ಮೈಸೂರು (Mysuru): ಜೆ & ಜಿ ಗ್ರೂಪ್ ವತಿಯಿಂದ ಹೊರಬಂದಿರುವ ನೂತನ ಉತ್ಪನ್ನವಾದ ʻಟ್ರೈಬಾʼ ಜೇನುತುಪ್ಪವನ್ನು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಗೋವಿಂದ ರಾವ್ ಮೆಮೋರಿಯಲ್ ಹಾಲ್‌ನಲ್ಲಿ ಇಂದು ಬಿಡುಗಡೆ ಮಾಡಲಾಯಿತು. ಜೆ & ಜಿ ಗ್ರೂಪ್‌ನ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಡಾ.ಜಗನ್ನಾಥ ಶಣೈ, ನಿರ್ದೇಶಕರಾದ ಗೋವಿಂದ ಶಣೈ ಹಾಗೂ ರವಿಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕರಾದ ಬಿ.ಎಸ್.ಪ್ರಶಾಂತ್, ಟ್ರಾವಲ್ ಪಾರ್ಕ್ಸ್ ಮಾಲೀಕರಾದ ಸಿ.ಎ.ಜಯಕುಮಾರ್ ನೂತನ ಉತ್ಪನ್ನವನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಡಾ.ಜಗನ್ನಾಥ ಶಣೈ, ಈ ಜೇನುತುಪ್ಪವನ್ನು ದಟ್ಟ ಕಾಡುಗಳಿಂದ ಬುಡಕಟ್ಟು ಜನಾಂಗದವರ ಮೂಲಕ ಶೇಖರಿಸಲಾಗುತ್ತದೆ. ಈ ಜೇನುತುಪ್ಪ ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರಾಗುತ್ತದೆ. ಈ ಉತ್ಪನ್ನದ ಮಾರಾಟದಿಂದ ಬರುವ ಆದಾಯವನ್ನು ಜೇನುಕುರುಬರು, ಸೋಲಿಗರಂತಹ ಬುಡಕಟ್ಟು ಜನಾಂಗದವರ ಶ್ರೇಯೋಭಿವೃದ್ಧಿಗೆ ಮೀಸಲಿಡಲಾಗುತ್ತದೆ. ಎಲ್ಲ ಉತ್ಪನ್ನಗಳಲ್ಲಿಯೂ ಕಲಬೆರಕೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ನೈಸರ್ಗಿಕವಾಗಿ ತಯಾರಾದ ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು ಸಂತಸವಾಗುತ್ತಿದೆ ಎಂದು ಹೇಳಿದರು.
ಟ್ರೈಬಾ ವೈಲ್ಡ್ ಹನಿಯ ಸೇಲ್ಸ್ ಹೆಡ್ ರಾಜು ದೇಶಪಾಂಡೆ, ಪ್ರಾಡಕ್ಟ್ ಹೆಡ್ ಶ್ರವಣ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Triba Honey Lokarpana