ಹೃದಯ ರೋಗಿಗಳಿಗೆ ಅನೇಕ ಪ್ರಕಾರದ ಚಿಕಿತ್ಸೆಗಳಿವೆ, ಎಂದಹ ಚಿಕಿತ್ಸೆ ಮಾಡಬೇಕೆನ್ನುವುದು ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ.
ಬಹಳ ಜನರಿಗೆ ಜೀವಶೈಲಿಯ ಬದಲಾಯಿಸಿಕೊಳ್ಳುವ ಮೂಲಕ,ಔಷಧಿಗಳ ಸೇವೆಯಿಂದ ಸರಿಪಡಿಸಲು ಪ್ರಯತ್ನಿಸಲಾಗುತ್ತದೆ. ರೋಗ ತೀವ್ರವಾಗಿರುವವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗುತ್ತದೆ.
ಆಕಸ್ಮಿಕವಾಗಿ, ಒಮ್ಮೆ ಹೃದಯದ ತೊಂದರೆಗೆ ಒಳಗಾದರೆ ಅಂತಹವರು ತಮ್ಮ ಜೀವನಪರ್ಯಂತ ತಕ್ಕ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರಬೇಕು.
ಜೀವನಶೈಲಿಯಲ್ಲಿ ಬದಲಾವಣೆ
ಹೃದಯ ರೋಗಗಳ ಚಿಕಿತ್ಸೆಯಲ್ಲಿ ವೈದ್ಯಕೀಯವಾಗಿ ಎಷ್ಟೇ ಬೆಳವಣಿಗೆಯಾಗಿದರೂ ಕೂಡಾ, ಆ ಕಾಯಿಲೆ ಮತ್ತಷ್ಟು ಉಳ್ವಣಿಸುವುದನ್ನು ತಡೆಗಟ್ಟಲು ಜೀವಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅತ್ಯುತ್ತಮ ಪಲಿತಾಂಶ ಲಭಿಸುತ್ತದೆ.
ಯಾವ ವ್ಯಕ್ತಿಯೇ ಆದರೂ ತನಗೆ ಹೃದಯದ ತೊಂದರೆ ಇದೆ ಯೆಂದು ತಿಳಿದ ಕೂಡಲೆ ತನ್ನ ಆಹಾರ ಕ್ರಮದಲ್ಲಿ ತಪ್ಪದೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.ಉದಾಹರಣೆಗೆ
ಕೊಬ್ಬು ಕಡಿಮೆ ಇರುವ ಆಹಾರವನ್ನು ಮುಖ್ಯವಾಗಿ ಸ್ಯಾಂಚುರೇಟೆಡ್ ಫ್ಯಾಟ್ ಕೊಲೆಸ್ಟ್ರಾಲ್ ಕಡಿಮೆಯಿರುವ ಆಹಾರವನ್ನು ತೆಗೆದುಕೊಳ್ಳಬೇಕು.
ಈಗಾಗಲೇ ಒಂದು ಬಾರಿ ಹೃದಯಗತವಾಗಿದ್ದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಬಹಳ ಕಡಿಮೆ ಯಿರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಇದರಿಂದ ಮತ್ತೊಮ್ಮೆ ಹೃದಯಘಾತ ಸಂಭವಿಸದಂತೆ ಕೇರ್ ತೆಗೆದುಕೊಳ್ಳಬಹುದು.
ಕೊಬ್ಬಿನ ಅಂಶ ಕಡಿಮೆ ಇರುವ ಆಹಾರವನ್ನು ಸೇವಿಸುವುದರಿಂದ,ಶರೀರದ ತೂಕ ಗಮನಾರ್ಹವಾಗಿ ಕಡಿಮೆ ಯಾಗುತ್ತದೆ. ಸ್ಥೂಲ ದೇಹದವರು, ಹೆಚ್ಚು ತೂಕವಿರುವವರು ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳಬಹುದು.
ಹೃದಯದ ರೋಗವಿರುವವರು ನಿಯಮಿತವಾಗಿ ವ್ಯಾಯಾಮಗಳನ್ನು ಮಾಡುವುದರಿಂದ ಬಹಳ ಉಪಯೋಗವಿದೆ. ಒಂದು ಬಾರಿಗೆ 40 – 50 ನಿಮಿಷಗಳಂತೆ ವಾರಕ್ಕೆ 4- 5 ಬಾರಿ ವೇಗವಾಗಿ ನಡೆಯುವುದು,ಸೈಕಲ್ ತುಳಿಯುವುದು ಇಲ್ಲವೇ ಈಜಾಡುವುದು ಇಂತಹ ವ್ಯಾಯಾಮಗಳು ಹೃದಯ ರೋಗಿಗಳಿಂದ ಸಂಭವಿಸುವ ಸಾವನ್ನು ದೂರ ಮಾಡುತ್ತವೆಂದು ಸಂಶೋಧನೆಗಳಿಂದ ತಿಳಿದಿದೆ .
ಹೃದಯದ ರೋಗಗಳಿರುವವರು ಡಾಕ್ಟರ್ ಸಲಹೆ ಮೇರೆಗೆ,ಅವರ ಉಸ್ತುವಾರಿಯಲ್ಲಿ ಮಾತ್ರ ವ್ಯಾಯಾಮಗಳನ್ನು ಮಾಡಬೇಕು.
ಹೃದಯದ ರೋಗಗಳು ತಲೆದೂರಲು ಇರುವ ಮೂರು ಪ್ರಧಾನ ಕಾರಣಗಳಲ್ಲಿ ಧೂಮಪಾನವು ಒಂದು. ಧೂಮಪಾನವನ್ನು ನಿಲ್ಲಿಸುವುದರ ಮೂಲಕ ಹೃದಯಘಾತವಾಗುವ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ ಈಗಾಗಲೇ ಒಂದು ಬಾರಿ ಹೃದಯಘಾತ ಆಗಿರುವವರಿಗೆ,ಪುನಃ ಎರಡನೆಯ ಬಾರಿ ಸಂಭವಿಸುವ ಅಪಾಯದಿಂದ ರಕ್ಷಣೆ ಸಿಕ್ಕಂತಾಗುತ್ತದೆ.
ಮಾನಸಿಕ ಒತ್ತಡವನ್ನು ತಗ್ಗಿಸಿಕೊಳ್ಳುವುದರ ಮೂಲಕ ಕೂಡಾ ಹೃದಯರೋಗಗಳ ಅಪಾಯದಿಂದ ದೂರವಿರಬಹುದು ‘ಯೋಗ’ದ ಮೂಲಕವಾಗಲಿ ಮತ್ತಾವ ರೀತಿಯಲ್ಲೆ ಆಗಲಿ ರಿಲ್ಯಾಕ್ಸೇಷನ್ ಪದ್ಧತಿಗಳನ್ನು ಪಾಲಿಸುವುದರ ಮೂಲಕ ಇದು ಸಾಧ್ಯವಾಗುತ್ತದೆ.