ಮನೆ ಆರೋಗ್ಯ ಹೃದಯ ರೋಗಿಗಳಿಗೆ ಚಿಕಿತ್ಸೆ :  ಭಾಗ-3

ಹೃದಯ ರೋಗಿಗಳಿಗೆ ಚಿಕಿತ್ಸೆ :  ಭಾಗ-3

0

ಔಷಧಗಳು    

★ ಎಂಜೈನಾ ಲಕ್ಷಣಗಳು ಸಾಧಾರಣವಾಗಿ (Beta Blocker Drugs)ಔಷಧಿಗಳಿಂದ ನಿಯಂತ್ರಣಕ್ಕೆ ಬರುತ್ತದೆ.ಇವು ಹೃದಯದ ಮೇಲೆ ಬೀಳುವ ಭಾರವನ್ನು (Work load)ತಗ್ಗಿಸುತ್ತವೆ.

Join Our Whatsapp Group

★ Calcium Channel Blockers, Nitroglycerine ನಂತಹ ಔಷಧಿಗಳು ಧಮನಿಯನ್ನು ವಿಶಾಲಗೊಳಿಸುತ್ತವೆ.

★ಆಸ್ಟಿರನ್ Anti coagulant Drugs ನಂತಹ ಮುದ್ದುಗಳನ್ನು ರಕ್ತನಾಳದಲ್ಲಿ ಗರಣೆಗುಟ್ಟುವಿಕೆ(Clots )ಆಗದಂತೆ ಎಚ್ಚರವಹಿಸುತ್ತವೆ.

★ರಕ್ತದಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿದ್ದು, ಆಹಾರದ ಬದಲಾವಣೆಯಿಂದ ಅಥವಾ ತೂಕ ಕಡಿಮೆಗೊಳಿಸಿಕೊಳ್ಳುವ ಶ್ರಮದ ಮೂಲಕ ನಿಯಂತ್ರಣಕ್ಕೆ ಬರದಿದ್ದಾಗ, ಅಂತಹ ವ್ಯಕ್ತಿಗಳಿಗೆ ಕೊಲೆಸ್ಟರಾಲ್ ತಗ್ಗಿಸುವ ಔಷಧಗಳನ್ನು ಕೊಡುತ್ತಾರೆ.

★ಹೃದಯದ ಪಂಪ್ ಮಾಡುವ ಸಾಮರ್ಥ್ಯದ ಕೊರತೆಯಾದಾಗ Ace Inhibitors ಇಲ್ಲವೇ Digitalis Drugs ಮೂಲಕ ಚಿಕಿತ್ಸೆ ಮಾಡುತ್ತಾರೆ.

★ಹೈ ಬೀಪಿ ಇರುವುದು,ಇಲ್ಲವೇ ಶರೀರದಲ್ಲಿ Flಸಂಗ್ರಹವಾಗುವುದು ನೀರು ತುಂಬಿಕೊಳ್ಳುವುದು ಎನ್ನುತ್ತೇವೆ ಆದಾಗ ಅವುಗಳನ್ನು ತಗ್ಗಿಸುವ ತಕ್ಕ ಔಷಧ ಕೊಡುತ್ತಾರೆ.

ಕರೋನರಿ ಹಾರ್ಡ್ ಡಿಸೀಸ್ ನಿಂದ ತೊಂದರೆಪಡುವ ಬಹಳ ಮಂದಿ ರೋಗಿಗಳಿಗೆ ಜೀವನ ಶೈಲಿಯ ನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ.ಔಷದಗಳ ಬಳಕೆಯ ಮೂಲಕ ರೋಗ ನಿಯಂತ್ರಣಕ್ಕೆ ಬರುತ್ತದೆ.

ಆದರೆ, ಔಷಧಗಳನ್ನು ಬಳಸುತ್ತಿದ್ದರೂ ಇಲ್ಲವೇ ಔಷಧಗಳ ಕಾಂಬಿನೇಷನ್ ನಲ್ಲಿ ಬದಲಾವಣೆ ಮಾಡಿಕೊಂಡರೂ ಕೂಡಾ, ಎಂಜೈನ ಎಷ್ಟೂ ಕಡಿಮೆಯಾಗದೆ ಪದೇ ಪದೇ ಸಂಭವಿಸುತ್ತಿದ್ದೇರೆ , ಎಂಜೀಯೋ ಪ್ಲಾಸ್ಟಿಯನ್ನಾಗಲಿ,  ಬೈಪಾಸ್ ಸರ್ಜರಿಯನ್ನಾಗಲಿ ಮಾಡುತ್ತಾರೆ.

ಅಥೆರೆಕ್ಟಮಿ
★ಈ ವಿಧಾನದಲ್ಲಿ ಧಮನಿಯ ಒಳಗೋಡೆಯ ಮೇಲೆ ಸೇರಿಕೊಂಡಿರುವ ಕೊಬ್ಬಿನ ಪದರಗಳನ್ನು ಸಣ್ಣ ಬ್ಲೇಡ್ ಅಥವಾ ಕಟರ್ ನಿಂದ ಶುಭ್ರ ಮಾಡಲಾಗುತ್ತದೆ.ಆದ್ದರಿಂದ ಧಮನಿಯ ಒಳ ಮಾರ್ಗ ಶುಭ್ರಗೊಂಡು ಇಕ್ಕಟ್ಟು ಇಲ್ಲದಂತಾಗಿ ರಕ್ತ ಹೃದಯಕ್ಕೆ ಸರಾಗವಾಗಿ ಪೂರೈಕೆಯಾಗುತ್ತದೆ .

ರೋಟೋಬ್ಲೇಷನ್   
 ★ಈ ವಿಧಾನದಲ್ಲಿ ಒರಟಗಿರುವ     Diamond Coatet Brass Tip (ವಜ್ರಕವಚದ ಹಿತ್ತಾಳೆ ಮೊನೆ ಯನ್ನು) ಒಂದು ಟ್ಯೂಬಿನ ಮುಖಾಂತರ ಕಿರಿದಾಗಿರುವ ಧಮನಿಯಲ್ಲಿ ಕಳಿಸುತ್ತಾರೆ. ಅತಿ ಹೆಚ್ಚಿನ ವೇಗದಲ್ಲಿ ದುಂಡಾಗಿ ತಿರುಗುವ ಈ ಮೊನೆ ಧಮನಿಯೊಳಗೆ ಶೇಖರಗೊಂಡಿರುವ ಪದಾರ್ಥಗಳನ್ನು ಕೆರೆದು ತೆಗೆಯುತ್ತದೆ.ಮೇಲೆ ಹೇಳಿದ ನಾಲ್ಕು ವಿಧಗಳಲ್ಲಿ ಯಾವುದನ್ನೇ ಮಾಡಿದರೂ, ಕರೋನರಿ ಎಂಜಿಯೋ ಪ್ಲಾಸ್ಟಿಕ ಮಾಡಲ್ಪಟ್ಟ ರೋಗಿಗಳಿಗೆ ಹೃದಯಕ್ಕೆ ರಕ್ತಪೂರೈಕೆ ಸಾರಾಗವಾಗಿ ನಡೆಯುತ್ತದೆ. ಆದ್ದರಿಂದ ಹೃದಯ ಘಾತವಾಗಲಿ ಎದೆನೋವಾಗಲಿ ಬರುವ ಸಂಭವ ಕಡಿಮೆಯಾಗುತ್ತದೆ.
★  ಆದರೆ ಎಂಜಿಯೋ ಪ್ಲಾಸ್ಟಿ ಮಾಡಿದ ಮಾತ್ರ ಕೈ ಹೃದಯ ರೋಗ ಪೂರ್ತಿಯಾಗಿ ಕಡಿಮೆಯಾಗುವುದೆಂದೆಲ್ಲ ಅನಂತರ ಕೂಡ ಧೂಮಪಾನ ಮಾಡದಿರುವುದು, ಆಹಾರ ಕ್ರಮದ ನಿಯಂತ್ರಣ ವ್ಯಾಯಾಮ ಮಾಡುವುದು ಇಂತಹ  ಎಚ್ಚರಿಕೆಗಳನ್ನು ಪಾಲಿಸುವ ಮೂಲಕ,ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
  ★ಎಂಜಿಯೋ ಪ್ಲಾಸ್ಟಿಯಲ್ಲಿರುವ ಸಮಸ್ಯೆಗಳೇನೆಂದರೆ ಈ ವಿಧಾನದ ಮೂಲಕ   
  ★  ಕಿರಿದಾದ ಧಮನಿಗಳ ನಾಳಗಳನ್ನು ವಿಶಾಲಗೊಳಿಸಿ ಮೂರರಿಂದ ಆರು ತಿಂಗಳೊಳಗೆ 30 ರಿಂದ 50ರ ಪ್ರತಿಶತ ಕೇಸುಗಳಲ್ಲಿ ಪುನಃ ಕಿರಿದಾಗಲು ಪ್ರಾರಂಭವಾಗುತ್ತವೆ.
  ★ಮುಖ್ಯವಾಗಿ ಮಹಿಳೆಯರು ವೃದ್ಧರು, ಮಧುಮೇಹ ರೋಗಿಗಳು, ಕರೋನರಿ ಧಮನಿ ಪೂರ್ತಿಯಾಗಿ ಮುಚ್ಚಿಹೋಗಿರುವ,ಇಲ್ಲವೇ ಬಹುಪಾಲು ಮುಚ್ಚಿ ಹೋಗಿರುವ ರೋಗಿಗಳ ವಿಷಯದಲ್ಲಿ ಎಂಜಿಯೋಪ್ಲಾಸ್ಟಿ ಅಷ್ಟು ಒಳ್ಳೆಯ  ಫಲಿತಾಂಶಗಳನ್ನು ಕೊಡುವುದಿಲ್ಲ.