ನವದೆಹಲಿ(New Delhi): ಇದೇ ಮೊದಲ ಬಾರಿಗೆ ಬಸ್ ಗಳನ್ನು ಬೇರೊಂದು ರಾಜ್ಯಕ್ಕೆ ರೈಲುಗಳಲ್ಲಿ ರವಾನಿಸುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಹೊಸ ಮೈಲಿಗಲ್ಲನ್ನು ಸೃಷ್ಠಿಸಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಮೊದಲ ಬಾರಿಗೆ ಪ್ರಯಾಣಿಕರ ಬಸ್ ಗಳನ್ನು ಸಾಗಿಸಲಾಗುತ್ತಿದೆ. ಈ ಮೂಲಕ ಭಾರತೀಯ ರೈಲ್ವೆ ಸರಕು ಸಾಗಣೆಯ ಹೊಸ ಉಪ ಯೋಜನೆಗೆ ಮುಂದಾಗಿದೆ ಎಂದು ಹೇಳಿದೆ.
ಈ ಸಂಬಂಧ ವಿಡಿಯೋವೊಂದನ್ನು ರೈಲ್ವೆ ಬಿಡುಗಡೆ ಮಾಡಿದ್ದು, ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಳಕೆಗಾಗಿ ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಅಶೋಕ್ ಲೇಲ್ಯಾಂಡ್ ಬಸ್ ಗಳನ್ನು ಭಾರತೀಯ ರೈಲ್ವೆ ಮೂಲಕ ರವಾನೆ ಮಾಡಲಾಗುತ್ತಿದೆ.
ಈ ಕುರಿತು ರೈಲ್ವೆ ಅಶ್ವಿನಿ ವೈಷ್ಣವ್ ಕೂಡಾ ಟ್ವೀಟ್ ಮಾಡಿದ್ದು, ಮೊದಲ ಬಾರಿಗೆ ಪ್ರಯಾಣಿಕರ ಬಸ್ ಗಳನ್ನು ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.