ಮನೆ ಆರೋಗ್ಯ ತ್ರಿಫಲಾಧಾರಿತ ಸಂಶೋಧನೆಗಳು

ತ್ರಿಫಲಾಧಾರಿತ ಸಂಶೋಧನೆಗಳು

0

 *ಗೌಟ್ (Gout) ಕಾಯಿಲೆಯಲ್ಲಿ ಕಂಡುಬರುವ ಗೆಣ್ಣುಗಳ ಉರಿಯೂತವನ್ನು ಕಡಿಮೆ ಮಾಡುವ ಗುಣ :

Join Our Whatsapp Group

         ಮಾನೊಸೋಡಿಯಂ ಯರೇಟ್ ಲವಣವನ್ನು ಕೊಟ್ಟು ಗೌಟ್ ಕಾಯಿಲೆಯುಂಟು ಮಾಡಿದ ಇಲಿಗಳಿಗೆ, ತ್ರಿಫಲವನ್ನು ಸೇವಿಸಲು ಕೊಟ್ಟು (1 ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಪರೀಕ್ಷಿಸಿದಾಗ ಗೆಣ್ಣುಗಳಲ್ಲಿ ಕಂಡುಬರುವ ಉರಿಯೂತವನ್ನು ಕಡಿಮೆ ಮಾಡುವ ಗುಣವಿದೆಯೆಂದು ದೃಢಪಟ್ಟಿದೆ.

ರಕ್ತದಲ್ಲಿ ಯುರಿಕ್ ಆಮ್ಲ ಸಂಚಯವಾದಂತ ಗೌಟ್ ಕಾಯಿಲೆಯ ಉಗಮಕ್ಕೆ ನಾಂದಿಯಾಗುತ್ತದೆ. ರಕ್ತದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವ ಸಾಮರ್ಥ್ಯ ತ್ರಿಫಲ ಚೂರ್ಣಕ್ಕೆ ಇದೆಯೆಂದು ಇಲಿಗಳ ಮೇಲೆ ಮತ್ತು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ತ್ರಿಫಲಕ್ಕೆ ಆ್ಯಂಟಿಆಕ್ಸಿಡೆಂಟ್ ಗುಣ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಗುಣ ಇರುವುದು ಗೌಟ್ ಕಾಯಿಲೆಯ ಚಿಕಿತ್ಸೆಗೆ ಪೂರಕ ಅಂಶವಾಗಿದೆ.

 ಚರ್ಮವನ್ನು ರಕ್ಷಿಸುವ ಗುಣ :

ಪ್ರಯೋಗ ಶಾಲೆಯಲ್ಲಿ ಚರ್ಮದ ಜೀವಕೋಶಗಳ ಮೇಲೆ ನಡೆಸಿದ ಪ್ರಯೋಗದಿಂದ, ತ್ರಿಫಲ ಸತ್ವಕ್ಕೆ ಚರ್ಮವನ್ನು ರಕ್ಷಿಸುವ ಗುಣವಿದೆಯೆಂದು ಕಂಡುಬಂದಿದೆ. ಚರ್ಮದ ರಕ್ಷಣೆಗೆ ತಯಾರಿಸುವ ಪ್ರಸಾದನ ದ್ರವ್ಯದಲ್ಲಿ ತ್ರಿಫಲವನ್ನು ಸೇರಿಸಿದರೆ ಚರ್ಮವನ್ನು ಉತ್ತಮ ರೀತಿಯಲ್ಲಿ ರಕ್ಷಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 *ದೊಡ್ಡ ಕರುಳಿನ ಉರಿಯೂತ ( Colitis) ವನ್ನು ವಾಸಿ ಮಾಡುವ ಗುಣ :

ಡೆಕ್ಸ್‌ ಟ್ರಾನ್ ಸಲ್ವೇಟ್ ಸೋಡಿಯಂ ರಾಸಾಯನಿಕವನ್ನು ಕೊಟ್ಟು ದೊಡ್ಡ ಕರುಳಿನ ಉರಿಯೂತ ಉಂಟು ಮಾಡಿದ ಇಲಿಗಳಿಗೆ ತ್ರಿಫಲವನ್ನು (300 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತ್ರಿಫಲಗೆ ದೊಡ್ಡ ಕರುಳಿನ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ತಿಳಿದುಬಂದಿದೆ. ತ್ರಿಫಲದ ಈ ಗುಣಕ್ಕೆ ಅದಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಗುಣ ಮತ್ತು ತ್ರಿಫಲದಲ್ಲಿ ಅಡಕವಾಗಿರುವ ಪ್ಲೇವೊನಾಯ್ಡ್ ಕಾರಣವೆನ್ನಲಾಗಿದೆ .

