ಬೊಜ್ಜು ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಚಿಕಿತ್ಸೆ :
70 ಮಂದಿ ಬೊಜ್ಜು ಬೆಳೆದಿರುವ ರೋಗಿಗಳನ್ನು ಆಯ್ಕೆ ಮಾಡಿ 3 ತಿಂಗಳು ತ್ರಿಫಲವನ್ನು ಸೇವಿಸಲು ಕೊಡಲಾಯಿತು. ಅವಧಿಯ ನಂತರ ತ್ರಿಫಲ ಸೇವಿಸಿದ ಗುಂಪಿನವರಲ್ಲಿ ದೇಹದ ತೂಕ ಮತ್ತು ಸೊಂಟದ ಸುತ್ತಳತೆ ಕಡಿಮೆಯಾಗಿರುವುದು ಕಂಡು ಬಂದಿದೆ. ದೇಹದಲ್ಲಿನ ಕೊಲೆಸ್ಟಿರಾಲ್ ಮತ್ತು ಟ್ರೈಗಿಸರೈಡ್ ಪ್ರಮಾಣ ಸಹ ಕಡಿಮೆಯಾಗಿತ್ತೆಂದು ವರದಿಯಾಗಿದೆ.
16-60 ವಯೋಮಾನದ ಬೊಜ್ಜು ಬೆಳೆದಿರುವ 62 ಮಂದಿಯನ್ನು ಆಯ್ಕೆ ಮಾಡಿ, ನಿರ್ದಿಷ್ಟ ನಿಯಮವಿಲ್ಲದೆ ಆಯ್ದ 31 ಮಂದಿಗೆ 5 ಗ್ರಾಂ ತ್ರಿಫಲ ಚೂರ್ಣವನ್ನು ದಿನಕ್ಕೆ 2 ಬಾರಿ ಸೇವಿಸಲು ಸೂಚಿಸಲಾಯಿತು. ಉಳಿದ 31 ಮಂದಿಗೆ ಔಷಧಿಯೇತರ ವಸ್ತುವನ್ನು ಸೇವಿಸಲು ಕೊಡಲಾಯಿತು. ಈ ಚಿಕಿತ್ಸೆಯನ್ನು 12 ವಾರಗಳವರೆಗೆ ಮುಂದುವರಿಸಲಾಯಿತು. ಅವಧಿಯ ನಂತರ 62 ಮಂದಿಯನ್ನು ಪರೀಕ್ಷಿಸಿದಾಗ, ತ್ರಿಫಲ ಚೂರ್ಣ ಸೇವಿಸಿದ 31 ಮಂದಿಯಲ್ಲಿ ಬೊಜ್ಜಿನ ಪ್ರಮಾಣ ಮತ್ತು ದೇಹದ ತೂಕ ಕಡಿಮೆಯಾಗಿರುವುದು ಕಂಡುಬಂದಿತು. ಈ ಪ್ರಯೋಗದಿಂದ ತ್ರಿಫಲ ಚೂರ್ಣಕ್ಕೆ ಬೊಜ್ಜನ್ನು ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ದೃಢಪಟ್ಟಿದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡಲು ಚಿಕಿತ್ಸೆ :
150 ಮಂದಿ ಇನ್ಸುಲಿನ್ ಅವಲಂಬಿತರಲ್ಲದ ಮಧುಮೇಹಿ ರೋಗಿಗಳಲ್ಲಿ 60 ಮಂದಿಯನ್ನು ಆಯ್ಕೆ ಮಾಡಿ 2 ಗುಂಪು ಮಾಡಲಾಯಿತು. ಪ್ರಾಯೋಗಿಕ ಗುಂಪಿನಲ್ಲಿ 30 ಮಂದಿ ಮತ್ತು ನಿಯಂತ್ರಣ ಗುಂಪಿನಲ್ಲಿ 30 ಮಂದಿ ಇರುವಂತೆ. ಪ್ರಾಯೋಗಿಕ ಗುಂಪಿನವರಿಗೆ 5 ಗ್ರಾಂ ತ್ರಿಫಲ ಚೂರ್ಣವನ್ನು ಮಧ್ಯಾಹ್ನದ ಊಟಕ್ಕೆ 2 ಗಂಟೆ ಮೊದಲು ಮಜ್ಜಿಗೆಯೊಡನೆ ಮಿಶ್ರಣ ಮಾಡಿ ಕುಡಿಯಲು ಸೂಚಿಸಲಾಯಿತು. 45 ದಿನಗಳವರೆಗೆ ಈ ಚಿಕಿತ್ಸೆಯನ್ನು ಮುಂದುವರಿಸಿದ ನಂತರ ಪರೀಕ್ಷೆ ನಡೆಸಿದಾಗ ತ್ರಿಫಲ ಚೂರ್ಣಕ್ಕೆ ರಕ್ತದಲ್ಲಿನ ಗ್ಲೋಕೋಸ್ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತವೆಂದು ಕಂಡುಬಂದಿದೆ .
