ಮನೆ ಅಪರಾಧ ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಗಾಳ: ಬ್ಲಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದ ಆರೋಪಿ ಬಂಧನ 

ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಗಾಳ: ಬ್ಲಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದ ಆರೋಪಿ ಬಂಧನ 

0

ಮೈಸೂರು(Mysuru): ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರೊಂದಿಗೆ ಬಣ್ಣದ ಮಾತುಗಳನ್ನಾಡಿ ಲೈಂಗಿಕವಾಗಿ ಬಳಸಿಕೊಂಡು ಹಣ ಕೀಳುತ್ತಿದ್ದ ಆರೋಪಿಯನ್ನು ಮೈಸೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಗುರುಸಿದ್ದಪ್ಪ ಪುತ್ರ ಶಿವಪ್ರಕಾಶ್ ಬಿ.ಜಿ. ಬಂಧಿತ ಆರೋಪಿ. ಈತ ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ಯುವತಿಯರನ್ನು  ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ ಈ ಆರೋಪಿ ಬಲೆಗೆ ಬೀಳುವ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು, ಅವರಿಗೆ ತಿಳೊಯದಂತೆ ವಿಡಿಯೋ ಮಾಡಿಟ್ಟುಕೊಂಡು ಹಣ ಕೀಳುತ್ತಿದ್ದ.

ಈ ನಡುವೆ ಮೈಸೂರು ಮೂಲದ ಯುವತಿಯ ಜೊತೆ  ಶಿವಪ್ರಕಾಶ್ ಸ್ನೇಹ, ಪ್ರೀತಿ, ನಾಟಕ‌ವಾಡಿ, ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷದವರೆಗೆ ಹಣ ಪಡೆದಿದ್ದನು. ಇದರಿಂದ ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸರು ಆರೋಪಿ ಶಿವಪ್ರಕಾಶ್ ನನ್ನು ಬಂಧಿಸಿದ್ದಾರೆ.

ನಂತರ ಆರೋಪಿಯ ಫೋನ್ ನೋಡಿದ ಪೊಲೀಸರಿಗೆ ಶಾಕ್ ಆಗಿದ್ದು, ಆತನ ಮೊಬೈಲ್ ನಲ್ಲಿ ಸಾಕಷ್ಟು ಮಂದಿ ಹುಡುಗಿಯರ ಫೋಟೊ ಮತ್ತು ವಿಡಿಯೋ ಅಸಭ್ಯ ಚಾಟ್ ದೊರೆತಿದೆ. ಪೊಲೀಸರು ಆರೋಪಿಯ ವಿಚಾರಣೆಯನ್ನು ಮುಂದುವರೆಸಿದ್ದಾರೆ.