ಬಾಯಿ ಮುಕ್ಕಳಿಸಲು (Mouth rinse ) ಉಪಯೋಗಿಸುವ ದ್ರಾವಣದ ಮುಖ್ಯ ಉದ್ದೇಶ
1 ಬಾಯಿಯಲ್ಲಿರುವ ಬ್ಯಾಕ್ಟಿರಿಯವನ್ನು ನಾಶಪಡಿಸುವುದು.
2 ದಂತಕ್ಷಯ ಮತ್ತು ವಸಡಿನ ಕಾಯಿಲೆಗಳಿಂದ ಹಲ್ಲು ಮತ್ತು ವಸಡನ್ನು ರಕ್ಷಿಸುವುದು.
3. ಬಾಯಿಯ ದುರ್ಗಂಧವನ್ನು ನಿವಾರಿಸುವುದು.
ಉಪಯೋಗದಲ್ಲಿರುವ ಮತ್ತು ಬಹುವಾಗಿ ಬಳಸುತ್ತಿರುವ ಬಾಯಿ ಮುಕ್ಕಳಿಸುವ ದ್ರಾವಣದಲ್ಲಿ ಕೊರೆಕ್ಸಿಡೈನ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದನ್ನು ಮಾದರಿ ಬಾಯಿ ಮುಕ್ಕಳಿಸುವ ದ್ರಾವಣವೆಂದು ಪ್ರಯೋಗ ಶಾಲೆಯಲ್ಲಿ ಪರಿಗಣಿತವಾಗಿದೆ.
ಕೊರೆಕ್ಸಿಡೈನ್ ದ್ರಾವಣವನ್ನು ಅತಿಯಾಗಿ ಬಳಸುವುದರಿಂದ ಪ್ರತಿಕೂಲ ಪರಿಣಾಮವಾಗಿ ಬಾಯಿಯ ಒಳ ಅಂಗಳದಲ್ಲಿ ಗುಳ್ಳೆಗಳಾಗುವ ಮತ್ತು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವ ಸಂಭವವಿರುತ್ತದೆ. ಆದುದರಿಂದ ಪ್ರತಿಕೂಲ ಪರಿಣಾಮಗಳಿಲ್ಲದ ನೈಸರ್ಗಿಕ / ಸಸ್ಯಜನ್ಯ ಹಾಗೂ ಬಾಯಿಯ ಸಂಪೂರ್ಣ ಆರೋಗ್ಯವನ್ನು ಕಾಪಾಡುವ ಬಾಯಿ ಮುಕ್ಕಳಿಸುವ ದ್ರಾವಣದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ನೈಸರ್ಗಿಕ / ಸಸ್ಯಜನ್ಯ ಬಾಯಿ ಮುಕ್ಕಳಿಸುವ ದ್ರಾವಣದ ಮುಖ್ಯ ಗುರಿ ಪ್ರತಿಕೂಲ 20ಣಾಮಗಳಿಲ್ಲದೆ ಒಟ್ಟಾರೆ ಬಾಯಿಯ ಆರೋಗ್ಯವನ್ನು ಕಾಪಾಡುವುದು. ತಿಫಲ, ತುಳಸಿ ಎಲೆ ಜ್ಯೋತಿಶ್ಮತ್ತಿ ಲವಂಗದೆಣ್ಣೆ, ಪುದಿನ, ಅಜವಾನ ಮುಂತಾದವುಗಳನ್ನು ಪ್ರತ್ಯೇಕವಾಗಿ ಸಾ ಸಂಯುಕ್ತವಾಗಿ ಹಲವಾರು ಬಗೆಯ ಬಾಯಿ ಮುಕ್ಕಳಿಸುವ ದ್ರಾವಣ ತಯಾರಿಸಿ ಉಯೋಗಿಸಲಾಗುತ್ತಿದೆ. ಇಂತಹ ಸಸ್ಯಜನ್ಯ ಬಾಯಿ ಮುಕ್ಕಳಿಸುವ ದ್ರಾವಣದಲ್ಲಿ, ಸಸಾಯನಿಕ ದ್ರಾವಣದಲ್ಲಿರುವಂತೆ ಮದ್ಯಸಾರ, ಕೃತಕ ಸಿಹಿ, ಕೃತಕ ಬಣ್ಣ ಮತ್ತು ಇಡ್ ಅಂಶಗಳಿರುವುದಿಲ್ಲ.