ಎರಡನೆಯ ಬಗೆಯ ಮಧುಮೇಹ ರೋಗಿಗಳಿಗೆ ದಿನಕ್ಕೆ 5 ಗ್ರಾಂ ತ್ರಿಫಲ ಚೂರ್ಣದಂತೆ 12 ತಿಂಗಳು ಸೇವಿಸಲು ಸೂಚಿಸಲಾಯಿತು. ಅವಧಿಯ ನಂತರ ಪರೀಕ್ಷಿಸಿದಾಗ ತ್ರಿಫಲ ಚೂರ್ಣ ಸೇವಿಸಿದವರ ರಕ್ತದಲ್ಲಿನ ಗೂಕೋಸ್ ಪ್ರಮಾಣ ನಿಯಂತ್ರಣಕ್ಕೆ ಬಂದಿತ್ತೆಂದು ಜೊತೆಗೆ ಕೊಬ್ಬಿನಾಂಶವೂ ಸಹ ಕಡಿಮೆಯಾಗಿತ್ತೆಂದು ವರದಿಯಾಗಿದೆ.
ಮಧುಮೇಹ ರೋಗಿಯ ಕಾಲಿನ ಹುಣ್ಣಿಗೆ ಚಿಕಿತ್ಸೆ :
70 ವಯೋಮಾನದ ಮಧುಮೇಹವಿರುವ ರೋಗಿಯ ಬಲಗಾಲಿನ ಬೆರಳುಗಳನ್ನು ಹಣ್ಣಿನ ಕಾರಣಕ್ಕಾಗಿ ಆಯುರ್ವೇದ ಆಸ್ಪತ್ರೆಗೆ ದಾಖಲಾಗುವ ಕೂದಿನ ಮೊದಲು ಶಸ್ತ್ರ ಚಿಕಿತ್ಸೆ ಮಾಡಿ ನಾಲ್ಕು ಬೆರಳುಗಳನ್ನು ತೆಗೆಯಲಾಗಿತ್ತು. ಆದರೆ ಹುಣ್ಣು ಪೂರ್ತಿಯಾ ವಾಸಿಯಾಗಿರಲಿಲ್ಲ ಗಾಯ ಉಲ್ಬಣವಾಗಿತ್ತು ಈ ಸ್ಥಿತಿಯಲ್ಲಿ ಆಯುರ್ವೇದ ಚಿಕಿತ್ಸೆಗೆ ಆ ವ್ಯಕ್ತಿ ದಾಖಲಾದ ಮಧುಮೇಹವನ್ನು ನಿಯಂತ್ರಣಕ್ಕೆ ತಂದು ಗಾಯವನ್ನು ತ್ರಿಫಲ ಕ್ಟಾತದಿಂದ ತೊಳೆದು ಜತ್ಯಾದಿ ತೈಲ ಲೇಪಿಸಿ ಬ್ಯಾಂಡೇಜ್ ಮಾಡಲಾಯಿತು, ಇದೇ ರೀತಿ ಚಿಕಿತ್ಸೆಯನ್ನು 60 ದಿನಗಳವರೆಗೆ ಮುಂದುವರಿಸಿದಾಗ ಬಹುತೇಕ ಹುಣ್ಣು ವಾಸಿಯಾಗಿತ್ತು. ತ್ರಿಫಲ ಕ್ಯಾತ ಮಧುಮೇಹದ ಹುಣ್ಣಿನ ಚಿಕಿತ್ಸೆಗೆ ಉಪಯುಕ್ತವೆಂದು ಕಂಡುಬಂದಿದೆ. ತಿಫಲ ಕ್ಟಾತ ತಯಾರಿಸುವ ವಿಧಾನ – 50ಗ್ರಾಂ ತ್ರಿಫಲ ಚೂರ್ಣವನ್ನು 800 మి.లి. ನೀರಿಗೆ ಮಿಶ್ರಣ ಮಾಡಿ ಕುದಿಸಿ 200 ml ಕಷಾಯ ಉಳಿಸಿಕೊಳ್ಳಬೇಕು. ಈ ಕಷಾಯವನ್ನು ತ್ರಿಫಲ ಕ್ಯಾತ ಎಂದು ಕರೆಯುತ್ತಾರೆ.
