ಮನೆ ಕಾನೂನು ರಾಜ್ಯದ 25 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್...

ರಾಜ್ಯದ 25 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್ ನೇಮಕ

0

ಬೆಂಗಳೂರು:  ರಾಜ್ಯದ 25 ಐಪಿಎಸ್‌ ಅಧಿಕಾರಿಗಳನ್ನು ನಾನಾ ಕಡೆಗಳಿಗೆ ವರ್ಗಾವಣೆ  ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Join Our Whatsapp Group

ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್ ಅವರನ್ನು ದಾವಣಗೆರೆ ಪೂರ್ವ ಶ್ರೇಣಿ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್(ಡಿಐಜಿಪಿ) ಆಗಿ ನೇಮಕ ಮಾಡಲಾಗಿದೆ. ಸೀಮಾ ಲಾಟ್ಕರ್ ಅವರನ್ನು ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಮೈಸೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ಎನ್ ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ:

ಲಾಭೂರಾಮ್ : ಐಜಿಪಿ ಕೇಂದ್ರ ವಲಯ

ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)

ಡಾ.ಕೆ ತ್ಯಾಗರಾಜನ್ : ಐಜಿಪಿ ,ಐಎಸ್ ಡಿ.

ಎನ್ ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.

ರೇಣುಕಾ ಸುಕುಮಾರ್ : ಎಐಜಿಪಿ ( ಡಿಜಿ ಕಛೇರಿ)

ಸಿಕೆ ಬಾಬಾ: ಎಸ್‌ಪಿ ಬೆಂಗಳೂರು ಗ್ರಾಮಾಂತರ.

ಸುಮನ್ ಡಿ ಪೆನ್ನೆಕರ್ : ಎಸ್ ಪಿ , ಬಿಎಂಟಿಎಫ್.

ಸಿ.ಬಿ ರಿಷ್ಯಂತ್: ಎಸ್ ಪಿ ವೇರ್ ಲೆಸ್ .

ಚನ್ನಬಸವಣ್ಣ : ಎಐಜಿಪಿ, (ಆಡಳಿತ ) ಡಿಜಿ ಕಛೇರಿ.

ನಾರಾಯಣ್ ಎಂ, : ಎಸ್ ಪಿ ಉತ್ತರ ಕನ್ನಡ.

ಸಾರ ಫಾತಿಮಾ: ಡಿಸಿಪಿ ಆಗ್ನೇಯ ವಿಭಾಗ , ಬೆಂಗಳೂರು ನಗರ

ಅರುಣಾಂಗ್ಷು ಗಿರಿ : ( Arunngshu giri ) SP ,CID

ನಾಗೇಶ್ ಡಿ ಎಲ್ : ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ .

ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ.

ಪ್ರದೀಪ್ ಗುಂಟಿ: ಎಸ್ ಪಿ ಬೀದರ್ ಜಿಲ್ಲೆ.

ಯತೀಶ್ ಎನ್ : ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ.

ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಮಂಡ್ಯ ಜಿಲ್ಲೆ.

ಡಾ ಶೋಭಾ ರಾಣಿ ವಿ.ಜೆ. ಎಸ್ ಪಿ .ಬಳ್ಳಾರಿ ಜಿಲ್ಲೆ.

ಡಾ ಕವಿತಾ ಟಿ: ಎಸ್ ಪಿ ಚಾಮರಾಜನಗರ ಜಿಲ್ಲೆ.

ನಿಖಿಲ್ ಬಿ : ಎಸ್ ಪಿ ಕೋಲಾರ ಜಿಲ್ಲೆ.

ಕುಶಾಲ್ ಚೌಕ್ಸಿ : ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.

ಮಹಾನಿಂಗ್ ನಂದಗಾವಿ ಡಿಸಿಪಿ ( ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