 ನರಮಂಡಲವನ್ನು ಕಾಪಾಡುವ ಗುಣ :

* ಮೆಥನಾಲ್ ದ್ರಾವಣ ಉಪಯೋಗಿಸಿ ಪ್ರತ್ಯೇಕವಾಗಿ ಬೆಟ್ಟದ ನೆಲ್ಲಿಕಾಯಿ, ಅಳಲೆಕಾಯಿ, ತಾರೆಕಾಯಿಗಳಿಂದ ಮತ್ತು ತ್ರಿಫಲ ಮಿಶ್ರಣದಿಂದ ಸತ್ವ ತಯಾರಿ ಪ್ರಯೋಗ ಶಾಲೆಯಲ್ಲಿ PC 12 ಜೀವಕೋಶಗಳ ಮೇಲೆ ಪ್ರಯೋಗಿಸಿ ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ, ಎಲ್ಲಾ ಬಗೆಯ ಸತ್ಯಗಳಿಗೆ ಕ್ರಿಯಾತ್ಮಕ ಆಮ್ಲಜನಕ ಕಣಗಳ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ನರಮಂಡಲವನ್ನು ರಕ್ಷಿಸುವ ಗುಣವಿದೆಯೆಂದು ಕಂಡುಬಂದಿದೆ .

ವಿತ್ತಜನಕಾಂಗವನ್ನು ಕಾಪಾಡುವ ಗುಣ :

       ಪಿತ್ತಜನಕಾಂಗವನ್ನು ಯಕೃತ್ ಎಂದೂ ಕರೆಯುತ್ತಾರೆ. ನಮ್ಮ ದೇಹದಲ್ಲಿ ಇರುವ ದೊಡ್ಡವಾದ ಅಂಗಗಳಲ್ಲಿ ಇದೂ ಸಹ ಒಂದು. ದೇಹದ ಆರೋಗ್ಯ ನಿರ್ವಹಣೆಯಲ್ಲಿ ಈ ಅಂಗ ಪ್ರಮುಖ ಪಾತ್ರವಹಿಸುತ್ತದೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಹದಲ್ಲಿ ನಡೆಯುವ 500 ಬಗೆಯ ಜೈವಿಕ ಕ್ರಿಯೆಗಳು ನೇರವಾಗಿ ಇಲ್ಲವೆ ಪರೋಕ್ಷವಾಗಿ ಪಿತ್ತಜನಕಾಂಗವನ್ನು ಅವಲಂಬಿಸಿದೆ. ಪಿತ್ತಜನಕಾಂಗದ ಕೆಲವು ಮುಖ್ಯ ಕಾರ್ಯಗಳೆಂದರೆ – (1) ಜೀರ್ಣಾಂಗದಿಂದ ಲಭ್ಯವಾದ ರಕ್ತವನ್ನು ಶೋಧಿಸಿ ಹಾನಿಕಾರಕ ವಿಷ ವಸ್ತುವನ್ನು ಹೊರ ಹಾಕುವುದು. (2) ಬೈಲ್ ರವನ್ನು ಸ್ರವಿಸಿ ಸಣ್ಣ ಕರುಳಿನಲ್ಲಿ ಕೊಬ್ಬನ್ನು ಒಡೆದು ಪಚನ ಕ್ರಿಯೆಯನ್ನು ಚುರುಕು ಗೊಳಿಸುವುದು. ಇಂತಹ ಉಪಯುಕ್ತ ಅಂಗ ನಿರಂತರವಾಗಿ ಬಾಹ್ಯ ಒತ್ತಡಕ್ಕೆ ಒಳಗಾಗುತ್ತದೆ. ನಾವು ಸೇವಿಸುವ ಔಷಧಿ, ವೈರಾಣುಗಳ ಸೋಂಕು ಮತ್ತು ಮದ್ಯಸಾರ ಪಿತ್ತಜನಕಾಂಗವನ್ನು ಹಾನಿಗೊಳಿಸುತ್ತದೆ. ಅಂತಿಮವಾಗಿ ವಿವಿಧ ಪಿತ್ತಜನಕಾಂಗದ ಕಾಯಿಲೆಗಳಿಗೆ (ಲಿವರ್ ಸಿ‌ರೋಹೊಸಿಸ್, ಜಾಂಡೀಸ್ ಮುಂತಾದವುಗಳು) ತುತ್ತಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವು ಸಂಭವಿಸಬಹುದು. ಈ ಕಾರಣಗಳಿಂದ ಪಿತ್ತಜನಕಾಂಗವನ್ನು ಕಾಪಾಡುವುದು ಅತ್ಯಾವಶ್ಯಕ. ಆಧುನಿಕ ಔಷಧಿಗಳು ಪಿತ್ತಜನಕಾಂಗವನ್ನು ಕಾಪಾಡುವ ಕ್ರಿಯೆ ತೃಪ್ತಿದಾಯಕವಾಗಿಲ್ಲ. ಔಷಧಿಗಳ ವೆಚ್ಚ ಮತ್ತು ಅವು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ, ಕಡಿಮೆ ವೆಚ್ಚದ, ಪ್ರತಿಕೂಲ ಪರಿಣಾಮಗಳಿಲ್ಲದ ಸಸ್ಯಜನ್ಯ ಔಷಧಿಗಳನ್ನು ಹುಡುಕುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಯನ್ನು ಕೈಗೊಳ್ಳಲಾಗಿದೆ.

