ಮೈಸೂರು : ಕರ್ನಾಟಕ ಪೊಲೀಸ್ ಸಿಬ್ಬಂದಿ ಮಂಡಳಿಯ ನಿರ್ಣಯದಂತೆ ಆಡಳಿತಾತ್ಮಕ ಕಾರಣದಿಂದ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ 35 ಮಂದಿ ಪೊಲೀಸ್ ಇನ್ಸ್ ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಡಿಜಿ ಮತ್ತು ಐಜಿಪಿ ಪರವಾಗಿ ಸೌಮೆಂದು ಮುಖರ್ಜಿ ಆದೇಶ ಹೊರಡಿಸಿದ್ದಾರೆ.
ಏನ್. ವಿ. ಮಹೇಶ್ ಮಂಡ್ಯ ಜಿಲ್ಲೆಯ ಕೆರಗೋಡು ವೃತ್ತಕ್ಕೆ, ಎಚ್. ಏನ್. ಯೋಗಾಂಜನಪ್ಪ ಮೈಸೂರು ಜಿಲ್ಲೆ ಮಹಿಳಾ ಠಾಣೆಗೆ, ಬಿ.ಜಿ. ಪ್ರಕಾಶ್ ರವರು ಕೊಡಗು ಜಿಲ್ಲೆ ಕುಶಾಲನಗರ ಠಾಣೆಗೆ, ಎಸ್.ಆರ್. ಸಿದ್ದಪ್ಪ ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
Saval TV on YouTube