ಮೈಸೂರು: ಅನಸ್ತೇಶಿಯಾ ಸ್ಪೆಷಲಿಸ್ಟ್ ಅಲ್ಲದಿದ್ದರೂ ಚಿಕಿತ್ಸೆ ನೀಡಿದ್ದ ಆದಿತ್ಯ ಅಧಿಕಾರಿ ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ಮತ್ತು ಇತರೆ ವೈದ್ಯರಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ.
2017ರಲ್ಲಿ ಯಾದವಗಿರಿ ನಿವಾಸಿ ಬಿ.ಶಿವಣ್ಣ ಎಂಬುವವರು ಅನಾರೋಗ್ಯದಿಂದ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಬಿ.ಶಿವಣ್ಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ 26-7-2017ರಲ್ಲಿ ಶಿವಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಸಂಬಂಧ ಬಿ.ಶಿವಣ್ಣ ಅವರ ತಮ್ಮನ ಮಗ ಕೆ.ರವಿ ಎಂಬುವವರು ಶಿವಣ್ಣ ಅವರ ಪುತ್ರಿ ಸುಧಾ ಅವರ ಪರವಾಗಿ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು . ಡಾ. ಚಂದ್ರಶೇಖರ್ ಅವರು ಅನಸ್ತೇಶಿಯ ಸ್ಪೆಷಲಿಸ್ಟ್ ಅಲ್ಲದಿದ್ದರೂ, ಸುಮಾರು 40 ವರ್ಷದಿಂದಲೂ ಅನಸ್ತೇಶಿಯ ಸ್ಪೆಷಲಿಸ್ಟ್ ಎಂದು ಹೇಳಿ ಚಿಕಿತ್ಸೆ ನೀಡಿರುವುದು ವಿಚಾರಣೆ ವೇಳೆ ಬಹಿರಂಗವಾಗುತ್ತದೆ.
ಈ ಸಂಬಂಧ ಕೆ.ರವಿ ಅವರು ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿ ಎಲ್ಲಾ ದಾಖಲೆಗಳನ್ನ ಒದಗಿಸಿ ಸ್ವತಃ ಅವರೇ ವಾದ ಮಂಡಿಸುತ್ತಾರೆ. ವಾದ ಆಲಿಸಿದ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಯು ಮೃತ ಬಿ.ಶಿವಪ್ಪ ಅವರ ಕುಟುಂಬಕ್ಕೆ ವೈದ್ಯರಾದ ಡಾ. ಚಂದ್ರಶೇಖರ್ ಮತ್ತು ಡಾ.ಟಿಎಸ್ ವಾಸನ್ 5 ಲಕ್ಷ ರೂ. , ಡಾ.ಹರಿದಾಸ್ ಉಪಾಧ್ಯ 1.50 ಲಕ್ಷ ರೂ. ಡಾ. ರವಿ 2 ಲಕ್ಷ ರೂ. ಸೇರಿ 15 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.