*ಮಲಬದ್ಧತೆ ಮತ್ತು ಉದರ ಸಂಬಂಧದ ತೊಂದರೆಗಳಿಗೆ ಚಿಕಿತ್ಸೆ :
ಮಲಬದ್ಧತೆ ಮತ್ತು ಉದರ ಸಂಬಂಧದ ರೋಗದಿಂದ ನರಳುತ್ತಿದ್ದ, 15-76 ವಯೋಮಾನದ 160 ಮಂದಿಯನ್ನು ಆಯ್ಕೆ ಮಾಡಿ, ಪ್ರತಿ ಗುಂಪಿನಲ್ಲಿ 40 ಮಂದಿ ಇರುವಂತೆ 4 ಗುಂಪು ಮಾಡಲಾಯಿತು. ಪ್ರಾಯೋಗಿಕ ಗುಂಪಿನ ರೋಗಿಗಳಿಗೆ ಪ್ರತಿ ಬಾರಿಗೆ 2.5 ಗ್ರಾಂ ತ್ರಿಫಲ ಚೂರ್ಣದಂತೆ ದಿನಕ್ಕೆ 2 ಬಾರಿ ಸೇವಿಸಲು ಸೂಚಿಸಲಾಯಿತು. ಇದೇ ರೀತಿ ಚಿಕಿತ್ಸೆಯನ್ನು ಒಂದು ತಿಂಗಳು ಮುಂದುವರಿಸಿದ ನಂತರ, ರೋಗಿಗಳನ್ನು ಉತ್ತಮವಾಗಿತ್ತು. ಮಲಬದ್ದತೆ ಮತ್ತು ಉದರ ಸಂಬಂಧದ ತೊಂದರೆಗಳು ನಿವಾರಣೆಯಾಗಿತ್ತೆಂದು ವರದಿಯಾಗಿದೆ.
ರೋಗನಿರೋಧಕ ಶಕ್ತಿಯನ್ನುಂಟು ಮಾಡುವಂತಹ ಚಿಕಿತ್ಸೆ :
HIV / AIDS ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಬಹಳ ಕಡಿಮೆ ಇರುತ್ತದೆ. ಪರಿಣಾಮವಾಗಿ ಹಲವಾರು ಅಪಕಾಶವಾದಿ ಬ್ಯಾಕ್ಟಿರಿಯ, ಶಿಲೀಂಧ್ರಗಳಿಂದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಇಂತಹ ರೋಗಿಗಳಿಗೆ ರೋಗನಿರೋಧಕ ಶಕ್ತಿಯನ್ನು ಉತ್ತಮ ಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಆರೋಗ್ಯವಂತ ಕಾರ್ಯಕರ್ತರನ್ನು ಆಯ್ಕೆ ಮಾಡಿ ಪ್ರಯೋಗ ನಡೆಸಲಾಗಿದೆ.
25-45 ವಯೋಮಾನದ 20 ಮಂದಿ ಸ್ವಯಂ ಸೇವಕರನ್ನು ಆಯ್ಕೆ ಮಾಡಿ, ಪ್ರತಿ ಗುಂಪಿನಲ್ಲಿ 10 ಮಂದಿಯಂತೆ 2 ಗುಂಪು ಮಾಡಲಾಯಿತು. ಒಂದು ಗುಂಪಿನಲ್ಲಿ 10 ಮಂದಿ ಪುರುಷರು ಮತ್ತೊಂದು ಗುಂಪಿನಲ್ಲಿ 10 ಮಂದಿ ಮಹಿಳೆಯರಿರುವಂತೆ ಎಲ್ಲಾ ಸ್ವಯಂ ಸೇವಕರಿಗೆ ಪ್ರತಿ ಬಾರಿಗೆ 350 ಮಿ.ಗ್ರಾಂ ಪ್ರಮಾಣದ ತ್ರಿಫಲ ಚೂರ್ಣವಿರುವ ಕ್ಯಾಫೂಲ್‌ನಂತೆ ದಿನಕ್ಕೆ 3 ಬಾರಿ (350 x 350 x 350 ಮಿ.ಗ್ರಾಂ / ದಿನಕ್ಕೆ) ಆಹಾರ ತೆಗೆದುಕೊಂಡ ನಂತರ ಸೇವಿಸಲು ಸೂಚಿಸಲಾಯಿತು. 