ಮನೆ ರಾಜಕೀಯ ವರ್ಗಾವಣೆ ದಂಧೆ,ಹೆಚ್‌ಡಿಕೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ:ಸುಮಲತಾ

ವರ್ಗಾವಣೆ ದಂಧೆ,ಹೆಚ್‌ಡಿಕೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ:ಸುಮಲತಾ

0

Join Our Whatsapp Group

ಮದ್ದೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಂಸದೆ ಸುಮಲತಾಅಂಬರೀಷ್ ಆರೋಪಿಸಿದರು.

ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ೫ ಲಕ್ಷ.ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅನಾವರಣಗೊಳಿಸಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ವರ್ಗಾವಣೆ ದಂಧೆ ಬಗ್ಗೆ ಮಾತನಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ಅಪರಾಧಗಳಿದ್ದರೂ ಪೊಲೀಸ್ ಮತ್ತು ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವುದು ಸೂಕ್ತವಾಗಿದ್ದು ಬರಿ ಬಾಯಿ ಮಾತಿನಲ್ಲಾಡುವುದು ಸರಿಯಾದ ಕ್ರಮವಲ್ಲವೆಂದರು.

ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಕಾಂಗ್ರೆಸ್ ನವರು ೪೦ ಪರ್ಸೆಂಟ್ ಸರ್ಕಾರವೆಂದು ಆರೋಪಿಸಿರುವ ಉದಾಹರಣೆಗಳಿದ್ದು ಆದರೆ ಇದುವರೆವಿಗೂ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿರುವುದಿಲ್ಲ ಅದರಂತೆಯೇ ಎಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆಗೆ ೧೦ ಕೋಟಿ ಮತ್ತು ಪೆನ್‌ಡ್ರೈವ್ ಇದೆ ಎಂಬುದಷ್ಟೇ ಹೇಳುತ್ತಿದ್ದು ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲವೆಂದರು.

ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡುವ ಮೂಲಕ ಸರ್ಕಾರದ ವೈಪಲ್ಯಗಳನ್ನು ಎತ್ತಿ ಹಿಡಿಯಬೇಕೇ ಹೊರತೆ ಕೇವಲ ಬರಿ ಬಾಯಿ ಮಾತಲ್ಲಾಡುವುದು ಸೂಕ್ತವಲ್ಲವೆಂದರು.

ಮೈಸೂರು, ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ತಾವೂ ಸಹ ಸಂಬಂಧಿಸಿದ ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ್ದು ಚಾಲಕರ ಅಜಾಗರೂಕತೆ ಮತ್ತು ಸ್ಥಳೀಯ ಜನರಿಂದಲೂ ಹಲವಾರು ತೊಂದರೆಗಳು ಕಂಡು ಬಂದಿದ್ದು ಈಗಾಗಲೇ ರಸ್ತೆಗೆ ಅಳವಡಿಸಿದ್ದ ಪ್ರೆನ್ಸ್ಗಳನ್ನು ಕಿತ್ತು ಹಾಕಿದ್ದು ಪಾದಚಾರಿಗಳು ಎಲ್ಲೆಂದರಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದರು.

ಹೆದ್ದಾರಿ ಪ್ರಾಧೀಕಾರವು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಹಲವಾರು ಅದ್ವಾನಗಳಿಗೆ ಕಾರಣವಾಗಿದ್ದು ಇದುವರೆವಿಗೂ ಚರಂಡಿ. ರಸ್ತೆ ಡಾಂಬರೀಕರಣ, ವಿದ್ಯುತ್ ದೀಪ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವ ಬಗೆಯೂ ಚರ್ಚೆ ನಡೆಸಿದ್ದು ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೂ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ :

ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ೫ ಲಕ್ಷ.ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟನವನ್ನು ಸಂಸದೆ ಸುಮಲತಾಅಂಬರೀಷ್ ಅನಾವರಣಗೊಳಿಸಿ ಸ್ಥಳೀಯ ಸಾರ್ವಜನಿರಕರು ಇದರ ಸದುಪಯೋಗಕ್ಕೆ ಮುಂದಾಗಬೇಕೆಂದರು.

ಈ ವೇಳೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್. ಮೋಹನ್‌ಕುಮಾರ್,ಗ್ರಾ.ಪಂ. ಸದಸ್ಯರಾದ ಇಂದ್ರಮ್ಮ, ಸಿದ್ದಮ್ಮ, ಸ್ವಾಮಿ, ಚೇತನ್, ಮುಖಂಡರಾದ ಡಿ.ಸಿ. ಸುರೇಶ್, ಸಿದ್ದರಾಜು,ಸಿದ್ದಪ್ಪ, ಸಣ್ಣಯ್ಯ ಇತರರಿದ್ದರು.