ಮನೆ ಕಾನೂನು ವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್; 40 ಕ್ಕೂ ಹೆಚ್ಚು ವಾಹನಗಳು ಸೀಜ್, 200ಕ್ಕೂ ಹೆಚ್ಚು ಕೇಸ್ ದಾಖಲು

ವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್; 40 ಕ್ಕೂ ಹೆಚ್ಚು ವಾಹನಗಳು ಸೀಜ್, 200ಕ್ಕೂ ಹೆಚ್ಚು ಕೇಸ್ ದಾಖಲು

0

ಬೆಂಗಳೂರು: ವೈಟ್ ಬೋರ್ಡ್​ನಲ್ಲಿ ಅನಧಿಕೃತವಾಗಿ ಸಂಚಾರ ಮಾಡ್ತಿದ್ದ ಬಿಎಂಡಬ್ಲೂ, ವೋಲ್ವೋ, ಎಲೆಕ್ಟ್ರಿಕ್ ಬಿವೈಡಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ವಾಹನಗಳನ್ನು ಆರ್​ಟಿಓ  ಅಧಿಕಾರಿಗಳು ಸೀಜ್ ಮಾಡಿದ್ದಾರೆ.

Join Our Whatsapp Group

ಆ್ಯಪ್​ಗಳ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತ ಆರ್​ಟಿಓ ಅಧಿಕಾರಿಗಳು ಇನ್ನೂರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ.

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಹತ್ತು ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಆರ್​ಟಿಓ ಅಧಿಕಾರಿಗಳು, ತೆರಿಗೆ ಕಟ್ಟದ, ವಾಹನಗಳ ಮೇಲೆ ಅನಧಿಕೃತವಾಗಿ ಅಡ್ವರ್ಟೈಸ್ಮೆಂಟ್ ಹಾಕಿದ, ಹೆಚ್ಚುವರಿ ಲೈಟ್ಸ್, ಬಸ್ ಮೇಲೆ ಹೆವಿ ಲೋಡ್ ಸೇರಿದಂತೆ ಎಲ್ಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಸಾಕಷ್ಟು ಕಾರು ಮಾಲೀಕರು ತಮ್ಮ ವೈಟ್ ಬೋರ್ಡ್ ಕಾರುಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಅಂತಹ ವಾಹನಗಳನ್ನು ಸೀಜ್ ಮಾಡಲು ಆರ್ ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

ಹಿಂದಿನ ಲೇಖನಮೈಸೂರು: 23 ಸ್ಥಳಗಳಲ್ಲಿ 50 ಎಐ ಕ್ಯಾಮೆರಾ ಅಳವಡಿಕೆ- ನಿಯಮ ಉಲ್ಲಂಘಿಸಿದರೆ ದಂಡ
ಮುಂದಿನ ಲೇಖನವಾಲ್ಮೀಕಿ ನಿಗಮ ಅವ್ಯವಹಾರ ತನಿಖೆ ಸಿಬಿಐಗೆ ವಹಿಸಲಿ: ಶ್ರೀರಾಮುಲು