(1,2-dimethyl hydrazine dihydro chloride) ಪಿತ್ತಜನಕಾಂಗವನ್ನು ಹಾನಿ ಮಾಡಿದ ಇಲಿಗಳಿಗೆ, ಅವುಗಳ ಪ್ರತಿ ಕಿಲೊ ಗ್ರಾಂ ದೇಹದ ತೂಕಕ್ಕೆ 3 ಮಿ.ಗ್ರಾಂ ಪ್ರಮಾಣದ ತ್ರಿಫಲ ಚೂರ್ಣವನ್ನು ಕುಡಿಯುವ ನೀರಿನ ಜೊತೆ ಕೊಡಲಾಯಿತು. ಇದೇ ರೀತಿ ತ್ರಿಫಲವನ್ನು 5 ದಿನಗಳವರೆಗೆ ಕುಡಿಸಿದ ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ, ರಾಸಾಯನಿಕ ಉಂಟು ಮಾಡಿದ ಹಾನಿಯಿಂದ ಪಿತ್ತಜನಕಾಂಗವನ್ನು ಕಾಪಾಡುವ ಗುಣ ತ್ರಿಫಲ ಚೂರ್ಣಕ್ಕೆ ಇದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ .

ಬೊಮೊಬೆಂಜೀನ್ ರಾಸಾಯನಿಕವನ್ನು (10 ಮಿ. ಮೋಲ್ / ಪ್ರತಿ ಕಿಲೊ ಗ್ರಾಂ ದೇಹದ ತೂಕ) ಇಲಿಗಳಿಗೆ ಸೇವಿಸಲು ಕೊಟ್ಟು ಪಿತ್ತಜನಕಾಂಗವನ್ನು ಹಾನಿಗೊಳಗಿಸಲಾಯಿತು.