ಷಈ ಕೆಳಗೆ ಆಯ್ಕೆ ಮಾಡಿರುವ ಸಂಶೋಧನೆಗಳಲ್ಲಿ ತ್ರಿಫಲದಿಂದ ತಯಾರಿಸಿದ ಬಾಯಿ ಮುಕ್ಕಳಿಸುವ ದ್ರಾವಣದ ಉಪಯುಕ್ತತೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ.
8 12 ವಯೋಮಾನದ 1501 ವಿದ್ಯಾರ್ಥಿಗಳಲ್ಲಿ ಕೆಲವರಿಗೆ ತ್ರಿಫಲದಿಂದ ಕೆಲವರಿಗೆ ಕೊರೆಕ್ಸಿಡೈನ್ ದ್ರಾವಣದಿಂದ ಬಾಯಿ ಮುಕ್ಕಳಿಸಲು ತಿಳಿಸಲಾಯಿತು. 9 ತಿಂಗಳ ನಂತರ ಪರೀಕ್ಷಿಸಿದಾಗ, ಎರಡು ದ್ರಾವಣಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವೆಂದು ವರದಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ತ್ರಿಫಲ ಮತ್ತು ಕ್ಲೋರೆಕ್ಸಿಡೈನ್ ದ್ರಾವಣದಿಂದ ಬಾಯಿ ಮುಕ್ಕಳಿಸಿದುದರ ಪರಿಣಾಮವಾಗಿ ಹಲ್ಲಿನ ಮೇಲೆ ಕರೆ ಕಟ್ಟದೆ ಹಲ್ಲುಗಳು ಆರೋಗ್ಯವಾಗಿದ್ದವೆಂದು ವರದಿಯಗಿದೆ.
24 ಮಂದಿಗೆ ತ್ರಿಫಲ ಚೂರ್ಣದ ನೀರಿನಿಂದ 45 ದಿನಗಳವರೆಗೆ ಬಾಯಿ ಮುಕ್ಕಳಿಸುವಂತೆ ತಿಳಿಸಿ ನಂತರ ಪರೀಕ್ಷಿಸಿದಾಗ ವಸಡಿನ ಕಾಯಿಲೆ ಕಡಿಮೆಯಾಗಿರುವುದು ಕಂಡುಬಂದಿದೆ. ತ್ರಿಫಲದ ನೀರಿಗೂ ಮತ್ತು ಕ್ಲೋರೆಕ್ಸಿಡೈನ್ ದ್ರಾವಣಕ್ಕೂ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲವೆಂದು ವರದಿಯಾಗಿದೆ.
50 ಮತ್ತು 57 ಮಂದಿಯ ಮೇಲೆ ಪ್ರತ್ಯೇಕವಾಗಿ ನಡೆಸಿದ ಪ್ರಯೋಗದಿಂದಲೂ ಮೇಲಿನ ಸಂಗತಿ ದೃಡಪಟ್ಟಿದೆ.
ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಬ್ಯಾಕ್ಟಿರಿಯ (Streptococcus) ವನ್ನು ನಾಶಪಡಿಸುವ ಗುಣ ತ್ರಿಫಲಗೆ ಇದೆಯೆಂದು ತಿಳಿಯುವ ಉದ್ದೇಶದಿಂದ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ. 18-26 ವಯೋಮಾನದ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 3 ಗುಂಪು ಮಾಡಲಾಯಿತು. ಒಂದನೆಯ ಗುಂಪಿಗೆ ಉಪಯೋಗಿಸಿ ತಯಾರಿಸಿದ 6% ತ್ರಿಫಲ ನೀರಿನಿಂದ ದಿನಕ್ಕೆ 2 ಬಾರಿ ಬಾಯಿ ಸಲು ತಿಳಿಸಲಾಯಿತು. ಎರಡನೆಯ ಗುಂಪಿಗೆ 0.2% ಸಾಂದ್ರತೆಯ ಲೆಕ್ಸಿಡೈನ್ ದ್ರಾವಣದಿಂದ ಮೇಲಿನಂತೆ ಬಾಯಿ ಮುಕ್ಕಳಿಸಲು ಸೂಚಿಸಲಾಯಿತು.
