ಮನೆ ಆರೋಗ್ಯ ತ್ರಿಫಲ

ತ್ರಿಫಲ

0

ತ್ರಿಫಲ ಚೂರ್ಣವನ್ನು ಸಂಗ್ರಹಿಸಿಡುವಾಗ ಕೆಲವೊಮ್ಮೆ ಶಿಲೀಂಧ್ರಗಳು ಬೆಳೆದು ಚೂರ್ಣವನ್ನು ಹಾಳು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ. ತ್ರಿಫಲದಲ್ಲಿರುವ ದ್ರವ್ಯಗಳಾದ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಗಳನ್ನು ಪ್ರತ್ಯೇಕವಾಗಿ ನೀರು ಉಪಯೋಗಿಸಿ ಸತ್ವ ತಯಾರಿಸಿ 5 (Aspergillus flavus, Aspergillus fumigatus, Aspergillus versicolor, Aspergillus terreus and Aspergillus niger) ಶಿಲೀಂಧ್ರದ ಮೇಲೆ ಪ್ರಯೋಗ ನಡೆಸಿದಾಗ ಹಸಿ ಕಾಯಿಗಳಿಂದ ತಯಾರಿಸಿದ ಸತ್ವ, ಒಣಕಾಯಿ ಮತ್ತು ಚೂರ್ಣದಿಂದ ತಯಾರಿಸಿದ ಸತ್ವಕ್ಕಿಂತ ಪರಿಣಾಮಕಾರಿಯಾದ ರೀತಿಯಲ್ಲಿ ಮೊದಲ 4 ಬಗೆಯ ಶಿಲೀಂಧ್ರಗಳನ್ನು ನಾಶಪಡಿಸುತ್ತದೆಯೆಂದು

Join Our Whatsapp Group

ಕಂಡುಬಂದಿದೆ. ಆದರೆ, ಯಾವುದೇ ಬಗೆಯ ಸತ್ಯಕ್ಕೆ ಆಸ್ಪರ್ಜಿಲಸ್ ನೈಜರ್ ಶಿಲೀಂಧ್ರವನ್ನು ನಾಶಪಡಿಸುವ ಸಾಮರ್ಥ್ಯವಿಲ್ಲವೆಂದು ತಿಳಿದುಬಂದಿದೆ. ಬಹುಶಃ ಈ ಪ್ರಭೇದದ ಶಿಲೀಂಧ್ರ ತ್ರಿಫಲ ಚೂರ್ಣದಲ್ಲಿ ಬೆಳೆದು ಚೂರ್ಣವನ್ನು ಕೆಡುವಂತೆ ಮಾಡುತ್ತದೆ.

ಎಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ಯಕ್ಕೆ ಶಿಲೀಂಧ್ರ ನಾಶಕ (Candida albicans) ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ .

 ತ್ರಿಫಲವನ್ನು ಉಪಯೋಗಿಸಿ ಕೈಗೊಳ್ಳಬಹುದಾದ ಕೆಲವು ಸುಲಭ ಚಿಕಿತ್ಸೆಗಳು :

1. ಇಲ್ಲಿ ಸೂಚಿಸಲಾಗಿರುವ ಕೆಲವು ಸರಳ ಚಿಕಿತ್ಸೆಗಳಿಗೆ ವೈದ್ಯರ ಸಲಹೆ ಅನಗತ್ಯ. ಅನುಮಾನಗಳು ಉಂಟಾದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆಯನ್ನು ಮುಂದುವರಿಸಬಹುದು.