 ಇಂತಹ ಇಲಿಗಳಿಗೆ ತ್ರಿಫಲವನ್ನು 250 ಮತ್ತು 500 ಮಿನಿ ಗ್ರಾಂ ಕಿಲೋ ಗ್ರಾಂ ದೇಹದ ತೂಕ  8 ದಿನಗಳವರೆಗೆ ಸೇವಿಸಲು ಕೊಟ್ಟು ಇಲಿಗಳನ್ನು ಪರೀಕ್ಷಿಸಿದಾಗ ಎರಡೂ ಪ್ರಮಾಣದ ತಿಫಲ ಸೇವಿಸಿದ ಇಲಿಗಳಲ್ಲಿ ರಾಸಾಯನಿಕದಿಂದ ಪಿತ್ತಜನಕಾಂಗದ ಮೇಲೆ ಯಾವುದೇ ರೀತಿಯ ಹಾನಿಯಾಗದಿರುವುದು ಕಂಡುಬಂದಿದೆ. ಈ ಪ್ರಯೋಗದಿಂದ ತಿಫಲಾಕ್ಕೆ ಪಿತ್ತಜನಕಾಂಗವನ್ನು ಕಾಪಾಡುವ ಗುಣವಿದೆಯೆಂದು ದೃಢಪಟ್ಟಿದೆ (ಲಾವಿಣ್ಯ ಮತ್ತು ಇತರರು, 2015b), ಹಲವು ಬಗೆಯ ರಾಸಾಯನಿಕಗಳಿಂದಲೂ ಪಿತ್ತಜನಕಾಂಗವನ್ನು ಕಾಪಾಡುವ ಗುಣ ತ್ರಿಫಲಗೆ ಇದೆಯೆಂದು ವರದಿಯಾಗಿದೆ.

ಗ್ಯಾಲಕ್ಟೋಸಮೈನ್ ರಾಸಾಯನಿಕವನ್ನು (700 ಮಿ.ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂ೩8) ಇಂಜಕ್ಷನ್ ಮೂಲ ಕೊಟ್ಟು ಪಿತ್ತಜನಕಾಂಗವನ್ನು ಹಾನಿಗೊಳಿಸಿದ ಇಲಿಗಳಿಗೆ 1000 ಮಿ.ಗ್ರಾಂ ಪ್ರಮಾಣದ ಸತ್ವವನ್ನು ಕೊಟ್ಟು ಪರೀಕ್ಷಿಸಿದಾಗ ಸತ್ವಕ್ಕೆ ಪಿತ್ತಜನಕಾಂಗವನ್ನು ಕಾಪಾಡುವ ಗುಣವಿದೆಯೆಂದು ಕಂಡುಬಂದಿದೆ.

ಬೊಮೊಬೆಂಜೀನ್ ರಾಸಾಯನಿಕವನ್ನು ಸೇವಿಸಲು ಕೊಟ್ಟು (1.57 ಮಿ.ಗ್ರಾಂ 1 ಕಿಲೊ ಗ್ರಾಂ ದೇಹದ ತೂಕ) ಪಿತ್ತಜನಕಾಂಗವನ್ನು ಹಾನಿಗೊಳಿಸಿದ ಇಲಿಗಳಿಗೆ ತ್ರಿಫಲ ಚೂರ್ಣವನ್ನು ದಿನಕ್ಕೆ ಎರಡು ಬಾರಿಯಂತೆ (250 ಮತ್ತು 500 ಮಿ.ಗ್ರಾಂ / ಕಿಲೊ ಗ್ರಾಂ ದೇಹದ ತೂಕ 8 ದಿನಗಳವರೆಗೆ ಸೇವಿಸಲು ಕೊಟ್ಟು ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ, ಎರಡೂ ಪ್ರಮಾಣದ ತ್ರಿಫಲ ಸೇವಿಸಿದ ಇಲಿಗಳಲ್ಲಿ ಪಿತ್ತಜನಕಾಂಗಕ್ಕೆ ಯಾವುದೇ ರೀತಿಯ ಹಾನಿಯಾಗದಿರುವುದು ಕಂಡುಬಂದಿದೆ. ಈ ಪ್ರಯೋಗದಿಂದ ತ್ರಿಫಲ ಚೂರ್ಣಕ್ಕೆ ರಾಸಾಯನಿಕ ಉಂಟು ಮಾಡುವ ಹಾನಿಯಿಂದ ಪಿತ್ತಜನಕಾಂಗವನ್ನು ಕಾಪಾಡುವ ಸಾಮರ್ಥ್ಯವಿದೆಯೆಂದು ದೃಢಪಟ್ಟಿದೆ .

