ಮನೆ ರಾಜ್ಯ ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ; ಮುಷ್ಕರ ಕೈಬಿಡುವಂತೆ ಮನವಿ – ಡಿಕೆಶಿ

ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ; ಮುಷ್ಕರ ಕೈಬಿಡುವಂತೆ ಮನವಿ – ಡಿಕೆಶಿ

0

ಬೆಂಗಳೂರು : ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆಯವರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ಮುಷ್ಕರ ಕೈಬಿಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣಾ ವೀಕ್ಷಕರಾಗಿ ಬೆಂಗಳೂರಿನಿಂದ ಅಸ್ಸಾಂಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಅದಕ್ಕೆ ಅವ್ರು ಖುಷಿ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆಯವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರಲ್ಲಿ ಕಸದ ಸಮಸ್ಯೆ ವಿಚಾರವಾಗಿ ಮಾತನಾಡಿ, ಯಾರು ಕಸ ಹಾಕಲು ಬಿಡಲ್ಲ ಅವರ ಕ್ಷೇತ್ರದಲ್ಲಿ ಕಸ ಎತ್ತಿಸಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಕಸ ಡಂಪ್ ಮಾಡಿಸಲು ಕಾಲು ಮುಗಿಯುವುದಕ್ಕೆ ಆಗುತ್ತಾ? ಕಸ ಎಲ್ಲಾದ್ರೂ ಹಾಕಬೇಕಾಲ್ವಾ, ಎಲ್ಲಿ ಹಾಕಬೇಕು. ಮೊದಲಿನಿಂದಲೂ ಎಲ್ಲಿ ಸಂಪ್ರದಾಯದಂತೆ ಹಾಕ್ತಿವೋ ಅಲ್ಲಿ ಹಾಕ್ತಿವಿ. ಡೆವೆಲಪ್ಮೆಂಟ್‌ಗೆ ಸಾಕಷ್ಟು ಹಣ ಕೊಟ್ಟಿದ್ದೀವಿ. ಹೆಚ್ಚಿಗೆ ಕೇಳಿದ್ರೆ ಎಷ್ಟು ಅಂತ ಕೊಡುವುದಕ್ಕೆ ಆಗುತ್ತದೆ? ಅವರು ಅರ್ಥ ಮಾಡಿಕೊಳ್ಳಬೇಕು, ಲಾರಿಗಳು ಎಲ್ಲಿ ಹೋಗ್ತಾವೆ.

ಬೇರೆ ಕಡೆ ನಾಲ್ಕು ಡಂಪಿಂಗ್ ಯಾರ್ಡ್ ಮಾಡಲು ಶಾಶ್ವತವಾಗಿ ಜಾಗ ನೋಡ್ತಿದ್ದೀವಿ. ಎರಡು ಕಡೆ ಜಾಗ ಫೈನಲ್ ಆಗಿದೆ. ಇದೆಲ್ಲ ಯಾರ ಕಸ? ಜನರ ಕಸ ಅಲ್ವಾ ಎಂದು ಗರಂ ಆದರು. ಅಸ್ಸಾಂ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ದೆಹಲಿಯಲ್ಲಿ ಮೂರ್ನಾಲ್ಕು ಬಾರಿ ಸಭೆ ಆಗಿದೆ. ಚುನಾವಣೆಗೆ ಏನು ಸ್ಟ್ರಾಟಜಿ ಮಾಡಬೇಕು ಈಗಾಗಲೇ ಮಾಡಿದ್ದೇವೆ. ಈ ಬಾರಿ ಅಸ್ಸಾಂನಲ್ಲಿ ಭಾರೀ ಬದಲಾವಣೆ ಆಗುತ್ತೆ. ಕಮಾಕ್ಯ ದೇವಸ್ಥಾನಕ್ಕೂ ಭೇಟಿ ಕೊಟ್ಟು ದೇವರ ದರ್ಶನ ಮಾಡ್ತೇನೆ. ಎರಡು ದಿನ ಅಲ್ಲೆಲ್ಲಾ ಓಡಾಡ್ಕೊಂಡು ಬರ್ತೇನೆ ಎಲ್ಲಾ ನಾಯಕರ ಜೊತೆ ಇರ್ತೇನೆ ಎಂದು ತಿಳಿಸಿದರು.