2. ಹಲವಾರು ಸಾಮಾನ್ಯ ಹಾಗೂ ಮಾರಣಾಂತಿಕ ಕಾಯಿಲೆಗಳನ್ನು (ಉರಿಮೂತ್ರ ತಡೆಮೂತ್ರ, ವಿಸರ್ಪ, ಗಳಗಂಡ, ಕುಷ್ಠರೋಗ, ಮಧುಮೇಹ, ಮೂಲವ್ಯಾಧಿ, ಭಗಂದರ, ಕಾಮಾಲೆ, ಕ್ಷಯರೋಗ, ಅಪಸ್ಮಾರ, ವಿಷಮ ಜ್ವರ, ತೊನ್ನು, ಪ್ರದರ ಮುಂತಾದ ರೋಗಗಳು) ತ್ರಿಫಲ ಮತ್ತು ತ್ರಿಫಲಯುಕ್ತ ಔಷಧಿಗಳಿಂದ ಚಿಕಿತ್ಸೆ ಮಾಡಬಹುದೆಂದು ಈಗಾಗಲೇ ಅರಿವಿಗೆ ಬಂದಿರುತ್ತದೆ (ಚರಕ, ಧನ್ವಂತರಿ ಮತ್ತು ಸುಶ್ರುತ ಸಂಹಿತೆಯಲ್ಲಿ ವಿವರಿಸಲಾದ ಹಲವಾರು ಚಿಕಿತ್ಸಾ ವಿಧಾನಗಳನ್ನು ಪರಿಶೀಲಿಸಿದಾಗ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಹಲವಾರು ತ್ರಿಫಲಯುಕ್ತ ಔಷಧಿಗಳ ಪಟ್ಟಿಯಲ್ಲಿ ಅವುಗಳ ಉಪಯೋಗವನ್ನು ಅವಲೋಕಿಸಿದ ನಂತರ), ಅಂತಹ ಚಿಕಿತ್ಸೆಗಳನ್ನು ಯಾವುದೇ ಕಾರಣಕ್ಕೂ ವೈದ್ಯರ ಗಮನಕ್ಕೆ ತರದೆ ಸ್ವತಃ ಕೈಗೊಳ್ಳಬಾರದು. ಕಾಯಿಲೆಯನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಗೆ ಔಷಧಿಯನ್ನು ಆಯ್ಕೆ ಮಾಡುವಲ್ಲಿ ಲೋಪ ಉಂಟಾದರೆ ಉದ್ದೇಶಿತ ಗುರಿ ಸಾಧ್ಯವಾಗುವುದಿಲ್ಲ. ಆದುದರಿಂದ ಅಂತಹ ರೋಗಗಳ ಚಿಕಿತ್ಸೆಗೆ ವೈದ್ಯರ ಸಲಹೆ ಸೂಚನೆ ಅತ್ಯಾವಶ್ಯಕ.

3.ತ್ರಿಫಲವನ್ನು ತಯಾರು ಮಾಡಿದ ಒಂದು ವರ್ಷದೊಳಗೆ ಅಥವಾ ತಯಾರಿಕಾ ಕಂಪನಿ ಸೂಚಿಸಿದ ಅವಧಿಯೊಳಗೆ ಉಪಯೋಗಿಸಬೇಕು. ಸಂಗ್ರಹಿಸಿಡುವಾಗ ತೇವಾಂಶ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕು. ತ್ರಿಫಲ ಚೂರ್ಣವನ್ನು ತಯಾರಿಸುವ ಹಂತದಲ್ಲಾಗಲಿ ಅಥವಾ ಉಪಯೋಗಿಸುವ ಹಂತದಲ್ಲಾಗಲಿ ಎಚ್ಚರ ತಪ್ಪಿದರೆ ತೇವಾಂಶದಿಂದಾಗಿ ಸುಮಾರು 20 ಬಗೆಯ ಶಿಲೀಂಧ್ರಗಳು – ಆಸ್ಪರ್ಜಿಲಲ್ ಜಾತಿಗೆ ಸೇರಿದ 8 ಪ್ರಭೇದಗಳು, ಪೆನಿಸಿಲಿಯಂ ಜಾತಿಗೆ ಸೇರಿದ 4 ಪ್ರಭೇದಗಳು, ಹೆಲ್ಮಿಂಥೋಸ್ಟೋರಿಯಂ, ಕುರ್ವುಲಾರಿಯ, ಆಲ್ಟರ್‌ನಾರಿಯ, ಜಿಯೋಫ್ರಿಕಂ, ಪುಸೇರಿಯಂ ರೈಸೋಪಸ್, ಪೆಸಿಲೊಮೈಸಿನ್, ಸಿನ್ ಸಿಫೆಲಾಸ್ಟಂ ಜಾತಿಗೆ ಸೇರಿದ ತಲಾ ಒಂದೊಂದು ಪ್ರಭೇದಗಳು ತ್ರಿಫಲದ ಸೋಂಕಿಗೆ ಕಾರಣವಾಗುತ್ತವೆ. ಬೂಷ್ಟು / ಶಿಲೀಂಧ್ರ ಬೆಳೆದ ಚೂರ್ಣವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಈ ಶಿಲೀಂಧ್ರಗಳು ಚೂರ್ಣಕ್ಕೆ ಅಫಟಾಕ್ಸಿನ್ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿರುತ್ತವೆ. ಈ ಕ್ರಿಯೆ ತ್ರಿಫಲಾಗೆ ಮಾತ್ರ ಸೀಮಿತವಲ್ಲ, ಬೂಸ್ಟು ಬೆಳೆದಿರುವ ಎಲ್ಲಾ ಆಹಾರ ವಸ್ತುಗಳಲ್ಲೂ ನಡೆದಿರುತ್ತದೆ. ಎಚ್ಚರ ತಪ್ಪಿ ಇಂತಹ ಹಾಳಾದ ತ್ರಿಫಲವನ್ನು ಸೇವಿಸಿದರೆ ಅದರಲ್ಲಿರುವ ಆಫ್ಲಟಾಕ್ಸಿನ್ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ (ಗೌತಮ್ ಮತ್ತು ಭಹದೂರಿಯ, 2011).

