ಗುಂಡ್ಲುಪೇಟೆ: ಆಟೋದಲ್ಲಿ ಎರಡು ಕರುಗಳನ್ನು ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ತೆರಕಣಾಂಬಿ ಪೆÇಲೀಸರು ಜಾನುವಾರುಗಳ ಸಮೇತ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಕೊತ್ತಲವಾಡಿ ರಸ್ತೆಯ ಕುಂಬೇಶ್ವರ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಚಾಮರಾಜನಗರದ ಸೈಯದ್ ಮೆಹಬೂಬ್ ಪಾಷಾ(33) ಬಂಧಿತ ಆರೋಪಿ.
ಈತ ತೆರಕಣಾಂಬಿ ಸಂತೆಯಿಂದ ಎರಡು ಕರುಗಳನ್ನು ಕೊತ್ತಲವಾಡಿ ಮಾರ್ಗವಾಗಿ ಕಸಾಯಿಖಾನೆಗೆ ಆಟೋದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಸಬ್ ಇನ್ಸ್ ಪೆಕ್ಟರ್ ಈಶ್ವರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವ ಜೊತೆಗೆ ಆಟೋ ಹಾಗೂ ಎರಡು ಕರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಈ ಕುರಿತು ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ ಐ ನಂಜುಂಡಸ್ವಾಮಿ ಸೇರಿದಂತೆ ಪೊಲೀಸ್ ಪೇದೆಗಳು ಭಾಗವಹಿಸಿದ್ದರು.