ನೀರು ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವವನ್ನು ಸ್ವಿಸ್‌ ಬಿಳಿ ಇಲಿಗಳಿಗೆ 7 ದಿನಗಳವರೆಗೆ ಸೇವಿಸಲು (100 ಮಿ.ಗ್ರಾಂ ಮತ್ತು 300 ಮಿ.ಗ್ರಾಂ / ಕಿಲೊ ಗ್ರಾಂ ದೇಹದ ತೂಕ) ಕೊಟ್ಟು ತಯಾರು ಮಾಡಲಾಯಿತು. ಇಂತಹ ಇಲಿಗಳಿಗೆ ಪಿತ್ತಜನಕಾಂಗ ಮತ್ತು ಮೂತ್ರಪಿಂಡವನ್ನು ಹಾನಿಗೊಳಿಸುವ ಉದ್ದೇಶದಿಂದ ಪ್ಯಾರಸಿಟಮಾಲ್ ಅನ್ನು ಇಂಜಕ್ಷನ್ ಮೂಲಕ ಕೊಡಲಾಯಿತು. ನಂತರ ಇಲಿಗಳನ್ನು ವಿವಿಧ ರೀತಿಯ ಪರೀಕ್ಷಿಗೆ ಒಳಪಡಿಸಿ ಪರೀಕ್ಷಿಸಿದಾಗ, ತ್ರಿಫಲ ಸತ್ವಕ್ಕೆ ಪ್ಯಾರಸಿಟಮಾಲ್ ಉಂಟು ಮಾಡುವ ಹಾನಿಯಿಂದ ಪಿತ್ತಜನಕಾಂಗ ಮತ್ತು ಮೂತ್ರಪಿಂಡವನ್ನು ಕಾಪಾಡುವ ಗುಣವಿದೆಯೆಂದು ಕಂಡುಬಂದಿದೆ. 100 ಮಿ.ಗ್ರಾಂ ಗಿಂತ 300ಮಿ.ಗ್ರಾಂ ಪ್ರಮಾಣದ ಸತ್ವ ಹೆಚ್ಚು ಪರಿಣಾಮಕಾರಿಯೆಂದು ಕಂಡುಬಂದಿದೆ .

ರಿಫಾಂಪಿಸಿನ್ (Refampicin) ರಾಸಾಯನಿಕ ಉಂಟು ಮಾಡುವ ಹಾನಿಯಿಂದ ಪಿತ್ತಜನಕಾಂಗವನ್ನು ಕಾಪಾಡುವ ಗುಣ ತ್ರಿಫಲಗೆ ಇದೆಯೆಂದು ವಿಸ್ಟಾ‌ರ್ ಇಲಿಗಳಿಗೆ

ಸೇವಿಸಲು ಕೊಟ್ಟು ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.

ಪಿತ್ತಜನಕಾಂಗವನ್ನು ಕಾಪಾಡುವ ತ್ರಿಫಲದ ಕುರಿತಾದ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪರಾಮರ್ಶಿಸಿ ತಯಾರಿಸಿದ ಸಂಶೋಧನಾ ವರದಿಯ ಪ್ರಕಾರ ತ್ರಿಫಲ ಚೂರ್ಣ ಮತ್ತು ಅದರಿಂದ ತಯಾರಿಸಿದ ಕಷಾಯ ಮತ್ತು ಕೃಾತ ಮುಂತಾದವುಗಳಿಗೆ ಪಿತ್ತಜನಕಾಂಗವನ್ನು ಕಾಪಾಡುವ ಸಾಮರ್ಥ್ಯವಿದೆಯೆಂಬ ಅಂಶ ದೃಢಪಟ್ಟಿದೆ .