2 ವಾರ ತ್ರಿಫಲ ಚೂರ್ಣ ಸೇವಿಸಿದ ನಂತರ ಪರೀಕ್ಷಿಸಿದಾಗ ಸ್ವಯಂ ಸೇವಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡುಬಂದಿದೆ. ಈ ಸಂಶೋಧನೆಯನ್ನು ಆಧಾರವಾಗಿಟ್ಟು ಕೊಂಡು, ರೋಗನಿರೋಧಕ ಶಕ್ತಿ ಕಡಿಮೆ ಇರುವ HIV / AIDS ರೋಗಿಗಳ ಚಿಕಿತ್ಸೆಗೆ ಉಪಯುಕ್ತವೆಂದು ಚರ್ಚಿಸಲಾಗಿದೆ. ಆದರೂ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ತ್ರಿಫಲ ಚೂರ್ಣದ / ಸತ್ವದ ರೋಗನಿರೋಧಕ ಗುಣದ ಬಗ್ಗೆ ಪ್ರಕಟವಾದ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪರಾಣರ್ಶಿಸಿ ತಯಾರಿಸಿದ ವರದಿಯ ಪ್ರಕಾರ ತ್ರಿಫಲ ಚೂರ್ಣಕ್ಕೆ ರೋಗನಿರೋಧಕ ಶಕ್ತಿಯನ್ನು ಉದ್ದೀಪನ ಗೊಳಿಸುವ ಗುಣವಿದೆ ಮತ್ತು ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವ ಅಲೋಪತಿ ಔಷಧಿಗಳಿಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುವ ಗುಣವಿದೆಯೆಂದು ವರದಿಯಾಗಿದ
ಹೆರಿಗೆಯ ಸಮಯದಲ್ಲಿ ಸಿಸೇರಿಯನ್‌ನಿಂದ ಉಂಟಾದ ಗಾಯ ವಾಸಿ ಮಾಡಲು ಚಿಕಿತ್ಸೆ :
ಸಿಸೇರಿಯನ್ ಹೆರಿಗೆಯಿಂದ ಉಂಟಾದ ಗಾಯ ಬೇಗ ವಾಸಿಯಾಗುವುದಿಲ್ಲ. ಅಂತಹ ಸ್ತ್ರೀಯರನ್ನು ಆಯ್ಕೆ ಮಾಡಿ ತ್ರಿಫಲ ಕ್ಯಾತದಿಂದ ಯೋನಿ ಭಾಗದ ಗಾಯವನ್ನು ಶುಚಿಗೊಳಿಸಲು ಉಪಯೋಗಿಸಿ ತ್ರಿಫಲ ಘೃತವನ್ನು 7 ದಿನಗಳವರೆಗೆ ಸೇವಿಸಲು ಕೊಟ್ಟು ಅವಧಿಯ ನಂತರ ಪರೀಕ್ಷಿಸಿದಾಗ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ (ಮಹಾಜನ್ ಮತ್ತು ಇತರರು,
. ಪ್ರಾಣಿಗಳ ಮೇಲೆ / ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳ ಫಲ :
(ಸೂಚನೆ : ತ್ರಿಫಲ ದ್ರವ್ಯ ಒಂದನ್ನೇ ಉಪಯೋಗಿಸಿ ನಡೆಸಿದ ಸಂಶೋಧನೆಗಳನ್ನು ಮಾತ್ರ ಆಯ್ಕೆ ಮಾಡಿದೆ.]
