ಮನೆ ಆರೋಗ್ಯ ತ್ರಿಫಲ

ತ್ರಿಫಲ

0

23. ಸೈರೀಯ ಜಮ್ವ್ಬರ್ಜುನ ಕಾಶಿ ರೀಜಂ ಪುಷ್ಪಂ ಶಿಲಾನ್ಹಾರ್ಕ ವಚೂತಕ ಬೀಜೇ | ಪುನರ್ನವಾಕರ್ದ ಮಕಕಣ್ಣಕಾರ್ಯೌ ಕಾಸೀಸಪಿ ಣ್ಡೀತಕ ಬೀಜಸಾರಮ್ ||

Join Our Whatsapp Group

 ಫಲತ್ರಯಂ ಲೋಹದ ಜೋಞ್ಜನಂ ಚ ಯಷ್ಟಶ್ಚಯಂ ನೀರಜಸಾರೀವೇ ಚ ।

 *ಪಿಷ್ಟ್ವಥಸರ್ವಂ ಸಹ ಮೋದಯ    ನ್ತ್ಯಾಸಾರಾಮ್ಯಸಾ ಬೀಜಕ ಸಮ್ಭವೇನ ||

 ಸಾರಾಮ್ಭಸಃ ಸಪ್ತಭಿರೇವ ಪಸ್ಚಾತ್ ಪ್ರಶ್ನೆ: ಸಮಾಲೋಡ್ಯ ದಶಾಹ ಗುಪ್ತಮ್ |

 *ಲೋಹೇ ಸುಪಾತ್ರೇ ವಿನಿಧಾಯ ತೈಲಮಕ್ಕೋದ್ಭವಂ ತಚ್ಚೆಪಚೇತ್

 ಪ್ರಯತ್ನಾತ್ ||

 ಪಕ್ವಂಚ ಲೋಹೇಽಭಿನವೇ ನಿದಾಯ ನಸ್ಕಂ ವಿದಧ್ಯಾತ್ ಪರಿಶುದ್ಧ ಕಾಯಃ । ಅಭ್ರಷ್ಟಯೋಗೈಶ್ಚ ನಿಯಜ್ಯಮಾನಂ ಭುಞ್ಜೀತ ಮಾರ್ಪಾ ಕೃಶರಾಮಧೋ ವಾ||

 ಮಾಸೋಪರಿಷ್ಟಾದ್ಧನಕುಞ್ಜತಾಗ್ರಾಃ ಕೇಶಾ ಭವನ್ತಿ ಭ್ರಮರಞ್ಞಾನಾಭಾಃ ।

 ಕೇಶಾ ಸಥಾನ್ನೇ ಖಲತೌ ಭವೇಯುರ್ಜರಾ ನ ಚೈನಂ ಸಹಸಾಚ್ಯುತಿ ||

 ಬಲಂ ಪರಂ ಸಂಭವ ತೀವ್ರಯಾಣಂ ಭವೇಚ್ಚ ವಕ್ತ್ರಂ ವರ್ಲಿಭಿರ್ವಿ ಮುಕ್ತಮ್ | ನಾಕಾಮಿನೇ ನರ್ಥಿನಿ ನಾಕೈತಾಯ ನೈವಾರಯೇ ತೈಲಮಿದಂ ||

           ಮುಳ್ಳುಗೋರಂಟಿ, ನೇರಳೆ, ಮತ್ತಿ, ಶಿವನಿ ಈ ಮರಗಳ ಹೂ, ಎಳ್ಳು, ಗರುಗದ ಸೊಪ್ಪು, ಮಾವಿನ ಓಟೆಯೊಳಗಿನ ತಿರುಳು, ಕೊಮ್ಮೆ, ನೈದಿಲೆ ಗೆಡ್ಡೆಯ ಸುತ್ತಲಿನ ಮಣ್ಣು, ಹೆಗ್ಗುಳ್ಳ, ನೆಲಗುಳ್ಳ, ಅನ್ನಭೇದಿ, ಮಗ್ಗಾರೆ ಕಾಯಿ, ಹೊನ್ನೆ ಮರದ ಸಾರ, ತ್ರಿಫಲ, ಕಬ್ಬಿಣದ ಪುಡಿ, ರಸಾಂಜನ, ಅತಿಮಧುರ, ನೈದಿಲೆಗೆಡ್ಡೆ, ಸೋಗದೆ ಬೇರು – ಇವು ಪ್ರತಿಯೊಂದನ್ನು ಒಂದೊಂದು ಕರ್ಷದ ಪ್ರಮಾಣದಷ್ಟು ತೆಗೆದುಕೊಂಡು ಅರೆದು ಕಲ್ಕ ಮಾಡಿ, ಕಾಡುಮಲ್ಲಿಗೆ ಮತ್ತು ಸರ್ಜ ವೃಕ್ಷಗಳ ಕಷಾಯ 7 ಪ್ರಸ್ಥದಷ್ಟರಲ್ಲಿ ಕದಡಿ 10 ದಿನಗಳಾದ ಮೇಲೆ ಕಬ್ಬಿಣದ ಬಾಂಡ್ಲಿಗೆ ಸುರಿದು ತಾರೆಕಾಯಿಯ ಎಣ್ಣೆಯನ್ನು 1 ಅಡಕ ಪ್ರಮಾಣದಷ್ಟು ಸೇರಿಸಿ ಕಾಯಿಸಿ ತೈಲಪಾಕ ತಯಾರಿಸಿ ಸೋಸಿದ ತೈಲವನ್ನು ಕಬ್ಬಿಣದ ಬಿಂದಿಗೆಯಲ್ಲಿ ಸಂಗ್ರಹಿಸಿಡಬೇಕು. . ರೋಗಿಯ ದೇಹವನ್ನು ಶುಚಿ ಮಾಡಿಸಿ ಅಭ್ಯಂಗ ಮಾಡಿಸಿದರೆ ಒಂದು ಮಾಸ ಕಳೆದ ಮೇಲೆ ತಲೆಯ  ಕೂದಲು ದಟ್ಟವಾಗಿ ಗುಂಗುರು ಗುಂಗುರಾಗಿ ಬೆಳೆಯುತ್ತದೆ. ತಲೆ ಕೂದಲು ದುಂಬಿಯ ನೇರದಂತೆ ಕಪ್ಪಾಗಿರುತ್ತದೆ. ಉದ್ದನ್ನು ಮತ್ತು ಎಳ್ಳಿನ ಚಿಗುಳಿಯನ್ನು ಸೇವಿಸಬೇಕು. ಬೋಳು ತಲೆಯವರೆಗೆ ಈ ತೈಲದ ಅಭ್ಯಂಗ ಮಾಡಿದರೆ ತಲೆ ಕೂದಲು ಬೆಳೆಯುತ್ತದೆ. ಮುದಿತನದ ಲಕ್ಷಣಗಳು ಬೇಗ ಉಂಟಾಗುವುದಿಲ್ಲ ಸುಕ್ಕು ನಿವಾರಣೆಯಾಗುತ್ತದೆ ಅಪೇಕ್ಷೆ ಇಲ್ಲದವರಿಗೂ (ಕೃತಜ್ಞರಲ್ಲದವರಿಗೂ, ಶತ್ರುವಿಗೂ ಈ ತೈಲದ ಪ್ರಯೋಗವನ್ನು ಉಪದೇಶಿಸಬಾರದು.

1ಕರ್ಷ= 20, 1ಪ್ರಸ್ಥ = 768 : 1 ಅಡಕ= 3.738.)

 ಅಧ್ಯಾಯ – 36

 ಕಲ್ಯಾಣಕ ಘೃತ

 24.ವಿಡಙ್ಗ ತ್ರಿಫಲಾದನ್ತೀ ಭದ್ರದಾರು ಹರೇಣವಃ | ತಾಳೀಸಪತ್ರಮಞ್ಞಾಪಾ ಕೇಶರೋತ್ಸಲ ಪದ್ಮಕಮ್ |

 ದಾಡೀಮಂ ಮಾಲತೀಪುಷ್ಪಂ ರಜನ್ಯೌ ಸಾರೀವೇಸ್ಥಿರೇ | ಪ್ರಿಯಙ್ಗುಸ್ತಗರಂ ಕುಷ್ಠಂ ಬೃಹತ್ಯೌ ಚೈಲವಾಲುಕಮ್ ||

 ಸಚನ್ನನಗವಾಕ್ಷೀ ಭೀರೇತೈಃ ಸಿದ್ಧಂ ವಿಷಾಪಹಮ್ |

 *ಸರ್ಪಿ: ಕಲ್ಯಾಣಕಂ ಹೇತದ್ಧಹಾಪಸ್ಮಾರ ನಾಶನಮ್

 ಪಾಂಡ್ಯ ಮಯಗರಶ್ಚಾ ಸಮಸ್ಥಾಗ್ನಿ ಜ್ವರಕಾಸನುತ್ |

 *ಶೋಷಿಣಾಮಲ್ಪ ಶುಕ್ರಾಣಾಂ ವನ್ನಾನಾಂ ಚ ಪ್ರಶಸ್ಯತೇ ॥

*

ವಾಯುವಿಳಂಗ, ತ್ರಿಫಲ, ಜಾಪಾಳದ ತೊಗಟೆ, ದೇವದಾರು, ರೇಣುಕೆ ಬೀಜ, ತಾಳೀಸ ಪತ್ರ, ಮಂಜಿಷ್ಠ, ನಾಗಸರಿ, ನೈದಿಲೆಗೆಡ್ಡೆ, ತಾವರೆ (ಪದ್ಮಕ), ದಾಳಿಂಬೆ ಸಿಪ್ಪೆ, ಜಾಜೀ ಹೂ, ಅರಿಸಿನ, ಮರದರಿಸಿನ, ಸೋಗದೆ ಬೇರು, ಮೂರೆಲೆ ಹೊನ್ನೆ, ನೆಳಲು, ತಗರ, ಚಂಗಲ ಕೋಷ್ಠ ಹೆಗ್ಗುಳ್ಳ, ನೆಲಗುಳ್ಳ, ಎಲಾವಾಲುಕ, ರಕ್ತಚಂದನ, ಹಾವುಮೆಕ್ಕೆ – ಇವುಗಳ ಕಲ್ಕದೊಡನೆ ತುಪ್ಪ ಸೇರಿಸಿ ಧೃತ ತಯಾರಿಸಬೇಕು. ದುಷ್ಟ ಗ್ರಹದ ಪೀಡೆ ನಿವಾರಣೆಯಾಗುತ್ತದೆ. ಅಪಸ್ಮಾರ, ಪಾಂಡುರೋಗ, ಗರ (ಕೈಮಸಕು), ಉಬ್ಬಸ, ಅಗ್ನಿಮಾಂದ್ಯ ಮತ್ತು ಜ್ವರ ವಾಸಿಯಾಗುತ್ತದೆ. ಕ್ಷಯ ರೋಗಗಳಿಗೆ, ಅಲ್ಪಶುಕ್ರ ಉಳ್ಳವರಿಗೆ ಮತ್ತು ವನ್ಯಾ ಸ್ತ್ರೀಯರಿಗೆ ಉತ್ತಮ ಔಷಧಿ.

 ಉತ್ತರ ತಂತ್ರಂ

 ಅಧ್ಯಾಯ – 17

24. ಪುರಾಣಸರ್ಪಿಸ್ತಿಮಿರೇಷು ಸರ್ವತೋ ಹಿತಂ ಭರೇದಾಯಸಭಾಜನಸ್ಥಿತಮ್  ।।

 ಹಿತಂ ಚ ವಿದ್ಯಾತ್ ತ್ರಿಫಲಭ್ಯತಂ ಸದಾ ಕೃತಂ ಚ ಯನ್ನೇಷ ವಿಷಾಣನಾಮಭಿಃ । ಸದಾವಲಿಹ್ಯಾತ್ ತ್ರಿಫಲಾಂ ಸುಚೂರ್ಣಿತಾಂ ಘತಪ್ರಗಾಢಾಂ

 ತಿಮಿರೇಽಥ ಪಿತ್ತಜೇ |

 *ಸಮಿರಜೇ ತೈಲಯುತಾಂ ಕಥಾತ್ಮಕೇ ಮಧುಪ್ರಗಾಢಾಂ ವಿದಧೀತಯುಕ್ತಿತಃ |

 ಗವಾಂ ಶಕೃತ್ವಾ ಥನಿಪಕ್ವ ಮುಕ್ತಮಂ ಹಿತಂ ತು ತೈಲಂ ತಿಮಿರೇಷು ನಾವನು ||

         ವಾತಪಿತ್ತ, ಕಫಜ, ತಿಮಿರಗಳಿಗೆಲ್ಲ ಪುರಾಣ ಘೃತವನ್ನೇ ಪಾನಾಭ್ಯಂಗ ನಸ್ಯಾದಿಗಳಿಗೆ ಪ್ರಯೋಗಿಸಬೇಕು; ತ್ರಿಫಲ ಕ್ವಾಥಕಲ್ಯಗಳಿಂದ ತಯಾರಿಸಿದ ಕಬ್ಬಿಣದ ಪಾತ್ರೆಯಲ್ಲಿ ತುಂಬಿರುವ ತ್ರಿಫಲ ಘೃತವನ್ನಾಗಲಿ, ಮೇಷ ಶೃಂಗಿ ಫಲಗಳಿಂದ ತಯಾರಿಸಿದ ಘೃತವನ್ನಾಗಲಿ ಸದಾ ಉಪಯೋಗಿಸಬೇಕು, ನುಣ್ಣಗೆ ಪುಡಿ ಮಾಡಿದ ತ್ರಿಫಲ ಚೂರ್ಣಕ್ಕೆ ಅತಿಯಾಗಿ ತುಪ್ಪ ಮಿಶ್ರ ಮಾಡಿ ಪಿತ್ತ ತಿಮಿರದಲ್ಲೂ, ತೈಲ ಮಿಶ್ರ ಮಾಡಿ ವಾತ ತಿಮಿರದಲ್ಲೂ, ಜೇನುತುಪ್ಪ ಮಿಶ್ರ ಮಾಡಿ ಕಫಜತಿಮಿರದಲ್ಲಿಯೂ ಪ್ರಯೋಗಿಸಬೇಕು (ಪುರಾಣ ಧೃತವೆಂದರೆ 10-15 ವರ್ಷ ಹಳೆಯದಾದ ತುಪ್ಪ, ತುಪ್ಪ ಹಳೆಯದಾದಷ್ಟು (50 100 ವರ್ಷ) ಅದರ ಔಷಧೀಯ ಗುಣ ಹೆಚ್ಚಾಗುತ್ತದೆ).

26. ಘೃತ ಪುರಾಣಂ ತ್ರಿಫಲಾಂ ಶತಾವರೀಂ ಪಟೋಲಮುದ್ಗಾ ಯವಾನಪಿ | ನಿಷೇವಮಾಣಸ್ಯ ನರಸ್ಯ ಯತ್ನತೋ ಭಯಂ ಸುಘೋರಾತ್ರಿ ಮಿರಾನ್ನ ವಿದ್ಯತೇ ||

 ಶತಾವರೀ ಪಾಯಸ ಏವ ಕೇವಲ ಸ್ತಥಾಕೃತೋ ಮಮಲ ಶೇಷು ಪಾಯಸಃ |

 ಪ್ರಭೂತಸರ್ಪಿಸ್ತ್ರಿ ಫಲೋದಕೋತ್ತರೋ ಯವೌದನೋ ವಾ ತಿಮಿರಂ ವ್ಯಪೋಹತಿ  ||

          ಪುರಾಣ ಘೃತ, ತ್ರಿಫಲ, ಶತಾವರಿ (ಆಷಾಡಿ ಬೇರು), ಕಹಿಪಡವಲ, ಹೆಸರುಕಾಳು, ಬೆಟ್ಟದ ನೆಲ್ಲಿಕಾಯಿ ಮತ್ತು ಯವ ಧಾನ್ಯಗಳನ್ನು ಸೇವಿಸುವವರಿಗೆ ಈ ಭಯಂಕರವಾದ ತಿಮಿರ ರೋಗ ಉಂಟಾಗುವುದಿಲ್ಲ.