ಮೂರನೆಯ ಗುಂಪಿಗೆ ಕೇವಲ ನೀರಿನಿಂದ ಬಾಯಿ ಮುಕ್ಕಳಿಸಲು ತಿಳಿಸಲಾಯಿತು. ಎಲ್ಲಾಗುಂಪಿನ ವಿದ್ಯಾರ್ಥಿಗಳ ಜೊಲ್ಲಿನ ಮಾದರಿಯನ್ನು 48 ಗಂಟೆಗಳ ನಂತರ ಮತ್ತು 7 ದಿನಗಳ ನಂತರ ಪರೀಕ್ಷಿಸಿದಾಗ, ತ್ರಿಫಲ ನೀರಿಗೆ (60/0), ಕೊರೆಕ್ಸಿಟೈನ್ ದ್ರಾವಣದಷ್ಟೇ ಪರಿಣಾಕಾರಿಯಾದ ರೀತಿಯಲ್ಲಿ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಗುಣ ಇದೆಯೆಂದು ಕಂಡುಬಂದಿದೆ .
8-12 ವಯೋಮಾನದ, 4-7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಪರಿಶೀಲಿಸಿ, 1309 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 3 ಗುಂಪು ಮಾಡಲಾಯಿತು.
ಗುಂಪು 1: (457 ವಿದ್ಯಾರ್ಥಿಗಳು) ಇವರಿಗೆ 6% ತ್ರಿಫಲ ಚೂರ್ಣದ ನೀರಿನಿಂದ ಬಾಯಿ ಮುಕ್ಕಳಿಸಲು ತಿಳಿಸಲಾಯಿತು.
ಗುಂಪು 2 : (440 ವಿದ್ಯಾರ್ಥಿಗಳು) ಇವರಿಗೆ ಕ್ಲೋರೆಕ್ಸಿಡೈನ್ (0.1%) ದ್ರಾವಣದಿಂದ ಬಾಯಿ ಮುಕ್ಕಳಿಸಲು ಕೊಡಲಾಯಿತು.
ಗುಂಪು 3 : (412 ವಿದ್ಯಾರ್ಥಿಗಳು) ಇವರಿಗೆ ಭಟ್ಟಿ ಇಳಿಸಿದ ಶುದ್ಧ ನೀರನ್ನು ಕೊಟ್ಟು ಬಾಯಿ ಮುಕ್ಕಳಿಸಲು ಸೂಚಿಸಲಾಯಿತು.
ಈ ಚಿಕಿತ್ಸೆಯನ್ನು 9 ತಿಂಗಳವರೆಗೆ ಮುಂದುವರಿಸಿದ ನಂತರ, ಹಲ್ಲಿನ ಮೇಲೆ ಕರೆ ಕಟ್ಟುವುದರ ಬಗ್ಗೆ, ವಸಡಿನ ಉರಿಯೂತದ ಬಗ್ಗೆ (Gingivitis) ಮತ್ತು ಬ್ಯಾಕ್ಟಿರಿಯಗಳ ಸಂಖ್ಯೆಯ ಬಗ್ಗೆ (Streptococcus, Lactobacilli) ಪರಿಶೀಲಿಸಿದಾಗ, ಗುಂಪು 1 ಮತ್ತು ಗುಂಪು 2 ರಲ್ಲಿನ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ. ಈ ಗುಂಪಿನವರಲ್ಲಿ ಹಲ್ಲಿನ ಮೇಲೆ ಕರೆ ಕಟ್ಟುವುದು ಮತ್ತು ವಸಡಿನ ಉರಿಯೂತ ಕಡಿಮೆಯಾಗಿರುವುದು ದೃಢಪಟ್ಟಿದೆ. ಈ ಗುಂಪಿನವರ ಜೊಲ್ಲಿನಲ್ಲಿ ಬ್ಯಾಕ್ಟಿರಿಯಗಳ ಪ್ರಮಾಣ ಕೂಡಾ ಕಡಿಮೆಯಾಗಿತ್ತೆಂದು ವರದಿಯಾಗಿದೆ. ಕೊರೆಹೆಕ್ಸಿಡೈನ್ ದ್ರಾವಣಕ್ಕಿಂತ ತ್ರಿಫಲ ಹೆಚ್ಚು ಪರಿಣಾಮಕಾರಿಯೆಂದು ಕಂಡುಬಂದಿದೆ .
