ಮನೆ ರಾಷ್ಟ್ರೀಯ ಸಿಬಿಐ ದಾಳಿ ಬೆನ್ನಲ್ಲೇ 12 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸಿಬಿಐ ದಾಳಿ ಬೆನ್ನಲ್ಲೇ 12 ಐಎಎಸ್ ಅಧಿಕಾರಿಗಳ ವರ್ಗಾವಣೆ

0

ನವದೆಹಲಿ(Newdelhi): ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಮನೆಯ ಮೇಲೆ ಸಿಬಿಐ ದಾಳಿ ಬೆನ್ನಲ್ಲೇ  12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಆದೇಶವನ್ನು ಹೊರಡಿಸಲಾಗಿದೆ.

ಹೊಸ ಅಬಕಾರಿ ನೀತಿ ಪ್ರಕರಣದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯ ಅವರ ಮನೆ ಸೇರಿದಂತೆ ಒಟ್ಟು 22 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.

ಇದಾದ ಕೆಲವೇ ಗಂಟೆಗಳಲ್ಲಿ ಆಡಳಿತಾತ್ಮಕ ಪುನರ್ ರಚನೆಗೆ ಕೈ ಹಾಕಲಾಗಿದ್ದು, ಐಎಎಸ್ ಅಧಿಕಾರಿಗಳನ್ನು ಹಲವು ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ 12 ಅಧಿಕಾರಿಗಳು 

ಜಿತೇಂದ್ರ ನಾರಾಯಣ್,

ಅನಿಲ್ ಕುಮಾರ್ ಸಿಂಗ್,

ವಿವೇಕ್ ಪಾಂಡೆ,

ಶುರ್ಬೀರ್ ಸಿಂಗ್,

ಗರಿಮಾ ಗುಪ್ತಾ,

ಮಾಧೋರಾವ್ ಮೋರ್,

ಉದಿತ್ ಪ್ರಕಾಶ್ ರೈ,

ವಿಜೇಂದ್ರ ಸಿಂಗ್ ರಾವತ್,

ಕ್ರಿಶನ್ ಕುಮಾರ್,

ಕಲ್ಯಾಣ್ ಸಹಾಯ್ ಮೀನಾ,

ಸೋನಾಲ್ ಸ್ವರೂಪ

ಹೇಮಂತ್ ಕುಮಾರ್

ಹಿಂದಿನ ಲೇಖನ26/11ರ ಮಾದರಿ ಮುಂಬೈ ಮೇಲೆ ದಾಳಿ ನಡೆಸುವ ಬಗ್ಗೆ ಸಂದೇಶ ರವಾನೆ: ಬಿಗಿ ಭದ್ರತೆ
ಮುಂದಿನ ಲೇಖನರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ದಾಖಲೆ ಸಲ್ಲಿಸಿದ ಸಾರಾ.ಮಹೇಶ್