ಮನೆ ಕಾನೂನು ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ: DRFO ಸಸ್ಪೆಂಡ್

ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ: DRFO ಸಸ್ಪೆಂಡ್

0

ಚಿಕ್ಕಮಗಳೂರು: ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ DRFOರನ್ನು ಸಸ್ಪೆಂಡ್ ಮಾಡಲಾಗಿದೆ.

Join Our Whatsapp Group

ನಕಲಿ ಟಿಕೆಟ್ ಸೃಷ್ಟಿಸಿ ಸಾವಿರಾರು ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತಿತ್ತು. ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್ ಲೈನ್ ಟಿಕೆಟ್ ನಕಲು ಮಾಡಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಚಂದನ್ ಅವರು ಈಗಾಗಲೇ ಸಾವಿರಾರು ಟ್ರೆಕ್ಕಿಂಗ್ ಟಿಕೆಟ್ ನಕಲು ಮಾಡಿ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಚಾರಣಕ್ಕೆ ಅವಕಾಶ ನೀಡದೆ, ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಅನ್ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿದೆ. ಅನ್ಲೈನ್ ಬುಕ್ಕಿಂಗ್ ಮಾಡಿಕೊಂಡು ಬಂದರೂ ಅವಕಾಶ ನೀಡುತ್ತಿಲ್ಲ ಎಂದು DRFO ಚಂದನ್ ವಿರುದ್ಧ ಪ್ರವಾಸಿಗರು ನಿರಂತರವಾಗಿ ವಿಡಿಯೋ ಸಮೇತ ದೂರು ನೀಡಿದ್ದರು.

ಕಳಸ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಾಜೆ, ಬಲ್ಲಾಳರಾಯನ ದುರ್ಗಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರವಾಸಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದರು.

ಸದ್ಯ ಇದೀಗ ಮೂಡಿಗೆರೆ ತಾಲೂಕಿನ ಜಾವಳಿ ಅರಣ್ಯ ಇಲಾಖೆ ಶಾಖೆಯ DRFO ಆಗಿದ್ದ ಚಂದನ್ ಅವರನ್ನು ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ CCF ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಕಲಿ ಟಿಕೆಟ್ ಜಾಲದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.