ಆ್ಯಂಟಿಆಕ್ಸಿಡೆಂಟ್ ಗುಣ :
ದೇಹದಲ್ಲಿ ನಡೆಯುವ ಹಲವಾರು ಜೈವಿಕ ಕ್ರಿಯೆಗಳಲ್ಲಿ ಸಹ ಉತ್ಪನ್ನಗಳಾಗಿ ಕ್ರಿಯಾತ್ಮಕ ಆಮ್ಲಜನಕದ ಕಣಗಳು ಉತ್ಪತ್ತಿಯಾಗುತ್ತವೆ ಇವು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ದೇಹಕ್ಕೆ ಅನುಕೂಲಕರವಾದ ರೀತಿಯಲ್ಲಿ ಕೆಲಸ ಮಾಡುತ್ತವೆ ಜೀವಕೋಶಗಳನ್ನು ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸುವುದರ ಜೊತೆಗೆ ಬೆಳವಣಿಗೆಗೂ ಸಹಕಾರಿಯಾಗಿರುತ್ತವೆ. ಈ ಕ್ರಿಯಾತ್ಮಕ ಆಮ್ಲಜನಕ ಕಣಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತವೆ ಮತ್ತು ಹಲವಾರು ಕಾಯಿಲೆಗಳಿಗೆ ನಾಂದಿಯಾಗುತ್ತದೆ. ಇಂತಹ ಕ್ರಿಯಾತ್ಮಕ ಆಮ್ಲಜನಕ ಕಣಗಳನ್ನು ತೊಡೆದು ಹಾಕಲು / ನಿರ್ಮೂಲ ಮಾಡಲು ದೇಹ ಆಂತರಿಕವಾಗಿ ಕೆಟಲೇಸ್, ಸೂಪರ್ ಆಕ್ಸೈಡ್ ಡೆಸ್ಟು ಟೇಸ್, ಗ್ಲುಟತಿಯಾನ್ ಪರಾಕ್ಸಿಡೇಸ್, ಗ್ಲುಟತಿಯಾನ್ ರಿಡಕ್ಟೇಸ್ ಮತ್ತು ದೇಹದ ಹೊರಗಡೆಯಿಂದ ದೊರೆಯುವ ಬಾಹ್ಯ ಜನ್ಮ ಜೀವಸತ್ವ ‘ಸಿ’ ಮತ್ತು ‘ಇ’ ಗಳನ್ನು ಅವಲಂಬಿಸುತ್ತದೆ. ಆದರೆ, ಕ್ರಿಯಾತ್ಮಕ ಆಮ್ಲಜನಕ ಕಣಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ದೇಹ ವ್ಯಕ್ತಪಡಿಸುವ ರಕ್ಷಣಾ ಕ್ರಮ ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ಬಾಹ್ಯ ಜನ್ಯ ಸತ್ವಗಳ ಅವಶ್ಯಕತೆ ಉಂಟಾಗುತ್ತದೆ. ಕ್ರಿಯಾತ್ಮಕ ಆಮ್ಲಜನಕ ಕಣಗಳನ್ನು ತೊಡೆದು ಹಾಕುವ ಬಾಹ್ಯ ಜನ್ಮ ಸತ್ವಗಳನ್ನು ಆ್ಯಂಟಿ ಆಕ್ಸಿಡೆಂಟ್ ಗಳೆಂದು ಕರೆಯುತ್ತಾರೆ. ಕ್ರಿಯಾತ್ಮಕ ಆಮ್ಲಜನಕ ಕಣಗಳನ್ನು ನಿರ್ಮೂಲ ಮಾಡುವ ಔಷಧಿಗಳು ಲಭ್ಯವಿದ್ದರೂ, ಅವು ಉಂಟು ಮಾಡುವ ಪ್ರತಿಕೂಲ ಪರಿಣಾಮದಿಂದಾಗಿ ಹೆಚ್ಚಾಗಿ ಬಳಕೆಯಾಗುತ್ತಿಲ್ಲ. ಪ್ರತಿಕೂಲ ಪರಿಣಾಮ ಉಂಟು ಮಾಡದ ಹಾಗೂ ಸಸ್ಯಜನ್ಯ ಆ್ಯಂಟಿಆಕ್ಸಿಡೆಂಟ್‌ಗಳ ಅನ್ವೇಷಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.
ನೀರು, ಮೆಥನಾಲ್, ಅಸಿಟೋನ್ ಮತ್ತು ಮದ್ಯಸಾರ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವಕ್ಕೆ ಆ್ಯಂಟಿಆಕ್ಸಿಡೆಂಟ್ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವ ಮತ್ತು ಈ ಮೂರು ದ್ರವ್ಯಗಳ ಮಿಶ್ರಣವಾದ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ವವನ್ನು ತುಲನಾತ್ಮಕವಾಗಿ ಪರೀಕ್ಷಿಸಿದಾಗ ಬಿಡಿ ದ್ರವ್ಯಗಳು ಹೊಂದಿರುವ ಆ್ಯಂಟಿಆಕ್ಸಿಡೆಂಟ್ ಪ್ರಮಾಣಕ್ಕಿಂತ ತ್ರಿಫಲ ಚೂರ್ಣಕ್ಕೆ ಹೆಚ್ಚಿನ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಗುಣವಿದೆಯೆಂದು ವರದಿಯಾಗಿದೆ.