ಮನೆ ಕಾನೂನು ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಜಪ್ತಿ

ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಜಪ್ತಿ

0

ಪಾಂಡವಪುರ:ಸಾರಿಗೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೋರ್ಟ್ ಆದೇಶಿಸಿದ ಪರಿಹಾರದ ಹಣವನ್ನು ನೀಡದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಜಪ್ತಿ ಮಾಡುವಂತೆ ಪಟ್ಟಣದ ಸಿವಿಲ್ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸಾರಿಗೆ ಬಸ್ ಜಪ್ತಿಮಾಡಲಾಯಿತು.

Join Our Whatsapp Group


ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಕೆಎ-೧೧, ಎಫ್-೦೨೮೧ ಸಾರಿಗೆ ಬಸ್‌ನ್ನು ಕೋರ್ಟ್ನ ಅಧಿಕಾರಿಗಳು ಜಪ್ತಿ ಮಾಡಿ ಕೋರ್ಟ್ ಬಳಿ ತೆಗೆದುಕೊಂಡು ಹೋಗಿ ನಿಲ್ಲಿಸಲಾಯಿತು.
೨೦೧೭ರಲ್ಲಿ ತಾಲೂಕಿನ ಚಿನಕುರಳಿ ಗ್ರಾಮದ ನಿವಾಸಿ ಜಯಮ್ಮ ಎಂಬುವರ ಪುತ್ರ ಮೊಗ್ಗಣ್ಣ ಎಂಬುವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸಾರಿಗೆ ಬಸ್ ಡಿಕ್ಕಿಹೊಡೆದು ಮೊಗ್ಗಣ್ಣ ಸಾವನ್ನಪ್ಪಿದ್ದ,ಈ ಪ್ರಕರಣ ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.ಮೃತ ಮೊಗಣ್ಣ ಅವರ ಪರವಾಗಿ ತಾಯಿ ಜಯಮ್ಮ ಅರ್ಜಿದರರಾಗಿದ್ದು,ಮೃತವ್ಯಕ್ತಿಯ ಪರವಾಗಿ ವಕೀಲ ಕೆ.ಕಾಳೇಗೌಡ ಅವರು ವಾದಮಂಡಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆದು ೨೦೨೧ರಲ್ಲಿ ಪ್ರಕರಣ ಇತ್ಯರ್ಥವಾಗಿತ್ತು,ಮೃತ ವ್ಯಕ್ತಿಗೆ ಸಾರಿಗೆ ಇಲಾಖೆ ೧೮ ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.ಪರಿಹಾರ ೧೮ ಲಕ್ಷ ಹಾಗೂ ಬಡ್ಡಿ ಹಣ ಸೇರಿ ಒಟ್ಟು ೨೪,೨೧,೬೦೨ ನೀಡಬೇಕಾಗಿತ್ತು. ಆದೇಶವಾಗಿ ಇಷ್ಟು ವರ್ಷವಾದವರು ಸಹ ೮ ಲಕ್ಷ ಮಾತ್ರ ಪರಿಹಾರ ಹಣ ನೀಡಿ ಉಳಿಕೆ ಹಣವನ್ನು ನೀಡಿರಲಿಲ್ಲ.ಕೋರ್ಟ್ ಆದೇಶಿಸಿದ್ದರೂ ಸಹ ಎರಡು ವರ್ಷವಾದರೂ ಸಹ ಪರಿಹಾರ ಹಣವನ್ನು ಪಾವತಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹಿರಿಯ ಧರ್ಜೆ ಸಿವಿಲ್ ನ್ಯಾಯಾಧೀಶರಾದ ಮಂಜುನಾಥ್ ಅವರು ಸಾರಿಗೆ ಬಸ್‌ನ್ನು ಜಪ್ತಿ ಮಾಡುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ಕೆ.ಕಾಳೇಗೌಡರ ಜತೆಯಲ್ಲಿ ನ್ಯಾಯಾಲಯದ ಅಧಿಕಾರಿಗಳಾದ ಎಂ.ಸೂರ್ಯನಾರಾಯಣ, ಎಂ.ಪಿ.ತ್ರಿವೇಣಿ, ಜಿ.ಮನೋಹರ್, ಎಸ್.ಡಿ.ಆನಂದ್ ಅವರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎ-೧೧, ಎಫ್-೦೨೮೧ ಸಾರಿಗೆ ಬಸ್‌ನ್ನು ಜಪ್ತಿ ಮಾಡಿದ್ದಾರೆ.