ಮನೆ ರಾಜ್ಯ ರಾಜ್ಯದಲ್ಲಿ 108 ಪೊಲೀಸ್ ಇನ್ಸ್’ಪೆಕ್ಟರ್’ಗಳ ವರ್ಗಾವಣೆ: ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ

ರಾಜ್ಯದಲ್ಲಿ 108 ಪೊಲೀಸ್ ಇನ್ಸ್’ಪೆಕ್ಟರ್’ಗಳ ವರ್ಗಾವಣೆ: ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ

0

ರಾಜ್ಯ ಸರ್ಕಾರ 108 ಪೊಲೀಸ್ ಇನ್ಸ್’ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯು ರಾಜ್ಯ ಗುಪ್ತವಾರ್ತೆ, ಸಿಐಡಿ, ಕರ್ನಾಟಕ ಲೋಕಾಯುಕ್ತ ಸೇರಿದಂತೆ ವಿವಿಧ ಪೊಲೀಸ್ ಇನ್ಸ್’ಪೆಕ್ಟರ್’ಗಳನ್ನು ವರ್ಗಾವಣೆಗೊಳಿಸಿದೆ.

ಸಿಸಿಬಿ, ಕೆಎಸ್’ಆರ್’ಪಿಟಿಎಸ್, ಸಿಇಎನ್, ಸೈಬರ್ ಕ್ರೈ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್’ಗಳನ್ನು ಎತ್ತಂಗಡಿ ಮಾಡಿ ಆದೇಶಿಸಿದ್ದಾರೆ.

ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ

ಬೆಂಗಳೂರು ನಗರದಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಕೆಲ ಅಧಿಕಾರಿಗಳನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ.ಹರೀಶ್ ಕುಮಾರ್ ಕೆ ಅವರಿಗೆ ಬಿಬಿಎಂಪಿಯ ವಿಶೇಷ ಆಯುಕ್ತ (ಆಡಳಿತಾಧಿಕಾರಿ) ಆಗಿ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿದ್ದ ಸಂಗಪ್ಪ ಅವರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಆದೇಶಿಸಿದೆ.

ಮೈಸೂರು ಜಿಲ್ಲಾ ಪೊಲೀಸ್ ಸಿಬ್ಬಂದಿ ವರ್ಗಾವಣೆ ಮಾಹಿತಿ

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಯೋಗೇಶ್ .ಡಿ ಅವರನ್ನು ಮೈಸೂರು ನಗರ ಸಿದ್ದಾರ್ಥನಗರ ಪೊಲೀಸ್ ಠಾಣೆಗೆ, ಶಿವಮೊಗ್ಗ ಜಿಲ್ಲೆಯ ಕೃಷ್ಣಪ್ಪ ಕೆ.ವಿ ಅವರನ್ನು ಮೈಸೂರು ಜಿಲ್ಲೆ ಟಿ.ನರಸೀಪುರ ಪೊಲೀಸ್ ಠಾಣೆಗೆ, ಕೆಜಿಎಫ್ ಕಾಮಸಮುದ್ರ ವೃತ್ತದ ಆನಂದ್ ಕುಮಾರ್ ಜಿ.ಎನ್ ಅವರನ್ನು ಮೈಸೂರು ಜಿಲ್ಲೆಯ ತಲಕಾಡು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮೈಸೂರು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಬ್ಬೀರ್ ಹುಸೇನ್ ಅವರನ್ನು ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣೆಗೆ, ಉದಯಗಿರಿ ಪೊಲೀಸ್ ಠಾಣೆಯ ರಾಜು ಪಿ.ಕೆ.ಅವರನ್ನು ಸಿ.ಇ.ಎನ್ ಪೊಲೀಸ್ ಠಾಣೆಗೆ, ತಲಕಾಡು ಪೊಲೀಸ್ ಠಾಣೆಯ ಅರುಣ್  ಎಲ್ ಅವರನ್ನು ಮೈಸೂರು ನಗರದ ಕುವೆಂಪುನಗರ ಪೊಲೀಸ್ ಠಾಣೆಗೆ, ಮೈಸೂರು ಪಿಟಿಎಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ಎಸ್ ಮೈಸೂರು ನಗರ ಮಂಡಿ ಪೊಲೀಸ್ ಠಾಣೆಗೆ, ಚನ್ನಪಟ್ಟಣ ಗ್ರಾಮಾಂತರ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಟಿ.ಬಿ ಅವರನ್ನು ಮೈಸೂರು ನಗರ ದೇವರಾಜ ಪೊಲೀಸ್ ಠಾಣೆಗೆ, ದೇವರಾಜ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವಾಕರ್.ಆರ್ ಅವರನ್ನು ಮೇಟಗಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

 ಮೈಸೂರು ಜಿಲ್ಲೆಯ ಸರಗೂರು ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆನಂದ ಎನ್ ಅವರನ್ನು ಬೆಂಗಳೂರು ನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ, ಮೈಸೂರಿನ ಕುವೆಂಪುನಗರದಲ್ಲಿ ಕಾರ್ಯಿರ್ವಹಿಸುತ್ತಿದ್ದ ಷಣ್ಮುಗ ವರ್ಮ ಕೆ. ಅವರನ್ನು ಮೈಸೂರಿನ ಪಿಟಿಎಸ್’ಗೆ, ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್ ಪಿ ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ, ಮೈಸೂರಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ಎಂ.ಆರ್. ಅವರನ್ನು ರಾಜ್ಯ ಗುಪ್ತವಾರ್ತೆಗೆ, ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಪ್ಪ ಎನ್.ಜಿ ಅವರನ್ನು ಕೊಡಗು ಜಿಲ್ಲೆ ಸಿಇಎನ್ ಪೊಲೀಸ್ ಠಾಣೆಗೆ,  ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಘು ಕೆ.ಆರ್ ಅವರನ್ನು ಮಂಡ್ಯ ಜಿಲ್ಲೆಯ ಡಿಎಸ್’ಬಿ ಗೆ ವರ್ಗಾವಣೆ ಮಾಡಲಾಗಿದೆ.

ಹಿಂದಿನ ಲೇಖನಡಿಆರ್’ಡಿಓ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮೈಸೂರಿನ ಉದ್ಬೂರು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ: ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ದಲಿತ ಸಂಘಟನೆಗಳ ಒಕ್ಕೂಟ ಮನವಿ