ಮನೆ ಆರೋಗ್ಯ ತ್ರಿಫಲಾಧಾರಿತ  ಸಂಶೋಧನೆಗಳು

ತ್ರಿಫಲಾಧಾರಿತ  ಸಂಶೋಧನೆಗಳು

0

 ವಿಕಿರಣಗಳು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ರಕ್ಷಿಸುವ :

Join Our Whatsapp Group

       ಕ್ಯಾನ್ಸರ್ ರೋಗಕ್ಕೆ ಕೈಗೊಳ್ಳುವಾಗ ಆ ಅರ್ಧದಷ್ಟು ರೋಗಿಗಳಿಗೆ ಔಷಧಿಗಳ  ಮೂಲಕ ಚಿಕಿತ್ಸೆಯನ್ನು (Chemotherapy) ಕೊಡುವುದರ ಜೊತೆಗೆ ವಿಕಿರಣವನ್ನು Radiation) ಉಪಯೋಗಿಸಿ ಚಿಕಿತ್ಸೆ ನಡೆಸುವ ಅವಶ್ಯಕತೆ ಇರುತ್ತದೆ. ಈ ಬಗೆಯ ಚಿಕಿತ್ಸೆಯನ್ನು ವಿಕಿರಣ ಚಿಕಿತ್ಸೆ ಅಥವಾ ರೇಡಿಯೇಷನ್ ಥೆರಪಿ  Dơn (Radiation therapy) ಎಂದು ಕರೆಯುತ್ತಾರೆ. ಇಂತಹ ಚಿಕಿತ್ಸೆಗೆ ವಿಕಿರಣಗಳಾದ ಎಕ್ಸ್-ರೇ, ಗಾಮ-ರೇ, ಎಲೆಕ್ಟ್ರಾನ್ ಬೀಮ್ ಅಥವಾ ಪ್ರೊಟಾನ್ಗಳನ್ನು ಬಳಕೆ ಮಾಡಲಾಗುತ್ತದೆ. ಈ ಬಗೆಯ ವಿಕಿರಣಗಳು ದೇಹವನ್ನು ತೂರಿ ಕ್ಯಾನ್ಸ‌ರ್ ಕೋಶಗಳಲ್ಲಿನ ಡಿ.ಎನ್.ಎ. ಯನ್ನು ಛಿದ್ರ ಗೊಳಿಸಿ ಕ್ಯಾನ್ಸರ್ ಕೋಶಗಳು ವಿಭಜನೆಗೊಳ್ಳದಂತೆ ತಡೆಯುಂಟು ಮಾಡುವುದರ ಮೂಲಕ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆ. ದುರಾದೃಷ್ಟಕರ ಸಂಗತಿಯೆಂದರೆ, ಈ ವಿಕಿರಣಗಳು ಕ್ಯಾನ್ಸರ್ ವಾಸಿ ಮಾಡುವುದರ ಜೊತೆಗೆ ದೇಹದ ಮೇಲೆ ಹಲವಾರು ಬಗೆಯ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತವೆ. ವಿಕಿರಣದಿಂದ ಸುಗಮವಾಗಿ ಕ್ಯಾನ್ಸರ್ ಚಿಕಿತ್ಸೆ ಮುಂದುವರಿಯಬೇಕು. ಆದರೆ ದೇಹದ ಮೇಲೆ ವಿಕಿರಣದ ಪ್ರಭಾವ ಉಂಟಾಗದಂತೆ ತಡೆಯುವಂತ ಸಸ್ಯಜನ್ಯ ಔಷಧಿಯನ್ನು ಕಂಡುಹಿಡಿಯುವ ಹಿನ್ನೆಲೆಯಿಂದ ಪ್ರಸ್ತುತ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.

      ಪ್ರಾಯೋಗಿಕ ಇಲಿಗಳಿಗೆ, ತ್ರಿಫಲ ಚೂರ್ಣವನ್ನು 7 ದಿನಗಳವರೆಗೆ ಸೇವಿಸಲು ಕೊಟ್ಟು, ಅವುಗಳನ್ನು ವಿಕಿರಣದ ಪ್ರಭಾವಕ್ಕೆ ಒಳಗಾಗುವಂತೆ ಮಾಡಿ ನಂತರ ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ, ತ್ರಿಫಲ ಸೇವಿಸಿದುದರ ಪರಿಣಾಮವಾಗಿ, ವಿಕಿರಣದ ಪ್ರತಿಕೂಲ ಪರಿಣಾಮ ಇಲಿಗಳ ದೇಹದ ಮೇಲೆ ಉಂಟಾಗದಿರುವುದು ತಿಳಿದುಬಂದಿದೆ. ಪ್ರಯೋಗ ಶಾಲೆಯಲ್ಲಿ ಬೆಳೆಸಿದ Hela ಜೀವಕೋಶಗಳ ನಡೆಸಿದ ಪ್ರಯೋಗದಿಂದಲೂ ಮೇಲಿನ ಸಂಗತಿ ದೃಢಪಟ್ಟಿದೆ. ಒಟ್ಟಾರೆ ತ್ರಿಫಲ ಚೂರ್ಣಕ್ಕೆ ವಿಕಿರಣದಿಂದ ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ. ತ್ರಿಫಲದ ಈ ಗುಣಕ್ಕೆ, ಅದಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಗುಣ ಮತ್ತು ಗ್ಯಾಲಿಕ್ ಆಮ್ಲ ಕಾರಣವೆನ್ನಲಾಗಿದೆ. ಮನುಷ್ಯರು ಇದರ ಉಪಯೋಗ ಪಡೆಯುವುದಕ್ಕೆ ಮೊದಲು ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆನ್ನಲಾಗಿದೆ.

* ಸ್ಟಾಗ್ ಡಾಲಿ ಇಲಿಗಳಿಗೆ, 10 ದಿನಗಳವರೆಗೆ ತ್ರಿಫಲ ಚೂರ್ಣವನ್ನು (1 ಮತ್ತು 15 ಗ್ರಾಂ | ಪ್ರತಿ ಕಿಲೊ ಗ್ರಾಂ ದೇಹದ ತೂಕಕ್ಕೆ / ಪ್ರತಿ ದಿನಕ್ಕೆ) ಸೇವಿಸಲು ಕೊಟ್ಟು ಸಜ್ಜುಗೊಳಿಸಲಾಯಿತು. ನಂತರ ಚೂರ್ಣ ಸೇವಿಸಿದ ಇಲಿಗಳನ್ನು ಗ್ಯಾಮ ವಿಕಿರಣಕ್ಕೆ ಒಡ್ಡಾಲಾಯಿತು. ನಂತರ

ಇಲಿಗಳನ್ನು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ, ಹೆಚ್ಚಿನ ಪ್ರಮಾಣದ ತ್ರಿಫಲ ಸೇವಿಸಿದ ಇಲಿಗಳಿಗೆ ವಿಕಿರಣದಿಂದ ದೇಹದ ಮೇಲಾಗುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯ ಉಂಟಾಗಿತ್ತೆಂದು ವರದಿಯಾಗಿದೆ (ಯೂನ್ ಮತ್ತು ಇತರರು, 2012). ಅಧಿಕ ಪ್ರಮಾಣದ ತ್ರಿಫಲ (1 1.6 ಗ್ರಾಂ ಪ್ರತಿ ಕಿಲೋ ಗ್ರಾಂ ದೇಹದ ತೂಕ) ಚೂರ್ಣವನ್ನು ಸೇವಿಸಿದರೆ (10 ದಿನಗಳು) ಸಮರ್ಪಕವಾಗಿ ವಿಕಿರಣದ ಪ್ರಭಾವವನ್ನು ತಡೆಯಬಹುದೆಂದು ತಿಳಿದುಬಂದಿದೆ.

 ಸುದಿವಾತ (ಕಿಲ್ಟಾಯು) ರೋಗ ನಿರ್ವಹಣಾ ಗುಣ

      ತ್ರಿಫಲ ಚೂರ್ಣಕ್ಕೆ ಸಂದಿವಾತ ರೋಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡುವುದರ ಮೂಲಕ ಸಂದಿವಾತ ಚಿಕಿತ್ಸೆಗೆ ಉಪಯುಕ್ತ ৯ಎಂದು ಇಲಿಗಳಿಗೆ 100 ಮಿ. ಗ್ರಾಂ ಪ್ರತಿ ಕಿಲೋ ಗ್ರಾಂ ದೇಹದ ತೂಕ 18 ದಿನಗಳವರೆಗೆ  ಕೊಟ್ಟು ಪರೀಕ್ಷಿಸಿದಾಗ ತಿಳಿದುಬಂದಿದೆ.

 ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯುವ ಗುಣ

.       ತ್ರಿಫಲ ಚೂರ್ಣಕ್ಕೆ, ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಬ್ಯಾಕ್ಟಿರಿಯದ (Streptococcus mutans) ಬೆಳವಣಿಗೆಯನ್ನು ಕುಂಠಿತ ಗೊಳಿಸುವುದರ ಮೂಲಕ ಹಲ್ಲನ್ನು ರಕ್ಷಿಸುತ್ತದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂಡಿದೆ. ತ್ರಿಫಲ ಚೂರ್ಣ, ಎರಡು ಬಗೆಯ ಟೂತ್ ಪೇಸ್ಟ್‌ಗಳಿಗಿಂತಲೂ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇ. ಸೂಕ್ಷ್ಮಾಣು ಜೀವಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲ

(  ಸೂಚನೆ : ತ್ರಿಫಲ ದ್ರವ್ಯ ಒಂದನ್ನೇ ಉಪಯೋಗಿಸಿ ನಡೆಸಿದ ಪ್ರಯೋಗಗಳನ್ನು ಆಯ್ಕೆ ಮಾಡಿದೆ.]

        ನೀರು ಮತ್ತು ಎಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಎರಡೂ ಬಗೆಯ ಸತ್ವಗಳಿಗೆ, HIV ರೋಗಿಗಳಿಂದ ಸಂಗ್ರಹಿಸಿದ ಹಲವು ಬಗೆಯ ಬ್ಯಾಕ್ಟೀರಿಯಾಗಳನ್ನು  (Pseudomonos aeruginosa, Klebsiella pneumoniae, Shigella sonnei, Shigella flexneri, Staphylococcus aureus, Vibrao cholerae, Salmonella paratyhi-B, Escherichia coli, Enterococcus faecalis, Salmonella typhi) ನಾಶಪಡಿಸುವ ಸಾಮರ್ಥ್ಯ ಇದೆ ಎಂದು  ವರದಿಯಾಗಿದೆ.

        ನೀರು ಮತ್ತು ಮದ್ಯಸಾರ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ವಕ್ಕೆ, HIV ಹೋಗಿಗಳಿಂದ ಸಂಗ್ರಹಿಸಿದ ಬ್ಯಾಕ್ಟಿರಿಯ ನಾಶಕ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ .

. ಎಂಟಿರೊಕಾಕಸ್ ಫೀಕಾಲಿಸ್ (Enterococcus faecalis) ಎಂಬ ಈ ಬ್ಯಾಕ್ಟೀರಿಯಾ , ಗಾಳಿಯ ಅವಶ್ಯಕತೆಯಿಲ್ಲದೆ (Anovable) ಬದುಕುವ ಅವಕಾಶವಾದಿ ಗ್ರಾಮ್ ಪಾಸಿಟೀವ್ ಸೂಕ್ಷಾಣು ಜೀವಿ, ಇದು ಮನುಷ್ಯರ ಬಾಯಿ, ಕರುಳು ಮಾತ್ತು ಯೋನಿಯಲ್ಲಿ ಜೀವಿಸುತ್ತದೆ. ಆರೋಗ್ಯವಂತರಿಗೆ ಮತ್ತು ರೋಗ ನಿರೋಧಕ ಶಕ್ತಿ  ಇರುವವರಿಗೆ ಈ ಬ್ಯಾಕ್ಟೀರಿಯಾದಿಂದ ತೊಂದರೆ ಇರುವುದಿಲ್ಲ ಈ ಬ್ಯಾಕ್ಟೀರಿಯಾ ಸೋಂಕು ಬಾಯಲ್ಲಿ ಉಂಟಾದರೆ ಹಲ್ಲಿನ ಮೂಲಕ್ಕೆ ಸೋಂಕು ಉಂಟಾಗಿ ತಡೆಯಲು ಅಸಾಧ್ಯವಾದ ಹಲ್ಲು ನೋವು ಉಂಟಾಗುತ್ತದೆ. ಕೆಲವೊಮ್ಮೆ ಬಾಯಿಯೊಳಗೆ ಹುಣ್ಣಾಗುತ್ತದೆ ಮತ್ತು ಹಲ್ಲಿನ ಮೇಲೆ ಕರೆ ಕಟ್ಟಲು ಈ ಬ್ಯಾಕ್ಟಿರಿಯವೂ ಕಾರಣ. ಉದರದ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಈ ಬ್ಯಾಕ್ಟಿರಿಯದ ಸೋಂಕು ಹೃದಯ ಮತ್ತು ಮೆದುಳಿನ (Meningitis) ತೊಂದರೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇಂತಹ ಉಪದ್ರವಕಾರಿ ಬ್ಯಾಕ್ಟಿರಿಯದ ಬೆಳವಣಿಗೆಯನ್ನು ಕುಂಠಿತಗೊಳಿಸುವುದರ ಜೊತೆ ನಾಶಪಡಿಸುವ ಸಾಮರ್ಥ್ಯ ತ್ರಿಫಲ ಚೂರ್ಣಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಜೊತೆಗೆ ತ್ರಿಫಲದ ಉಪಯೋಗದಿಂದ ಹಲ್ಲಿನ ಮೇಲೆ ಕರೆ ಕಟ್ಟುವುದನ್ನೂ ಸಹ ತಡೆಯಬಹುದು ಎಂದು ತಿಳಿದುಬಂದಿದೆ .

 ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಗುಣ :

ನೀರು ಮತ್ತು ಎಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ವಕ್ಕೆ, ಹಲ್ಲಿನ ಮೇಲೆ ಕರೆ (Plaque) ಕಟ್ಟಲು ಕಾರಣವಾದ ಬ್ಯಾಕ್ಟಿರಿಯಗಳ (Streptococcus mutans, Streptococcus sanguis 2 Streptococcus salivarina) ಬೆಳವಣಿಗೆಯನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಈ ಪ್ರಯೋಗದ ಆಧಾರದ ಮೇಲೆ ತ್ರಿಫಲ ಉಪಯೋಗಿಸುವುದರಿಂದ ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ..

ನೀರು ಮತ್ತು ಮದ್ಯಸಾರ ಉಪಯೋಗಿಸಿ ತ್ರಿಫಲ ಭಸ್ಮ (Triphala mashi) / ಕರಕಲುವಿಂದ ತಯಾರಿಸಿದ ಸತ್ಯಕ್ಕೆ ಗ್ರಾಮ್ ಪಾಸಿಟೀವ್ ಮತ್ತು ಗ್ರಾಮ್ ನೆಗಟೀವ್ ಬ್ಯಾಕ್ಟಿರಿಯಗಳ ಬೆಳವಣಿಗೆಯ ಕುಂಠಿತ ಗೊಳಿಸುವ ಮೂಲಕ ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ. ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಫಿನಾಲ್ಸ್ ಮತ್ತು ಟ್ಯಾನಿನ್ ಕಾರಣವೆನ್ನಲಾಗಿದೆ.

ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಸ್ಪೆಪ್ರೊಕಾಕಸ್ ಮುಟಾನ್ಸ್ ಎಂಬ ಬ್ಯಾಕ್ಲೀರಿಯವನ್ನು ನಾಶಪಡಿಸುವ ಸಾಮರ್ಥ್ಯ ತ್ರಿಫಲ ಚೂರ್ಣಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತ್ರಿಫಲ ಚೂರ್ಣವನ್ನು ಬಳಕೆ ಮಾಡುವುದರಿಂದ ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯಬಹುದೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಎಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲದಿಂದ ತಯಾರಿಸಿದ ಸತ್ಯಕ್ಕೆ ಬ್ಯಾಕ್ಟಿರಿಯ (Lactobacilli) ನಾಶಕ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ .

       ತ್ರಿಫಲ ಚೂರ್ಣದ ಬ್ಯಾಕ್ಟಿರಿಯ ಮತ್ತು ಶಿಲೀಂಧ್ರ ನಾಶಕ ಗುಣಕ್ಕೆ ಅದರಲ್ಲಿ (1, 2, 3 Benzenetriol, 2. Furancarboxaldehyde, 5 hydroxymethyl), 4H-Pyran-4- one, 2, 3-dihydro-3, 5 dihydroxy 6 methyl, Furfural, 2H Pyran 2, 6(3H) dione, D. Allose, n Hexadecanoic acid, DL Proline, 5 oxo, methyl ester, undecanol-5, 9- Phenanthrenol) ಘಟಕಗಳು ಕಾರಣವೆನ್ನಲಾಗಿದೆ.