30 ಮಂದಿಯನ್ನು ಆಯ್ಕೆ ಮಾಡಿ ಕೆಲವರಿಗೆ ತ್ರಿಫಲ, ಕೆಲವರಿಗೆ ಹಿ-ಒರ (Hi-Ora), ಮತ್ತೆ ಕೆಲವರಿಗೆ ಕೊರೆಕ್ಸಿಡೈನ್ ಮತ್ತು ಉಳಿದವರಿಗೆ ಕೊಲೈಟ್ ಪ್ಲಾಕ್ಸ್ (Colgate Plax) ಅನ್ನು ಕೊಟ್ಟು ಬಾಯಿ ಮುಕ್ಕಳಿಸಲು ತಿಳಿಸಲಾಯಿತು. 28 ದಿನಗಳವರೆಗೆ ಈ ಚಿಕಿತ್ಸೆಯನ್ನು ಮುಂದುವರಿಸಿದ ನಂತರ ಪರೀಕ್ಷಿಸಿದಾಗ, ತ್ರಿಫಲ ಮತ್ತು ಹಿ-ಒರ, ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯುವಲ್ಲಿ ಕೊರೆಕ್ಸಿಡೈನ್ ಮೌತ್ ವಾಷ್‌ನಷ್ಟೆ ಪರಿಣಾಮಕಾರಿಯೆಂದು ಕಂಡುಬಂದಿದೆ ಮತ್ತು ಕೊಲ್ಲೇಟ್ ಪ್ಲಾಕ್ಸ್ ಗಿಂತ ಉತ್ತಮವೆಂದು ವರದಿಯಾಗಿದೆ
60 ಮಂದಿ ಶಾಲಾ ಮಕ್ಕಳ ಮೇಲೆ ನಡೆಸಿದ ಪ್ರಯೋಗದ ಪ್ರಕಾರ ತ್ರಿಫಲ ಚೂರ್ಣದಿಂದ ಬಾಯಿ ಮುಕ್ಕಳಿಸುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಹಲ್ಲು ಹುಳುಕಾಗುವುದಿಲ್ಲ. ಹಲ್ಲಿನ ಮೇಲೆ ಕರೆ ಕಟ್ಟುವುದಿಲ್ಲ ಮತ್ತು ವಸಡಿನ ಉರಿಯೂತ ಉಂಟಾಗುವುದಿಲ್ಲವೆಂದು ಕಂಡುಬಂದಿದೆ. ತಿಫಲ ಚೂರ್ಣ ಕೊರೆಕ್ಸಿಡೈನ್ ದ್ರಾವಣದಷ್ಟೇ ಪರಿಣಾಮಕಾರಿ ಎಂದು ತಿಳಿದುಬಂದಿದೆ.ಮ
30 ಮಂದಿ ರೋಗಿಗಳ ಮೇಲೆ ನಡೆಸಿದ ಪ್ರಯೋಗದ ಆಧಾರದ ಮೇಲೆ, ತ್ರಿಫಲ ಉಪಯೋಗಿಸಿ ಬಾಯಿ ಮುಕ್ಕಳಿಸುವುದರಿಂದ, ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಬ್ಯಾಕ್ಟಿರಿಯ (Streptococcus mutans) ವನ್ನು ನಾಶಪಡಿಸಬಹುದು ಎಂದು ತಿಳಿದುಬಂದಿದೆ.
