ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣ
★ಮಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ತವನ್ನು (100 ಮಿ.ಗ್ರಾಂ ಸತ್ಯ / ಕಿಲೊ ಗ್ರಾಂ ದೇಹದ ತೂಕ) ಅಲಾಕ್ಷಾನ್ ರಾಸಾಯನಿಕವನ್ನು ಕೊಟ್ಟು ಮಧುಮೇಹ ಉಂಟು ಮಾಡಿದ ಇಲಿಗಳಿಗೆ ಸೇವಿಸಲು ನೀಡಿ ಪರೀಕ್ಷಿಸಿದಾಗ 4 ಗಂಟೆಯ ಅವಧಿಯೊಳಗೆ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ. ಪ್ರತಿದಿನ ಉಪಯೋಗಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದೆಂಬ ಅಭಿಪ್ರಾಯಕ್ಕೆ ಬರಲಾಗಿದೆ .
★ತ್ರಿಫಲ ಮತ್ತು ತ್ರಿಫಲದಲ್ಲಿರುವ ದ್ರವ್ಯಗಳ (ಆಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿ) ಸತ್ವವನ್ನು ಮಧುಮೇಹ ಉಂಟು ಮಾಡಿದ ಇಲಿಗಳಿಗೆ 40 ದಿನಗಳವರೆಗೆ ಸೇವಿಸಲು ಕೊಟ್ಟು ನಂತರ ಪರೀಕ್ಷಿಸಿದಾಗ ತ್ರಿಫಲ ಮತ್ತು ಇತರ 3 ದ್ರವ್ಯಗಳಿಗೆ ರಕ್ತದಲ್ಲಿನ ಗ್ಲೋಕೋಸ್ ಅಂಶವನ್ನು ಕಡಿಮೆ ಮಾಡುವ ಗುಣವಿದೆಯೆಂದು ಹಾಗೂ ಮಧುಮೇಹ ಚಿಕಿತ್ಸೆಗೆ ಉಪಯುಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಮುಂದುವರಿದಂತೆ ತಾರೆಕಾಯಿ ಸತ್ಯಕ್ಕೆ ಕೊಲೆಸ್ಟಿರಾಲ್ ಮತ್ತು ಟ್ರೈಗ್ಲಿಸರೈಡ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆಯೆಂದು ವರದಿಯಾಗಿದೆ .
ಸ್ಟೆಪ್ರೊಜೊಟೊಸಿನ್ (Streptozotocin) ರಾಸಾಯನಿಕವನ್ನು (50 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಒಂದು ಬಾರಿ ಇಂಜಕ್ಷನ್ ಮೂಲಕ ವಿಸ್ಟಾರ್ ಬಿಳಿ ಇಲಿಗಳಿಗೆ ಕೊಟ್ಟು ಮಧುಮೇಹ ಉಂಟು ಮಾಡಲಾಯಿತು. ಇಂತಹ ಇಲಿಗಳಿಗೆ ದಿನಕ್ಕೆ ಒಂದು ಬಾರಿಯಂತೆ 30 ದಿನಗಳವರೆಗೆ ತ್ರಿಫಲ ಚೂರ್ಣವನ್ನು (500 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಸೇವಿಸುವಂತೆ ಮಾಡಲಾಯಿತು. ಅವಧಿಯ ನಂತರ ಪರೀಕ್ಷಿಸಿದಾಗ ತ್ರಿಫಲ ಚೂರ್ಣ ರಕ್ತದಲ್ಲಿನ ಅಧಿಕ ಪ್ರಮಾಣದ ಗ್ಲೂಕೋಸ್ ಅಂಶವನ್ನು ಕಡಿಮೆ ಮಾಡುವುದರ ಮೂಲಕ ಮಧುಮೇಹ ಚಿಕಿತ್ಸೆಗೆ ಉಪಯುಕ್ತ ಅಭಿಪ್ರಾಯಕ್ಕೆ ಬರಲಾಗಿದೆ.
ಆಲ್ಲ-ಅಮೈಲೇಸ್ ಮತ್ತು ಅಲ್ಲ-ಗೂಕೋಸಿಡೇಸ್ ಕಿಣ್ವಗಳು ಶರ್ಕರ ಪಿಷ್ಠವನ್ನು ಗ್ಲಕೋಸ್ ಆಗಿ ಪರಿವರ್ತನೆ ಮಾಡುತ್ತವೆ. ನಂತರ ಗೂಕೋಸ್ ರಕ್ತವನ್ನು ಸೇರುತ್ತದೆ. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅಧಿಕವಾಗುವುದೇ ಮಧುಮೇಹಕ್ಕೆ ಕಾರಣ ಈ ಕಿಣ್ವಗಳ ಕಾರ್ಯವನ್ನು ಕುಂಠಿತಗೊಳಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ. ತ್ರಿಫಲ ಚೂರ್ಣಕ್ಕೆ ಕಿಣ್ಣದ ಮೇಲೆ ಹಿಡಿತ ಸಾಧಿಸುವುದರ ಮೂಲಕ ಮಧುಮೇಹ ಚಿಕಿತ್ಸೆಗೆ ಉಪಯುಕ್ತವೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ.
ಆಯುರ್ವೇದ ಶಾಸ್ತ್ರೀಯ ಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಸಂಗ್ರಹ, ವೃಂದ ಮಾಧವ, ಗಡ ನಿಘ್ರಹ ಮತ್ತು ಚಕ್ರದತ್ತಗಳಲ್ಲಿ, ಮಧುಮೇಹ ಚಿಕಿತ್ಸೆಗೆ ಸೂಚಿಸಲಾಗಿರುವ ಪ್ರಯೋಗಗಳನ್ನು ಪರಾಮರ್ಶಿಸಿ ತಯಾರಿಸಲಾದ ವಿಮರ್ಶಾ ಪ್ರಬಂಧದದಲ್ಲಿ, ತ್ರಿಫಲಾಗೆ ಇರುವ ಹಲವಾರು ಔಷಧೀಯ ಗುಣಗಳಿಂದಾಗಿ ಮಧುಮೇಹ ಚಿಕಿತ್ಸೆಗೆ ಉಪಯುಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಧುಮೇಹಿಗಳ ಗಾಯ ವಾಸಿ ಮಾಡುವ ಗುಣ
ತ್ರಿಫಲ ಚೂರ್ಣದ ಸತ್ವಕ್ಕೆ, ಮಧುಮೇಹಿಗಳ ಗಾಯವನ್ನು ವಾಸಿ ಮಾಡುವ ಗುಣವಿದೆಯೆಂದು ಮಧುಮೇಹ ಇರುವ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಮಧುಮೇಹ ಇರುವ ಇಲಿಗಳಿಗೆ (ಸ್ಟೆಪ್ರೊಜೆಟೊಸಿಸ್ ರಾಸಾಯನಿಕವನ್ನು ಕೊಟ್ಟು ಮಧುಮೇಹ ಉಂಟು ಮಾಡಿದ ಇಲಿಗಳು) ಗಾಯ ಮಾಡಿ ತ್ರಿಫಲ ಸತ್ವವನ್ನು ಸೇವಿಸಲು ಕೊಟ್ಟು ಜೊತೆಗೆ ಹೊರ ಲೇಪನವಾಗಿ ಹಚ್ಚಿ ಪರೀಕ್ಷಿಸಿದಾಗ 11 ದಿನಗಳ ಅವಧಿಯಲ್ಲಿ ಸುಮಾರು 87 ರಿಂದ 97% ಗಾಯ ವಾಸಿಯಾಗಿತ್ತೆಂದು ವರದಿಯಾಗಿದೆ.
ಮಧುಮೇಹಿಗಳ ನರಗಳ ನೋವನ್ನು ( _Diabetic Neuropathy) ವಾಸಿ ಮಾಡುವ ಗುಣ_
★ಸ್ಪೆಪ್ಪಜೊಟೊಸಿನ್ ರಾಸಾಯನಿಕವನ್ನು ಇಂಜಕ್ಷನ್ ಮೂಲಕ ಗಂಡು ಸ್ಟಾಗ್ ಡಾಲಿ ಇಲಿಗಳಿಗೆ ಕೊಟ್ಟು ಮಧುಮೇಹ ಉಂಟು ಮಾಡಲಾಯಿತು. ಇಂತಹ ಇಲಿಗಳಿಗೆ ತ್ರಿಫಲ ಚೂರ್ಣವನ್ನು (250, 500 ಮತ್ತು 1000 ಮಿ. ಗ್ರಾಂ / ಪ್ರತಿ ಕಿಲೋ ಗ್ರಾಂ ದೇಹದ ತೂಕ) 4 ವಾರ ಸೇವಿಸಲು ಕೊಟ್ಟು ಅವಧಿಯ ನಂತರ ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ, ಎಲ್ಲಾ ಪ್ರಮಾಣದ ಚೂರ್ಣಕ್ಕೆ ಮಧುಮೇಹದಲ್ಲಿ ಉಂಟಾಗುವ ನರಗಳ ನೋವನ್ನು ಕಡಿಮೆ ಮಾಡುವ ಮತ್ತು ಕಾಯಿಲೆ ಉಲ್ಬಣವಾಗದಂತೆ ತಡೆಯುವ ಸಾಮರ್ಥ್ಯವಿದೆಯೆಂದು ಡುಬಂದಿದೆ.
ಮೂತ್ರಪಿಂಡವನ್ನು ಕಾಪಾಡುವ ಗುಣ :
★ ಬೊಮೊಬೆಂಜೀನ್ ರಾಸಾಯನಿಕ ಉಂಟು ಮಾಡುವ ಹಾನಿಯಿಂದ ಮೂತ್ರಪಿಂಡವನ್ನ ಬೊಮೊಟಂಜೀನ್ ಮತ್ತು ತ್ರಿಫಲ ಚೂರ್ಣವನ್ನು (250 ಮತ್ತು 500 ಮಿ.ಗ್ರಾಂ / ಪತಿ ಕಿಲೊ ಗ್ರಾಂ ದೇಹದ ತೂಕ) ಸೇವಿಸಲು ಕೊಟ್ಟು ಪರೀಕ್ಷೆ ನಡೆಸಿದಾಗ, ಎರಡೂ ಪ್ರಮಾಣದ ತ್ರಿಫಲ ಚೂರ್ಣಕ್ಕೆ ಬೊಮೊಬೆಂಜೀನ್ ಉಂಟು ಮಾಡುವ ಹಾನಿಯಿಂದ ಮೂತ್ರಪಿಂಡವನ್ನು ರಕ್ಷಣೆ ಮಾಡುವ ಸಾಮರ್ಥ್ಯವಿದೆಯೆಂದು ದೃಢಪಟ್ಟಿದೆ. ತ್ರಿಫಲದ ಈ ಗುಣಕ್ಕೆ ಅದಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಗುಣ ಪ್ರಭಲ ಕಾರಣವೆನ್ನಲಾಗಿದೆ. (
ಮೂತ್ರಕೋಶದ ಮತ್ತು ನಾಳದ ಸೋಂಕನ್ನು ತಡೆಯುವ ಗುಣ :
★ನೀರು ಮತ್ತು ಮದ್ಯಸಾರದ ಮಿಶ್ರಣ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ಯಕ್ಕೆ ಮೂತ್ರಕೋಶ ಮತ್ತು ಮೂತ್ರನಾಳದ ಸೋಂಕಿಗೆ ಕಾರಣವಾದ ಹಲವು ಬಗೆಯ ಔಷದಿಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ. ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಫೀನಾಲಿಕ್ ರಾಸಾಯನಿಕ ಘಟಕ ಕಾರಣವೆಂದು ತಿಳಿದುಬಂದಿದೆ. ಮುಂಬರುವ ದಿನಗಳಲ್ಲಿ ತ್ರಿಫಲ ಮೂತ್ರಾಂಗದ ಸೋಂಕಿಗೆ ಪರಿಣಾಮಕಾರಿಯಾದ ಮತ್ತು ಪ್ರತಿಕೂಲ ಪರಿಣಾಮಗಳಲ್ಲದ ಔಷಧಿಯಾಗುವ ಆಶಾಭಾವನೆ ವ್ಯಕ್ತವಾಗಿದೆ.
ರಾಸಾಯನಿಕಗಳು ಉಂಟು ಮಾಡುವ ಹಾನಿಯಿಂದ ದೇಹವನ್ನು ಕಾಪಾಡುವ ಗುಣ ಪೊಟಾಸಿಯಂ ಡೈಕ್ರೋಮೇಟ್ ಉಂಟು ಮಾಡುವ ಹಾನಿಯಿಂದ ದೇಹವನ್ನು ಕಾಪಾಡುವ ಗುಣ
★ಪೊಟಾಸಿಯಂ ಡೈಕ್ರೋಮೇಟ್ ಉಂಟು ಮಾಡುವ ಹಾನಿಯಿಂದ ದೇಹವನ್ನು ಕಾಪಾಡುವ ಗುಣ ತ್ರಿಫಲ ಚೂರ್ಣಕ್ಕೆ ಇದೆಯೆಂದು ಒಂದು ಬಗೆಯ ಮೀನಿನ (Tilapia mossambica) ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.
ಮಥೋಟ್ರಿಕ್ಟೇಟ್ ಉಂಟು ಮಾಡುವ ಹಾನಿಯಿಂದ ಕರುಳನ್ನು ಕಾಪಾಡುವ ಗುಣ
★ಸಮಪ್ರಮಾಣದ ತ್ರಿಫಲ ಚೂರ್ಣ (ಅಳಲೆಕಾಯಿ – 1 ಭಾಗ, ತಾರೆಕಾಯಿ- 1 ಭಾಗ ಮತ್ತು ಬೆಟ್ಟದ ನೆಲ್ಲಿಕಾಯಿ – 1 ಭಾಗ) ಮತ್ತು ಅಸಮ ಪ್ರಮಾಣದ ತ್ರಿಫಲ ಚೂರ್ಣ (ಅಳಲೆಕಾಯಿ- 1 ಭಾಗ, ತಾರೆಕಾಯಿ – 2 ಭಾಗ ಮತ್ತು ಬೆಟ್ಟದ ನೆಲ್ಲಿಕಾಯಿ – 4 ಭಾಗ) ವನ್ನು ತಯಾರಿಸಿ, ರಾಸಾಯನಿಕವನ್ನು (Methotrexate) ಸೋವಿಸಲು ಕೊಟ್ಟು (10 ಮಿ.ಗ್ರಾಂ / ಕಿಲೊ ದೇಹದ ತೂಕ) ಕರಳನ್ನು ಹಾನಿಗೊಳಿಸಿದ ಇಲಿಗಳಿಗೆ ಈ ಎರಡೂ ಬಗೆಯ ತ್ರಿಫಲವನ್ನು ಸೇವಿಸಲು ಕೊಟ್ಟು ಪರೀಕ್ಷೆಗೆ ಒಳಪಡಿಸಿದಾಗ ಅಸಮ ಪ್ರಮಾಣದ ತ್ರಿಫಲ ಚೂರ್ಣ (124) ಪರಿಣಾಮಕಾರಿಯಾದ ರೀತಿಯಲ್ಲಿ ರಾಸಾಯನಿಕದಿಂದ ಕರುಳನ್ನು ಕಾಪಾಡುವ ಗುಣ ಹೊಂದಿದೆಯೆಂದು ಕಂಡುಬಂದಿದೆ (ನರಿಯ ಮತ್ತು ಇತರರು, 2009). ಒಟ್ಟಾರೆ ತ್ರಿಫಲ ಚೂರ್ಣಕ್ಕೆ ಕರುಳನ್ನು ಕಾಪಾಡುವ ಗುಣವಿದೆಯೆಂದು ದೃಢಪಟ್ಟಿದೆ.
ಬೆಂಜೊ ಪೈರೀನ್ ಉಂಟು ಮಾಡಿದ ಟ್ಯೂಮರ್ ಗಡ್ಡೆಯನ್ನು ವಾಸಿ ಮಾಡುವ ಗುಣ
★ತ್ರಿಫಲ ಚೂರ್ಣವನ್ನು ಆಹಾರದೊಡನೆ ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷೆ ನಡೆಸಿದಾಗ, ತ್ರಿಫಲ ಚೂರ್ಣಕ್ಕೆ, ಬೆಂಜೊ ಪೈರೀನ್ ರಾಸಾಯನಿಕ ಹೊಟ್ಟೆಯಲ್ಲಿ ಉಂಟು ಮಾಡಿದ ಟ್ಯೂಮರ್ ಗಡ್ಡೆಯನ್ನು ವಾಸಿ ಮಾಡುವ ಗುಣವಿದೆಯೆಂದು ಕಂಡುಬಂದಿದೆ.
ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವ ಗುಣ
★ಪ್ರಯೋಗ ಶಾಲೆಯಲ್ಲಿ ನಡೆಸಿದ ಹಾಗೂ ವಿವಿಧ ಬಗೆಯ ಒತ್ತಡಕ್ಕೆ ಇಲಿಗಳನ್ನು ಒಳಪಡಿಸಿ, ತ್ರಿಫಲ ಚೂರ್ಣವನ್ನು ಸೇವಿಸಲು ಕೊಟ್ಟು ಅವುಗಳನ್ನು ಪರೀಕ್ಷಿಸಿದಾಗ, ತ್ರಿಫಲ ಸೇವಿಸಿದುದರ ಫಲವಾಗಿ ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತೆಂದು ತಿಳಿದುಬಂದಿದೆ. ಈ ಸಂಶೋಧನೆಗಳಿಂದ ತ್ರಿಫಲ ಚೂರ್ಣಕ್ಕೆ ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವ ಗುಣವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
ತಾರೆಕಾಯಿ, ಅಳಲೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿ ಇವುಗಳನ್ನು ವಿವಿಧ ಪ್ರಮಾಣದಲ್ಲಿ 4 (F1), 4 12 8 (F2) 8 4 12 (F3) ಮತ್ತು 8 8 8 (F4)] ಮಾಡಲಾಯಿತು. 4 ಬಗೆಯ ತ್ರಿಫಲ ಮಿಶ್ರಣದ ಚೂರ್ಣದಿಂದ (ನೀರು ಉಪಯೋಗಿಸಿ) ಸತ್ವ ತಯಾರಿಸಿ ಮನುಷ್ಯರ ಕೆಲವು ಬಗೆಯ ಜೀವಕೋಶಗಳ (human lymphocytes (molt 4)] ಮೇಲೆ ಉಪಯೋಗಿಸಿ ಪರೀಕ್ಷಿಸಿದಾಗ, F1 ಚೂರ್ಣಕ್ಕೆ ಪರಿಣಾಮಕಾರಿಯಾದ ರೀತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವ ಗುಣವಿದೆಯೆಂದು ಕಂಡು ಬಂದಿದೆ. ಇದಕ್ಕೆ ಆ ಮಿಶ್ರಣದಲ್ಲಿ ತಾರೆಕಾಯಿಯ ಭಾಗ ಹೆಚ್ಚು ಪ್ರಮಾಣದಲ್ಲಿರುವುದು ಕಾರಣವೆನ್ನಲಾಗಿದೆ.