ಮನೆ ಮನೆ ಮದ್ದು ನೆಗ್ಗಿಲ ಮುಳ್ಳು (TRIBULUS TERRESTRIS)

ನೆಗ್ಗಿಲ ಮುಳ್ಳು (TRIBULUS TERRESTRIS)

0

ನೆಲದ ಮೇಲೆ ಸಣ್ಣ ಸಸಿಯಾಗಿ ಬೆಳೆಯುತ್ತದೆ. ಟೆರಿಸ್ಟ್ರಿಕ್ ಹೆಸರು ದೊರಕಲು ನೆಲದ ಮೇಲೆ ಬೆಳೆಯುವ ಸ್ವಭಾವವೇ ಕಾರಣವಾಗಿದೆ. ಒಣಹವೆ ಪ್ರದೇಶದ ಇಡಿಯ ಭಾರತದಲ್ಲಿ ಸಾಮಾನ್ಯ ಒಂದು ಅಡಿಯಿಂದ ನಾಲ್ಕು ಅಡಿ ದೂರಕ್ಕೆ ನೆಲದ ಮೇಲೆ ಹಬ್ಬಿಕೊಳ್ಳುವ ಸಸ್ಯ ದಶಮೂಲಗಳಲ್ಲಿ ಅತ್ಯಂತ ಕಿರಿಯ ಸಸ್ಯವಾಗಿದೆ. ಮಿದು ಕೂದಲಿನ ಪುಟಾಣಿ ಎಲೆ ಹೊಂದಿರುತ್ತದೆ.

ಹೊಂಬಣ್ಣದ, ನಕ್ಷತ್ರ ಆಕಾರದ, ಸುಂದರ ಹೂ, 5 ಕವಾಟವುಳ್ಳ ಹಸು ಗೊರಸಿನಾಕಾರದ ಕಾಯಿ. ಬಹಳ ಗಟ್ಟಿ ಕಾಯಿ ಕವಚ. ಒಳಗೆ ಬಿಳಿ ತಿರುಳಿದೆ. ಒಳಗೆ ಅನೇಕ ಬೀಜಗಳಿರುತ್ತದೆ. ಕಾಯಿ ಪುಡಿ, ಇಡೀ ಸಸ್ಯ ಬೇರು ಬಳಸಿ ಮದ್ದು ತಯಾರಿಸುತ್ತಾರೆ. ಹಣ್ಣಿನಲ್ಲಿ ಎಣ್ಣೆ ಅಂಶವಿರುತ್ತದೆ. ಅಂಟು ಮತ್ತು ನೈಟ್ರೇಟುಗಳಿವೆ. ಕ್ಷಾರೀಯ ಸ್ವಭಾವದ ಸಸ್ಯ .

ಒಣ ಫಲವನ್ನು ಮಾಡಿರಿ, ಒಂದು ಚಮಚ ಪುಡಿಗೆ ಒಂದು ಲೋಟ ಕುಡಿಯುವ ನೀರು ಹಾಕಿರಿ, ತಣಿದ ಮೇಲೆ ಕುಡಿಯುವುದರಿಂದ ಮೂತ್ರ ಸಂಬಂಧಿ ಸಕಲ ಕಾಯಿಲೆಗಳು ವಾಸಿಯಾಗುತ್ತದೆ. ಉರಿ ಮೂತ್ರ, ಮೂತ್ರಕೋಶ ಕಲ್ಲು, ಮೂತ್ರ ಕಟ್ಟು, ಸ್ವಪ್ನಸ್ಖಲನ, ವೀರ್ಯದೋಷ, ವೀರ್ಯಾಣ ಸಂಖ್ಯೆ ಕುಂಠಿತ ತೊಂದರೆಗಳೆಲ್ಲಾ ನೆಗ್ಗಿಲ ಫಲ ಮದ್ದಾಗಿದೆ.

ಔಷಧೀಯ ಗುಣಗಳು :-

*  ಎಳ್ಳು ಮತ್ತು ಚೂರ್ಣ ಸೇವಿಸಿದರೆ ಧಾತು ವೃದ್ಧಿ. ಸ್ತ್ರೀ ಪುರುಷರಲ್ಲಿರುವ ತೊಂದರೆ ಪರಿಹಾರವಾಗುತ್ತದೆ. ಸಂತಾನ ಪ್ರಾಪ್ತಿಗೆ ಸಹಕಾರಿಯಾಗುತ್ತದೆ.

* ಎದೆನೋವು, ಗುಂಡಿಗೆ ಕಾಯಿಲೆಗೆ ಸಮೂಲ ಪುಡಿ ಸೇವನೆಯಿಂದ ಲಾಭವಿದೆ.

* ಸೊಪ್ಪು ರಸ ಸೇವಿಸಿದರೆ ಕ್ರಿಮಿ ಜಂತು ತೊಂದರೆ ಪರಿಹಾರವಾಗುತ್ತದೆ.

* ಮೈ ಊತ, ಕೈಕಾಲು ಬೀಗುವಿಕೆ ಸಹ ನೆಗ್ಗಿಲ ಬೇರು ಮತ್ತು ನಗ್ಗಿಲ ಕಾಯಿ ಕಷಾಯ ಕೊಡಿಯುವುದರಿಂದ ಊತ ಇಳಿಯುತ್ತದೆ.