60 ಮಂದಿ ರೋಗಿಗಳ ಮೇಲೆ ನಡೆಸಿದ ಪ್ರಯೋಗದ ಪ್ರಕಾರ, ತ್ರಿಫಲ ಚೂರ್ಣದಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನ ಮೇಲೆ ಕರೆ ಕಟ್ಟುವುದಿಲ್ಲ. ವಸಡಿನಲ್ಲಿ ಉರಿಯೂತ ಉಂಟಾಗುವುದಿಲ್ಲ ಮತ್ತು ಬಾಯಿಯಿಂದ ವಾಸನೆ ಬರುವುದಿಲ್ಲವೆಂದು ವರದಿಯಾಗಿದೆ. ಒಟ್ಟಾರೆ ಬಾಯಿಯ ರಕ್ಷಣೆಗೆ ಕೊರೆಕ್ಸಿಡೈನ್ ದ್ರಾವಣಕ್ಕಿಂತ ಪರಿಣಾಮಕಾರಿಯೆನ್ನಲಾಗಿದೆ.
15 40 ವಯೋಮಾನದ ವ್ಯಕ್ತಿಗಳ ಮೇಲೆ ನಡೆಸಿದ ಪ್ರಯೋಗದ ಪ್ರಕಾರ 10% ತ್ರಿಫಲ ಚೂರ್ಣ ದ್ರಾವಣಕ್ಕೆ (ತ್ರಿಫಲ – ನೀರು) ಪರಿಣಾಮಕಾರಿಯಾದ ರೀತಿಯಲ್ಲಿ ಜೊಲ್ಲಿನಲ್ಲಿ ಅಡಕವಾಗಿರುವ ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಸ್ಪೆಪ್ರೊಕಾಕಸ್ ಮುಟಾನ್ಸ್ ಬ್ಯಾಕ್ಟಿರಿಯವನ್ನು ನಾಶಪಡಿಸುವ ಗುಣವಿದೆಯೆಂದು ವರದಿಯಾಗಿದೆ .
ವಸಡಿನ ಉರಿಯೂತದ (Periodontal disease) ಚಿಕಿತ್ಸೆಗೆ ದಾಖಲಾದ 120 ಮಂದಿ ರೋಗಿಗಳನ್ನು ಆಯ್ಕೆ ಮಾಡಿ, ಪ್ರತಿ ಗುಂಪಿನಲ್ಲಿ 40 ಮಂದಿಯಂತೆ 3 ಗುಂಪು ಮಾಡಲಾಯಿತು.
ಗುಂಪು ಎ : ಇವರಿಗೆ ಭಟ್ಟಿ ಇಳಿಸಿದ ಶುದ್ಧನೀರಿನಿಂದ ಬಾಯಿ ಮುಕ್ಕಳಿಸಲು ತಿಳಿಸಲಾಯಿತು.
ಗುಂಪು ಬಿ : ಇವರಿಗೆ 2% ಕ್ಲೋರೆಕ್ಸಿಡೈನ್ ದ್ರಾವಣದಿಂದ ಬಾಯಿ ಮುಕ್ಕಳಿಸಲು ಸೂಚಿಸಲಾಯಿತು.
ಗುಂಪು ಸಿ : ಇವರಿಗೆ ತ್ರಿಫಲ ಮಿಶ್ರಣ ಮಾಡಿದ ನೀರನ್ನು ಬಾಯಿ ಮುಕ್ಕಳಿಸಲು ಕೊಡಲಾಯಿತು.