4. ಮೊದಲ ಬಾರಿಗೆ ತ್ರಿಫಲ ಚೂರ್ಣ ಸೇವಿಸಿದಾಗ ಹೊಟ್ಟೆಯ ನುಲಿತ, ಹೊಟ್ಟೆಯಲ್ಲಿ ಗುಳುಗುಳು ಶಬ್ದ ಒಂದು ತರಹ ಕಸಿವಿಸಿ ಕೆಲವರಿಗೆ ಉಂಟಾಗುತ್ತದೆ. ಆದರೆ ಇದು ಕ್ಷಣಿಕ, ಪ್ರತಿಕೂಲ ಪರಿಣಾಮವೆಂದು ಗಾಭರಿಯಾಗಬೇಕಿಲ್ಲ.

5. ತ್ರಿಫಲ ಚೂರ್ಣವನ್ನು ಹಾಲಿನೊಡನೆ ಸೇವಿಸಬಾರದು. ಇದರಿಂದ ದೇಹಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಚೂರ್ಣವನ್ನು ಹಾಲಿಗೆ ಮಿಶ್ರಣ ಮಾಡಿದಾಗ, ಹಾಲು ಒಡೆದು ಗರಣೆಯಂತಾಗುತ್ತದೆ. ಏಕೆಂದರೆ ತ್ರಿಫಲದಲ್ಲಿ ಬೆಟ್ಟದ ನೆಲ್ಲಿಕಾಯಿ ಒಂದು ಭಾಗವಾಗಿರುವುದರಿಂದ ಅದರ ಆಮ್ಮಿಯ ಘಟಕ ಹಾಲನ್ನು ಒಡೆಯುವಂತೆ ಮಾಡುತ್ತದೆ. ತ್ರಿಫಲವನ್ನು ಹಾಲಿಗೆ ಮಿಶ್ರಣ ಮಾಡುವುದರ ಬದಲು ಅವಶ್ಯವಿದ್ದಲ್ಲಿ ಚೂರ್ಣ ಸೇವಿಸಿದ ಅರ್ಧ ಗಂಟೆಯ ನಂತರ ಕುಡಿಯಬಹುದು.

6.ತ್ರಿಫಲ ಚೂರ್ಣದ ಪೂರ್ಣ ಪ್ರಯೋಜನ ಪಡೆಯಬೇಕೆನ್ನುವವರು, ಆಯುರ್ವೇದ ಗ್ರಂಥಗಳಲ್ಲಿ ಸೂಚಿಸಿರುವಂತೆ ಆಯಾ ಋತುವಿಗೆ ಸೂಚಿಸಿರುವ ಅನುಪಾನದೊಡನೆ ಸೇವಿಸಬೇಕು. ಸರ್ವ ಋತುಗಳಲ್ಲೂ ಉಗುರು ಬೆಚ್ಚಗಿನ ನೀರಿನೊಡನೆ ತ್ರಿಫಲವನ್ನು ಸೇವಿಸಬಹುದಾಗಿದೆ.

 ಋತುಗಳು   ಅನುಪಾನ

1. ವಸಂತ ಋತು ) (Spring)—

ಜೇನುತುಪ್ಪ

2- ಗ್ರೀಷ್ಮ ಋತು (Summer)—

ಬೆಲ್ಲ / ಮಜ್ಜಿಗೆ

3. ವಸಂತ ಋತು(Mansoon)— ಸೈಂಧ್ರ ಲವಣ

 ಶರದ್ ಋತು   —ಕಲ್ಲು ಸಕ್ಕರ

5. ಹೇಮಂತ ಋತು (Pre-winter) — ಶುಂಠಿ

6. ಶಿಶಿರ ಋತು  (Winter)—

ಹಿಪ್ಪಲಿ

ಅನುಪಾನದ ಪ್ರಮಾಣ 1 ಭಾಗ ತ್ರಿಫಲ: ಈ ಭಾಗ ಶುಂಠಿ / ಹಿಪ್ಪಲಿ / ಸೈಂಧವ ಲವಣ, ಇತರ ದ್ರವ್ಯಗಳು I pin)

7. ಸಾಮಾನ್ಯವಾಗಿ ಉಪಯೋಗಿಸುವ ತ್ರಿಫಲದಲ್ಲಿ ಬೀಜ ತೆಗೆದ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಸಮ ಪ್ರಮಾಣದಲ್ಲಿ (1:1:1) ಮಿಶ್ರಣ ಮಾಡಿರುತ್ತಾರೆ. ಕೆಲವೊಮ್ಮೆ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಅಥವಾ ರಸಾಯನವಾಗಿ ಉಪಯೋಗಿಸುವ ಉದ್ದೇಶದಿಂದ ಒಂದು ಭಾಗ ಅಳಲೆಕಾಯಿ, ಎರಡು ಭಾಗ ತಾರೆಕಾಯಿ ಮತ್ತು ನಾಲ್ಕು ಭಾಗ ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು (1:2:4) ಮಿಶ್ರಣ ಮಾಡಿ ಉಪಯೋಗಿಸುತ್ತಾರೆ.

 ತ್ರಿಫಲ ಸೇವಿಸುವ ಪ್ರಮಾಣ

1. ಚೂರ್ಣ : 2-4 ಗ್ರಾಂ ದಿನಕ್ಕೆ, ವಿಭಜಿತ ಭಾಗದಲ್ಲಿ,

2 ಮಾತ್ರೆ :1-2, ಮಾತ್ರೆ ದಿನಕ್ಕೆ ಎರಡು ಬಾರಿ . (500, 750 ಮಿ. ಗ್ರಾಂ)

3.ಕ್ಯಾತ / ಕಷಾಯ : 10-20 ಮಿ.ಲೀ., ದಿನಕ್ಕೆ 2 ಬಾರಿ.

 ತ್ರಿಫಲ ಕ್ಯಾತ | ಕಷಾಯ ತಯಾರಿಸುವ ವಿಧಾನ :

     ಒಂದು ಭಾಗ ತ್ರಿಫಲ ಚೂರ್ಣಕ್ಕೆ 16 ಭಾಗ ಶುದ್ಧ ನೀರು ಸೇರಿಸಿ ಒಂದು ಗಂಟೆ ನೆನೆಸಿಡಬೇಕು. ಅರ್ಧ ಭಾಗ ಕಷಾಯ ಉಳಿಯುವವರೆಗೆ ಮಂದಾಗ್ನಿಯಲ್ಲಿ ಕಾಯಿಸಿ ಸೋಸಿ ಶೇಖರಿಸಿಡಬೇಕು. ಪ್ರತಿ ಬಾರಿ ಉಪಯೋಗಿಸುವಾಗಲೂ ಕಷಾಯವನ್ನು ಹೊಸದಾಗಿ ತಯಾರಿಸಿಕೊಳ್ಳಬೇಕು.

 ತ್ರಿಫಲ ಚೂರ್ಣ ಸೇವನೆಯಿಂದಾಗುವ ಉಪಯೋಗಗಳು :

ತ್ರಿಫಲ ಚೂರ್ಣ, 3 ಫಲಗಳಾದ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಗಳ ಮಿಶ್ರಣ. ಪ್ರತ್ಯೇಕವಾಗಿ, ಪ್ರತಿ ಫಲಕ್ಕೂ ಈ ಮೊದಲು ವಿವರಿಸಲಾಗಿರುವ ಔಷಧೀಯ ಗುಣಗಳು ತ್ರಿಫಲದಲ್ಲೂ ಸಂಮ್ಮಿಳತವಾಗಿರುತ್ತದೆ ಹಾಗೂ ಪರಿಣಾಮಕಾರಿಯಾದ ರೀತಿಯಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಮತ್ತೊಮ್ಮೆ ಆ ಎಲ್ಲಾ ಉಪಯೋಗಗಳನ್ನು ಪಟ್ಟಿ ಮಾಡುವುದರಿಂದ ಪುನರಾವರ್ತನೆಯಾಗುತ್ತದೆ ಎಂಬ ಕಾರಣದಿಂದ ವಿವರಣೆಯನ್ನು ಕೊಟ್ಟಿರುವುದಿಲ್ಲ. ಆದರೂ ಕೆಲವೊಂದು ಔಷದೀಯ ಉಪಯೋಗಗಳನ್ನು ಸೂಚಿಸಲಾಗಿದೆ.