ಬೈಪಾಸ್ ಸರ್ಜರಿ
ಈ ಕೆಳಗಿನ ವಿಧಗಳಿಂದ ರೋಗಿಗಳಿಗೆ ಬೈಪಾಸ್ ಶಸ್ತ್ರಚಿಕಿಯನ್ನು ಮಾಡಲಾಗುತ್ತದೆ :
- ಎಷ್ಟು ಔಷಧಿಗಳನ್ನು ಬಳಸಿದರೂ ಒಳ್ಳೆಯ ಫಲಿತಾಂಶಗಳಿರದ ಧಮನಿ ವ್ಯಾಧಿಗ್ರಸ್ತರಿಗೆ.
- ಎಡಗಡೆಯ ಪ್ರಧಾನ ಕರೋನರಿ ಧಮನಿ ಪೂರ್ತಿಯಾಗಿ ಮುಟ್ಟಿ ಹೋಗಿರುವ ರೋಗಿಗಳಿಗೆ,ಅದು ಬೇರೆಡೆಗಳಿಗೆ ವ್ಯಾಪಿಸಿದಂತೆ ಇರಲು
- ಮೂರು ಕರೋನರಿ ಶಾಖೆಗಳು ಮುಚ್ಚಿ ಹೋಗಿರುವ ರೋಗಿಗಳಿಗೆ, ಮುಖ್ಯವಾಗಿ ಇವರ ಹೃದಯದ ಎಡ ಕುಹರದಲ್ಲಿ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕಡಿಮೆಯಾದಾಗ
- ಎಂಜಿಯೋ ಪ್ಲಾಸ್ಟಿಸಾಧ್ಯವಾಗದ ವಯೋವೃದ್ಧ ರೋಗಿಗಳಿಗೆ ಈ ಮೇಲೆ ಹೇಳಿದ ರೋಗಿಗಳಲ್ಲರಿಗೂ ಬೈಪಾಸ್ ಸರ್ಜರಿ ಮಾಡಬಹುದು.
- ಈ ಸರ್ಜರಿಯಲ್ಲಿ ಕಾಲಿನಿಂದ ತೆಗೆದ ರಕ್ತನಾಳದ ಒಂದು ತುದಿಯನ್ನು ಶುದ್ಧ ರಕ್ತವನ್ನು ಸಾಗಿಸಲು ಹೃದಯದಿಂದ ಹೊರಬರುವ ಮಹಾ ಧಮನಿಯ ಕೆಳಭಾಗಕ್ಕೆ ಅಂಟಿಸಿ, ಎರಡನೆಯ ತುದಿಯನ್ನು ಮುಚ್ಚಿ ಹೋಗಿರುವ ಧಮನಿಯ ನಂತರ ಭಾಗಕ್ಕೆ ಜೋಡಿಸಿ, ರಕ್ತ ನೇರವಾಗಿ ಮಹಾಧಮನಿಯಿಂದ ಕರೋನರಿ ಧಮನಿಗೆ ಸೇರಿಕೊಳ್ಳುವಂತೆ ಬೈಪಾಸ್ ಮಾಡುತ್ತಾರೆ.
- ಒಂದೇ ದಮನಿಯಲ್ಲಲ್ಲದೆ,ಬೇರೆ ಬೇರೆ ಧಮನಿಗಳಲ್ಲೂ ಮಾರ್ಗವಿರದಾದರೆ ಆ ಎಲ್ಲ ಕಡೆಗಳಲ್ಲಿಯೂ ಇದೇ ರೀತಿಯಾಗಿ ಬೈಪಾಸ್ಗಳನ್ನು ಮಾಡುತ್ತಾರೆ.
- ಇತ್ತೀಚಿನ ದಿನಗಳಲ್ಲಿ ರಕ್ತನಾಳವನ್ನು ಕಾಲಿನಿಂದ ತೆಗೆಯದೆ,ಎದೆ ಮೂಳೆಯ ಹಿಂಭಾಗದಲ್ಲಿರುವ ಅಂತರ್ಸ್ತ ಧಮನಿಯ ಗಳಿಂದಾಗಲಿ, ಕಿಬ್ಬೊಟ್ಟೆಯ ಧಮನಿಗಳನ್ನಾಗಲಿ ತೆಗೆದು ಬೈಪಾಸ್ ಗೆ ಬಳಸಲಾಗುತ್ತಿದೆ. ಇವು ಹೆಚ್ಚು ಕಾಲ ಕೆಲಸ ಮಾಡುವುದರಿಂದ, ಈಗ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
- ಬೈಪಾಸ್ ಸರ್ಜರಿಯಲ್ಲಿ ಹೆಚ್ಚಿನ ಅಪಾಯವೇನೃ ಇಲ್ಲ. ಈ ಸರ್ಜರಿಯಿಂದ ಉಂಟಾಗುವ ಸಾವಿನ ಪ್ರಮಣ ನೂರಕ್ಕೆ ಒಂದಕ್ಕಿಂತ ಹೆಚ್ಚಿರದು.ಹೃದಯದ ಎಡ ಕುಹರದಲ್ಲಿ ಪಂಪ್ ಮಾಡುವ ಸಾಮರ್ಥ್ಯ ಸ್ಥಿರವಾಗಿದ್ದು,ಡಯಾಬಿಟಿಸ್ ತರಹದ ಯಾವುದೇ ಕಾಯಿಲೆ ಇರದಿದ್ದರೆ ಬೈಪಾಸ್ ಅಸ್ತ್ರಚಿಕಿ ಶಸ್ತ್ರಕ್ರಿಯೆಯಿಂದ ಅಪಾಯವೇನು ಇಲ್ಲ.