ಎಲ್ಲರಿಗೂ ಆಯಾ ಗುಂಪಿಗೆ ಕೊಟ್ಟ ದ್ರಾವಣದಿಂದ ಒಂದು ನಿಮಿಷ ಕಾಲದಂತೆ ದಿನಕ್ಕೆ 2 ಬಾರಿ ಬಾಯಿ ಮುಕ್ಕಳಿಸುವಂತೆ ತಿಳಿಸಲಾಯಿತು. 15ದಿನಗಳ ನಂತರ ಎಲ್ಲರನ್ನು ದಿರೀಕ್ಷೆಗೆ ಒಳಪಡಿಸಿದಾಗ, ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯುವಲ್ಲಿ ಮತ್ತ ವಸಡಿನ ಉರಿಯೂತವನ್ನು ವಾಸಿ ಮಾಡುವಲ್ಲಿ ತ್ರಿಫಲ ಚೂರ್ಣ, ಕೊರೆಕ್ಸಿಟ್ಟಿನ ದ್ರಾವಣದಷ್ಟೇ ಪರಿಣಾಮಕಾರಿ ಹಾಗೂ ಸುಲಭವಾಗಿ ದೊರೆಯುವ ಪರಿಣಾಮಕಾರಿ ಔಷಧಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವಸಡಿನ ಉರಿಯೂತಕ್ಕೆ (Gingivitis) ಸಂಬಂಧಿಸಿದಂತೆ ಪ್ರಕಟವಾದ ಸುಮಾರು 251 ಸಂಶೋಧನಾ ಪ್ರಬಂಧಗಳನ್ನು ಪರಾಮರ್ಶಿಸಿದ ನಂತರ ಸಿದ್ದ ಪಡಿಸಿದ ವಿಮರ್ಷಾ ವರದಿಯ ಪ್ರಕಾರ ತ್ರಿಫಲ ಸತ್ಯಕ್ಕೆ ವಸಡಿನ ಉರಿಯೂತದ ಚಿಕಿತ್ಸೆಗೆ ಉಪಯುಕ್ತವೆಂದು ಕಂಡು ಬಂದಿದೆ
ಹಲವಾರು ಸಂಶೋಧನೆಗಳಿಂದ ತಿಳಿದುಬರುವ ಸಾರಾಂಶವೆಂದರೆ, ತ್ರಿಫಲದಿಂದ ಬಾಯಿ ಮುಕ್ಕಳಿಸುವುದರಿಂದ ದಂತ ರೋಗಗಳು ಮತ್ತು ವಸಡಿಗೆ ಸಂಬಂಧಿಸಿದ ರೋಗಗಳು ಉಂಟಾಗುವುದಿಲ್ಲವೆಂಬ ಅಭಿಪ್ರಯಕ್ಕೆ ಬರಲಾಗಿದೆ.
ತ್ರಿಫಲ ಚೂರ್ಣಕ್ಕೆ ಆ್ಯಂಟಿಆಕ್ಸಿಡೆಂಟ್ ಗುಣ, ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯುವ ಗುಣ ಮತ್ತು ಬ್ಯಾಕ್ಟಿರಿಯಗಳಿಂದ ಉಂಟಾಗುವ ವಸಡಿನ ಉರಿಯೂತವನ್ನು ವಾಸಿ ಮಾಡುವ ಗುಣ ಇದೆಯೆಂಬ ವಿಷಯ ಈಗಾಗಲೇ ತಿಳಿದಿದೆ. ಪ್ರಸ್ತುತ ವಿಮರ್ಶಾ ಪ್ರಪಂಧದಲ್ಲಿ ಆ್ಯಂಟಿ ಬಯೋಟಿಕ್ ಔಷಧಿಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ದಂತ ಮತ್ತು ವಸಡಿನ ಕಾಯಿಲೆಗಳಿಗೆ ಕಾರಣವಾದ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಹಾಗೂ ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ತ್ರಿಫಲ ಕಷಾಯವನ್ನು ಉಪಯೋಗಿಸುವುದರ ಬಗ್ಗೆ ಮತ್ತು ದಂತ ಚಿಕಿತ್ಸೆಯಲ್ಲಿ ತ್ರಿಫಲದ ಉಪಯೋಗದ ಬಗ್ಗೆ ಚರ್ಚಿಸಲಾಗಿದೆ.
ಹಲವಾರು ಸಂಶೋಧನಾ ಪ್ರಬಂಧಗಳನ್ನು ಪರಾಮರ್ಶಿಸಿ ತಯಾರಿಸಿದ ವರದಿಯ ಪ್ರಕಾರ ದಂತರೋಗ ಚಿಕಿತ್ಸೆಗೆ ಉತ್ತಮ ಔಷಧಿಯಾಗುವ ಎಲ್ಲಾ ಲಕ್ಷಣಗಳಿವೆ. ಹೆಚ್ಚಿನ ಸಂಖ್ಯೆಯ ರೋಗಿಗಳ ಮೇಲೆ ಪ್ರಯೋಗ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವ ಅವಶ್ಯಕತೆಯಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.














