಸಿಂಹರಾಜ್ ಪೊಲೀಸ್ ಠಾಣೆಗೆ ಹಾಗೂ ಶ್ರೀಕಾಂತ್ ಆರ್. ಅವರನ್ನು ಸಾಲಿಗ್ರಾಮ ಪೊಲೀಸ್ ಠಾಣೆಯಿಂದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶದಲ್ಲಿದ್ದ ಶೇಖರ್ ಎಂ.ಎಲ್ ಅವರನ್ನು ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ, ಶಶಿಕುಮಾರ್ ವಿ.ಎಸ್. ಅವರನ್ನು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಿಂದ ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣೆಗೆ, ಗಂಗಾಧರ್ .ಎಸ್ ಅವರನ್ನು ಮೈಸೂರು ಪಿ.ಟಿ.ಎಸ್ ನಿಂದ ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.