 ಭೇದಿಯಾಗದಂತೆ ತಡೆಯುವ ಗುಣ :

ಹರಳೆಣ್ಣೆ ಕುಡಿಸಿ ಭೇದಿಯಾಗುವಂತೆ ಮಾಡಿದ ಇಲಿಗಳಿಗೆ, ತ್ರಿಫಲ ಭಸ್ಮ (Triphala Mashi ತಯಾರಿಸುವ ವಿಧಾನ :- ತ್ರಿಫಲ ಚೂರ್ಣವನ್ನು ಒಂದು ಪಿಂಗಾಣಿ ಬಟ್ಟಲಿನಲ್ಲಿಟ್ಟು ಸುಮಾರು 500°C ಉಷ್ಣಾಂಶದವರೆಗೆ ಕಾಯಿಸಿದರೆ ತ್ರಿಫಲ ಭಸ್ಮ ತಯಾರಾಗುತ್ತದೆ.) ವನ್ನು 200, 400, 800 ಮಿ.ಗ್ರಾಂ / ಪ್ರತಿ ಕಿಲೋ ದೇಹದ ತೂಕಕ್ಕೆ ಅಳತೆ ಮಾಡಿ ಸೇವಿಸಲು ಕೊಡಲಾಯಿತು. ನಂತರ ಪರೀಕ್ಷೆಗೆ ಒಳಪಡಿಸಿದಾಗ ತ್ರಿಫಲ ಭಸ್ಮಕ್ಕೆ ಭೇದಿಯಾಗದಂತೆ ತಡೆಯುವ ಗುಣವಿದೆಯೆಂದು ಕಂಡುಬಂದಿದೆ .

 ಬೊಜ್ಜು ಬೆಳೆಯದಂತೆ ತಡೆಯುವ ಗುಣ :  

        ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಅದರಲ್ಲೂ ಮುಖ್ಯವಾಗಿ ಮಧ್ಯ ವಯಸ್ಸನ್ನು ದಾಟಿದವರಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಆಧುನಿಕ ಪದ್ಧತಿಯ ಸಂಸ್ಕರಿಸಿದ ಆಹಾರ ಸೇವನೆ ಮತ್ತು ದೈಹಿಕ ಶ್ರಮವಿಲ್ಲದ ಬದುಕು. ದೇಹದಲ್ಲಿ ಬೊಜ್ಜಿನ ಬೆಳವಣಿಗೆಯಾಯಿತೆಂದರೆ ಹಲವಾರು ಕಾಯಿಲೆಗಳ ಉಗಮಕ್ಕೆ ನಾಂದಿ ಎಂದು ಪರಿಭಾವಿಸುತ್ತಾರೆ. ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ ಬೊಜ್ಜನ್ನು ನಿವಾರಿಸುವ ಔಷಧೀಯ ಹುಡುಕುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ.

ಇಲಿಗಳಿಗೆ ಅಧಿಕ ಕೊಬ್ಬಿನಾಂಶವಿರುವ ಆಹಾರದ ಜೊತೆಗೆ ತ್ರಿಫಲ, ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ಪ್ರತ್ಯೇಕ ಗುಂಪುಗಳಿಗೆ 10 ವಾರಗಳವರೆಗೆ ಸೇವಿಸಲು ಕೊಟ್ಟು ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ, ತ್ರಿಫಲ ಚೂರ್ಣ ಪರಿಣಾಮಕಾರಿಯಾದ ರೀತಿಯಲ್ಲಿ ಬೊಜ್ಜು ಬೆಳೆಯದಂತೆ ತಡೆಯುವ ಗುಣವನ್ನು ಹೊಂದಿದೆಯೆಂದು ತಿಳಿದುಬಂದಿದೆ .

ನೀರು ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವವನ್ನು, ಪ್ರಯೋಗ ಶಾಲೆಯಲ್ಲಿ ಬೆಳೆಸಿದ, ಬೊಜ್ಜಿನ (3T-3 – LT adipocyte cell line) ಜೀವಕೋಶಗಳ ಮೇಲೆ26

ಪ್ರಯೋಗಿಸಿ ಪರೀಕ್ಷಿಸಿದಾಗ, ತ್ರಿಫಲ ಸತ್ತ ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವುದರ ಮೂಲಕ ಬೊಜ್ಜು ಬೆಳೆಯದಂತೆ ತಡೆಯುವ ಸಾಮರ್ಥ್ಯ ಪಡೆದಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದ.