*ಉದರದ (ಹೊಟ್ಟೆಯ) ಎಲ್ಲ ಬಗೆಯ ತೊಂದರೆಯನ್ನು ನಿವಾರಿಸುವ ಗುಣ
ನೀರು ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ ಕೊಡುವುದರ ಜೊತೆಗೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಕೆಲವು ಪ್ರಯೋಗಗಳ ಆಧಾರದ ಮೇಲೆ ಉದರ ಸಂಬಂಧದ ತೊಂದರೆಗಳಿಗೆ ತ್ರಿಫಲ ಉಪಯುಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸತ್ವದ ಈ ಗುಣದ ಸತ್ವಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಕಡಿಮೆ ಮಾಡುವ ಗುಣ ಕಾರಣ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಉದರ ಸಂಬಂಧದ ಕಾಯಿಲೆಗಳಿಗೆ(Irritable Bowel Syndrome) উ ಉತ್ತಮ ಔಷಧಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ (ಅಲೆಕ್ಸಾಂಡ್ರ ಮತ್ತು ಇತರರು, 2018).
ಉರಿಯೂತವನ್ನು ಕಡಿಮೆ ಮಾಡುವ ಗುಣ :
ದೇಹದಲ್ಲಿ ವಿವಿಧ ಕಾರಣಗಳಿಂದ ಉರಿಯೂತ ಉಂಟಾಗುತ್ತದೆ. ಸಾಮಾನ್ಯವಾಗಿ (Rheumatoid arthritis) 2 5 (Gout) 3 ಗೆಣ್ಣುಗಳಲ್ಲಿ ಉರಿಯೂತ ಉಂಟಾಗುತ್ತದೆ. ಉರಿಯೂತ ನಿವಾರಣೆಗೆ, ಪ್ರತಿಕೂಲ ಪರಿಣಾಮಗಳಿಲ್ಲದ ಔಷಧಿಯನ್ನು ಕಂಡು ಹಿಡಿಯುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.
ಸ್ವಿಸ್ ಬಿಳಿ ಇಲಿಗಳಿಗೆ ರಾಸಾಯನಿಕವನ್ನು (Freund’s adjuvant, ಪ್ರಮಾಣ : 01 ಮಿ.ಲೀ.) ಇಂಜಕ್ಷನ್ ಮೂಲಕ ಕೊಟ್ಟು ವಾಯು ನೋವಿನಲ್ಲಿ ಕಂಡು ಬರುವಂತಹ ಉರಿಯೂತ ಉಂಟು ಮಾಡಲಾಯಿತು. ಇಂತಹ ಇಲಿಗಳಿಗೆ ತ್ರಿಫಲ ಚೂರ್ಣ (1 ಗ್ರಾಂ ಪ್ರತಿ ಕಿಲೋ ಗ್ರಾಂ ದೇಹದ ತೂಕ) ಮತ್ತು ಇಂಡೊಮೆಥಾಸಿನ್ (30 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಔಷಧಿಯನ್ನು 8 ದಿನಗಳವರೆಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತ್ರಿಫಲ ಚೂರ್ಣಕ್ಕೆ ಉರಿಯೂತವನ್ನು ಕಡಿಮೆ ಮಾಡುವ ಗುಣವಿದೆಯೆಂದು ಕಂಡುಬಂದಿದೆ.
★ರಾಸಾಯನಿಕವನ್ನು (Monosodium urate crystal) ಕೊಟ್ಟು ಉರಿಯೂತ ಉಂಟು ಮಾಡಿದ ಇಲಿಗಳಿಗೆ ತ್ರಿಫಲವನ್ನು ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತ್ರಿಫಲ ಚೂರ್ಣಕ್ಕೆ ಉರಿಯೂತ ಕಡಿಮೆ ಮಾಡುವ ಗುಣವಿದೆಯೆಂದು ಕಂಡುಬಂದಿದೆ. ಪ್ರಯೋಗದ ಮೂಲಕ ಕೈಗೊಂಡ ಸಂಶೋಧನೆಯಿಂದಲೂ ದೃಢಪಟ್ಟಿದೆ .
ಕ್ಯಾರಜೀನನ್ (Carrageenan) ರಾಸಾಯನಿಕ ಮತ್ತು ಕಾಟನ್ ಪೆಲ್ಲೆಟ್ ಗಳಿಂದ ಉರಿಯೂತ ಹಾಗೂ ನೋವನ್ನುಂಟು ಮಾಡಿದ ವಿಸ್ಟಾರ್ ಬಿಳಿ ಇಲಿಗಳಿಗೆ, ಮೆಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ವವನ್ನು (200 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಕೊಟ್ಟು ಪರೀಕ್ಷಿಸಿದಾಗ ಸತ್ವಕ್ಕೆ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ತಿಳಿದುಬಂದಿದೆ .
ನೀರು ಉಪಯೋಗಿಸಿ, ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯಿಂದ ಪ್ರತ್ಯೇಕವಾಗಿ ಸತ್ತ ತಯಾರಿಸಿ ನಂತರ ಮಿಶ್ರಣ ಮಾಡಿ ವಿಶೇಷವಾಗಿ ತಯಾರಿಸಿದ ಸತ್ವವನ್ನು (300, 600 1200 ಮಿ.ಗ್ರಾಂ / ಪ್ರತಿ ಕಿಲೋ ಗ್ರಾಂ ದೇಹದ ತೂಕ) ಇಲಿಗಳಿಗೆ ಕೊಟ್ಟು ಪರೀಕ್ಷಿಸಿದಾಗಲೂ ತ್ರಿಫಲ ಸತ್ವಕ್ಕೆ ಉರಿಯೂತ ಕಡಿಮೆ ಮಾಡುವ ಮತ್ತು ನೋವು ಅರಿವಾಗದಂತೆ ಮಾಡುವ ಗುಣ ಇದೆಯೆಂದು ವರದಿಯಾಗಿದೆ.
★ತ್ರಿಫಲ ಸತ್ವಕ್ಕೆ ಉರಿಯೂತ ಕಡಿಮೆ ಮಾಡುವ ಗುಣವಿರುವುದರಿಂದ ಕೀಲ್ದಾಯು ಚಿಕಿತ್ಸೆಗೆ ಉಪಯುಕ್ತ ಔಷಧಿಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಒತ್ತಡವನ್ನು (Stress) ತಡೆದುಕೊಳ್ಳುವ ಸಾಮರ್ಥ್ಯವನ್ನುಂಟು ಮಾಡುವ ಗುಣ :
ಒತ್ತಡ (Stress) ಎನ್ನುವುದು ಬಾಹ್ಯ ಮತ್ತು ದೇಹದೊಳಗೆ ಉಂಟಾಗುವ ಪ್ರಚೋದನೆಗೆ ಒಂದು ರೀತಿಯ ಪ್ರತಿಕ್ರಿಯೆ. ಈ ಒತ್ತಡ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಪರಿಣಾಮವಾಗಿ ದೇಹ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಹಲವಾರು ಕಾಯಿಲೆಗಳ ಉತ್ಪತ್ತಿಗೆ ಕಾರಣವಾಗುತ್ತದೆ.
★ಪ್ರಯೋಗ ಶಾಲೆಯಲ್ಲಿ ವಿವಿಧ ಬಗೆಯ ಒತ್ತಡ Cold stress, Noise stress) ಉಂಟು ಮಾಡಿದ ಇಲಿಗಳಿಗೆ ತ್ರಿಫಲ ಚೂರ್ಣವನ್ನು (1 ಗ್ರಾಂ / ಕಿಲೋ ದೇಹದ ತೂಕ) 48 ದಿನಗಳವರೆಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತ್ರಿಫಲ ಚೂರ್ಣಕ್ಕೆ ಒತ್ತಡವನ್ನು
ತಡೆದುಕೊಳ್ಳುವ ಸಾಮರ್ಥ್ಯವನ್ನುಂಟು ಮಾಡುವ ಗುಣವಿದೆಯೆಂದು ವರದಿಯಾಗಿದೆ. ತ್ರಿಫಲದ ಈ ಗುಣಕ್ಕೆ, ಅದಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಗುಣ ಕಾರಣವೆನ್ನಲಾಗಿದೆ .
ವಿವಿಧ ದ್ರಾವಣ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ ಏಳು ದಿನಗಳವರೆಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ, ಸತ್ವದಿಂದಾಗಿ ಇಲಿಗಳು ಒತ್ತಡಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಪಡೆದುಕೊಂಡವೆಂದು ವರದಿಯಗಿದೆ.
15 ದಿನಗಳವರೆಗೆ ಶಬ್ದ ಮಾಲಿನ್ಯದ ಒತ್ತಡದ (Noise stress) ದಿಂದ ಉಂಟಾದ ಪ್ರತಿಕೂಲ ಪರಿಣಾಮವನ್ನು ನಿವಾರಣೆ ಮಾಡುವ ಸಾಮರ್ಥ್ಯ ತ್ರಿಫಲ ಚೂರ್ಣಕ್ಕೆ ಇದೆಯೆಂದು ವಿಸ್ಟಾರ್ ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ.
ಕಣ್ಣನ್ನು ರಕ್ಷಿಸುವ ಮತ್ತು ಮುದಿತನದ ಸ್ನಾಯುವಿನ ನಶಿಸುವಿಕೆಯನ್ನು ತಡೆಯುವ ಗುಣ :
★ಮದ್ಯಸಾರ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವ ಮತ್ತು ಸತ್ವದಿಂದ ಬೇರ್ಪಡಿಸಿದ ಚೆಬುಲಾಜಿಕ್ ಆಮ್ಲ ಚೆಬುಲಿನಿಕ್ ಆಮ್ಲ ಹಾಗೂ ಗ್ಯಾಲಿಕ್ ಆಮ್ಲ (Chebulagic acid, Chebulinic acid 2 Gallic acid) e ಮಧುಮೇಹದಿಂದಾಗಿ ಉಂಟಾಗುವ ಅಂಧತ್ವ (Diabetic retinopathy) ಮತ್ತು ಮುಪ್ಪಿನ ಕಾರಣದಿಂದ ಉಂಟಾಗುವ ನರ ಮತ್ತು ಸ್ನಾಯುವಿನ ನಶಿಸುವಿಕೆಯನ್ನು ತಡೆಯುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ ,
ಕಣ್ಣಿನ ಪೊರೆ (Cataract) ಬೆಳೆಯದಂತೆ ತಡೆಯುವ ಗುಣ :
ಕಣ್ಣಿನ ಪೊರೆ ಅಥವಾ ಮೋತಿ ಬಿಂದು ಸಾಮಾನ್ಯವಾಗಿ 60 ವರ್ಷ ವಯಸ್ಸಾದವರಲ್ಲಿ ಕಂಡು ಬರುವ ಕಣ್ಣಿನ ಕಾಯಿಲೆ. ಈ ಕಾಯಿಲೆ ಪ್ರಾರಂಭವಾದಾಗ ಪಾರದರ್ಶಕವಾಗಿದ್ದ ಕಣ್ಣಿನ ನೈಸರ್ಗಿಕ ಮಸೂರ ಕ್ರಮೇಣ ಅಪಾರದರ್ಶಕವಾಗುತ್ತದೆ. ಪರಿಣಾಮವಾಗಿ ಮಸೂರದ ಮೂಲಕ ಸಾಗಿ ಬರುವ ಬೆಳಕಿನ ಪ್ರಮಾಣ ಕಡಿಮೆಯಾಗಿ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಕ್ರಮೇಣ ಪೊರೆ ಪೂರ್ತಿಯಾಗಿ ಬೆಳವಣಿಗೆಯಾದಾಗ ಕಣ್ಣು ಸಂಪೂರ್ಣವಾಗಿ ಅಂಧತ್ವವನ್ನು ಹೊಂದುತ್ತದೆ. ಕಣ್ಣಿನ ಪೊರೆಗೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರ. ಶಸ್ತ್ರ ಚಿಕಿತ್ಸೆಯಲ್ಲಿ ನೈಸರ್ಗಿಕ ಮಸೂರವನ್ನು ಈ ಮೊದಲು ತೆಗೆಯಲಾಗುತ್ತಿತ್ತು ಮತ್ತು ದೃಷ್ಟಿ ದೋಷವನ್ನು ನಿವಾರಿಸಲು ಪೀನ ಮಸೂರವನ್ನು ದಪ್ಪ ಕನ್ನಡಕದ ರೂಪದಲ್ಲಿ ಕೊಡಲಾಗುತ್ತಿತ್ತು. ಆದರೆ, ಈಗ ನೈಸರ್ಗಿಕ ಮಸೂರವನ್ನು ತೆಗೆದು ಕೃತಕ ಮಸೂರವನ್ನು ಆದೇ ಜಾಗದಲ್ಲಿ ಇಟ್ಟು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಈಗ ದಪ್ರ ಕನ್ನಡಕದ ಅವಶ್ಯಕತೆಯಿಲ್ಲ.
ತ್ರಿಪಲ ಚೂರ್ಣಕ್ಕೆ, ಕಣ್ಣಿನ ಪೊರೆ ಬೆಳೆಯದಂತೆ ತಡೆಯುವ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ.
★ಇಲಿಗಳ ಮಸೂರಗಳನ್ನು ಸಂಗ್ರಹಿಸಿ ಎರಡು ಗುಂಪು ಮಾಡಲಾಯಿತು. ನಿಯಂತ್ರಣ ಗುಂಪಿನ ಮಸೂರಗಳನ್ನು 100, M ಸಾಂದ್ರತೆಯ ಸೆಲಿನೈಟ್ (Selenite) ದ್ರಾವಣದಲ್ಲಿಡಲಾಯಿತು. ಪ್ರಾಯೋಗಿಕ ಗುಂಪಿನ ಮಸೂರಗಳನ್ನು ಸೆಲಿನೈಟ್ ದ್ರಾವಣ ಮತ್ತು ನೀರಿನಿಂದ ತಯಾರಿಸಿದ ತ್ರಿಫಲದ ವಿವಿಧ ಸಾಂದ್ರತೆಯ ದ್ರಾವಣದ ಮಿಶ್ರಣದಲ್ಲಿಟ್ಟು 37°C ತಾಪಮಾನದಲ್ಲಿ 24 ಗಂಟೆ ಸಂಗ್ರಹಿಸಿಡಲಾಯಿತು. ಮತ್ತೊಂದು ಪ್ರಯೋಗದಲ್ಲಿ, ನಿಯಂತ್ರಣ ಗುಂಪಿನ ಇಲಿಗಳಿಗೆ ಸೆಲಿನೈಟ್ ದ್ರಾವಣವನ್ನು ಕೊಡಲಾಯಿತು. ಪ್ರಾಯೋಗಿಕ ಗುಂಪಿನ ಇಲಿಗಳಿಗೆ ಸೆಲಿನೈಟ್ ದ್ರಾವಣ ಮತ್ತು ವಿವಿಧ ಸಾಂದ್ರತೆಯ (26, 50, 75 ಮಿ.ಗ್ರಾಂ / ಪ್ರತಿ ಕಿಲೋ ಗ್ರಾಂ ದೇಹದ ತೂಕ) ತ್ರಿಫಲದಿಂದ, ತಯಾರಿಸಿದ ಸತ್ವವನ್ನು ಇಂಜಕ್ಷನ್ ಮೂಲಕ ಕೊಟ್ಟು ನಂತರ ಪರೀಕ್ಷಿಸಿದಾಗ, ತ್ರಿಫಲ ಸತ್ವಕ್ಕೆ, ಸೆಲಿನೈಟ್ ಉಂಟು ಮಾಡುವ ಕಣ್ಣಿನ ಪೊರೆಯನ್ನು ತಡೆಯುವ ಸಾಮರ್ಥ್ಯವಿದೆಯೆಂದು ತಿಳಿದುಬಂದಿದೆ. ಮನುಷ್ಯರ ಕಣ್ಣಿನಲ್ಲಿ ಬೆಳೆಯುವ ಪೊರೆಯನ್ನು ತಡೆಯುವ ಸಾಮರ್ಥ್ಯ ತ್ರಿಫಲಕ್ಕೆ ಇದೆಯೆಂಬುದನ್ನು ತಿಳಿಯಲು ಇನ್ನೂ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣ :
ಪ್ರಸ್ತುತ ಸಂಶೋಧನೆಗೆ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿದ ತ್ರಿಫಲ ಚೂರ್ಣ (ಅಳಲೆಕಾಯಿ – 1 ಭಾಗ, ತಾರೆಕಾಯಿ – 1 ಭಾಗ ಮತ್ತು ಬೆಟ್ಟದ ನೆಲ್ಲಿಕಾಯಿ – 1 ಭಾಗ) ಮತ್ತು ಅಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿದ ತ್ರಿಫಲ ಚೂರ್ಣ (1:2 4) ಎರಡನ್ನು ಉಪಯೋಗಿಸಲಾಗಿದೆ. ಪ್ರಯೋಗ ಶಾಲೆಯ ವಿಧಾನದ ಪ್ರಕಾರ (Water immersion & Stress) ಕರುಳಿನಲ್ಲಿ ಹುಣ್ಣಾಗುವಂತೆ ಮಾಡಿದ ಇಲಿಗಳಿಗೆ 2 ಬಗೆಯ ತ್ರಿಫಲವನ್ನು (540 ಮಿ.ಗ್ರಾಂ / ಕಿಲೋ ಗ್ರಾಂ ದೇಹದ ತೂಕ) 7 ದಿನಗಳವರೆಗೆ ಸೇವಿಸುವಂತೆ ಮಾಡಿ ಅವಧಿಯ ನಂತರ ಪರೀಕ್ಷಿಸಿದಾಗ ಅಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿದ ತ್ರಿಫಲ (1.2:4) ಚೂರ್ಣಕ್ಕೆ ಪರಿಣಾಮಕಾರಿಯಾದ ರೀತಿಯಲ್ಲಿ ಕರುಳಿನಲ್ಲಿ ಹುಣ್ಣಾಗದಂತೆ ತಡೆಯುವ ಮತ್ತು ವಾಸಿ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
★ಇಂಡೊಮೆಥಸಿನ್ ರಾಸಾಯನಿಕ (10 ಮಿ.ಗ್ರಾಂ / ಪ್ರತಿ ಕಿಲೋ ಗ್ರಾಂ ದೇಹದ ತೂಕ) ವನ್ನು ಕೊಟ್ಟು ಕರುಳಿನಲ್ಲಿ ಹುಣ್ಣಾಗುವಂತೆ ಮಾಡಿದ ಇಲಿಗಳಿಗೆ ತ್ರಿಫಲ ಸತ್ವವನ್ನು (1000 ಮಿ.ಗ್ರಾಂ 1 ಪ್ರತಿ ಕಿಲೋ ಗ್ರಾಂ ದೇಹದ ತೂಕ) 15 ದಿನಗಳವರೆಗೆ ಸೇವಿಸಲು ಕೊಟ್ಟು ಅವಧಿಯ ನಂತರ ಪರೀಕ್ಷಿಸಿದಾಗ ತ್ರಿಫಲ ಸತ್ವಕ್ಕೆ ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣವಿದೆಯೆಂದು ಕಂಡುಬಂದಿದೆ.
★ತ್ರಿಫಲ ಚೂರ್ಣದಲ್ಲಿರುವ ಚೆಬುಲಿನಿಕ್ ಆಮ್ಲಕ್ಕೆ ಟ್ಯೂಮರ್ ಗೆಡ್ಡೆಯನ್ನು ಮತ್ತು ಕರುಳಿನ ಕ್ಯಾನ್ಸರ್ ಅನ್ನು ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ.