ಮನೆ ಆರೋಗ್ಯ ತ್ರಿಫಲ: ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣ

ತ್ರಿಫಲ: ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣ

0

        ರಕ್ತದಲ್ಲಿ 4 ಬಗೆಯ ಕೊಬ್ಬಿನಾಂಶಗಳು ಶೇಖರಣೆಯಾಗುತ್ತವೆ. ಅವುಗಳೆಂದರೆ ಹೈ ಡೆನ್ಸಿಟಿ ಲಿಪೊಪ್ರೊಟೀನ್ (HDL ಒಳ್ಳೆಯ ಕೊಲೆಸ್ಪಿರಾಲ್), ಲೊ ಡೆನ್ಸಿಟಿ ಲಿಪೊ ಪ್ರೋಟೀನ್ (LDL), ವೆರಿ ಲೊ ಡೆನ್ಸಿಟಿ ಲಿಪೊ ಪ್ರೊಟೀನ್ (VLDL) ಮತ್ತು ಟ್ರೈಗ್ಲಿಸರೈಡ್ ಗಳು LDL ಮತ್ತು VLDL ಕೊಬ್ಬಿನಾಂಶವನ್ನು ಕೆಟ್ಟ ಕೊಲೆಸ್ಟಿರಾಲ್ ಎಂದು ಪರಿಗಣಿಸಲಾಗಿದೆ. ಕೆಟ್ಟ ಕೊಲೆಸ್ಟಿರಾಲ್‌ ಪ್ರಮಾಣ ಮತ್ತು ಟ್ರೈಗ್ಲಿಸರೈಡ್‌ನ ಅಂಶ ರಕ್ತದಲ್ಲಿ ಅಧಿಕವಾದರೆ ಹೃದಯ ಸಂಬಂಧದ ಕಾಯಿಲೆಗಳ ಉಗಮಕ್ಕೆ ನಾಂದಿಯಾಗುತ್ತದೆ.

Join Our Whatsapp Group

ಕೊಲೆಸ್ಟಿರಾಲ್ ಅಂಶ ಅಧಿಕವಾಗಿರುವ ಆಹಾರವನ್ನು (49 ಕೊಲೆಸ್ಟಿರಾಲ್ + 1% ಕೊಲಿಕ್ ಆಮ್ಲ + ಮೊಟ್ಟೆಯ ಲೋಳೆ) ಇಲಿಗಳಿಗೆ ಸೇವಿಸಲು ಕೊಟ್ಟು ಕೊಲೆಸ್ಟಿರಾಲ್ (ಕೊಬ್ಬಿನಾಂಶ) ಅಂಶ ಹೆಚ್ಚಾಗುವಂತೆ ಮಾಡಿದ ಇಲಿಗಳಿಗೆ, ತ್ರಿಫಲ ಚೂರ್ಣವನ್ನು (1 ಗ್ರಾಂ / ಪ್ರತಿ ಕಿಲೊ ಗ್ರಾಂ ದೇಹದ ತೂಕ) 48 ದಿನಗಳವರೆಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತ್ರಿಫಲ ಚೂರ್ಣಕ್ಕೆ ಕೊಬ್ಬಿನಾಂಶವನ್ನು (ಕೆಟ್ಟ ಕೊಲೆಸ್ಟಿರಾಲ್) ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ (ಸರವಣನ್ ಮತ್ತು ಇತರರು, 2007).

 ಕ್ಯಾನ್ಸರ್ ವಾಸಿ ಮಾಡುವ ಗುಣ :

        ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಈ ಕಾಯಿಲೆಯ ಉತ್ಪತ್ತಿಗೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲ. ಆದರೂ ಹೊಗೆಸೊಪ್ಪು ಮತ್ತು ಅವುಗಳ ಉತ್ಪನ್ನಗಳನ್ನು ಸೇವಿಸುವುದರಿಂದ, ಧೂಮಪಾನ ಮಾಡುವುದರಿಂದ, ಮದ್ಯಪಾನದಿಂದ, ಅಡಿಕೆ ಸೇವಿಸುವುದರಿಂದ ಮತ್ತು ಇತರ ಕಾರಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಕ್ಯಾನ್ಸ‌ರ್ ಉತ್ಪತ್ತಿಗೆ ದೇಹದ ವಿವಿಧ ಭಾಗಗಳಲ್ಲಿನ ಜೀವಕೋಶಗಳು ಹಿಡಿತವಿಲ್ಲದೆ – ಗುರಿ ಇಲ್ಲದೆ ವಿಭಜನೆಯಾಗುವುದರಿಂದ ಕ್ಯಾನ್ಸರ್ ಗೆಡ್ಡೆಗಳಾಗಿ ಬೆಳೆಯುತ್ತವೆ.

ಇದುಕ್ಕೆ ದೇಹದ ಇತರ ಭಾಗಗಳಿಗೂ ಹರಡಿ ದೇಹಾರೋಗ್ಯವನ್ನು ಕೆಡಿಸುತ್ತದೆ. ಕ್ಯಾನ್ಸರ್ ಇರುವಿಕೆಯನ್ನು ತಜ್ಞ ವೈದ್ಯರು ಹಲವು ಬಗೆಯ ಪರೀಕ್ಷೆಯ ನಂತರ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಈ ಕಾಯಿಲೆಯನ್ನು ಶಸ್ತ್ರ ಚಿಕಿತ್ಸೆ, ವಿಕಿರಣ ಮತ್ತು ಔಷಧಿಗಳ ಮೂಲಕ ಗುಣಪಡಿಸಬಹುದಾದರೂ ಅವುಗಳಿಂದ ಉಂಟಾದ ಪ್ರತಿಕೂಲ ಪರಿಣಾಮ ಜೀವನ ಪರ್ಯಂತ ಉಳಿಯುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ, ಪ್ರತಿಕೂಲ ಪರಿಣಾಮಗಳನ್ನುಂಟು ಮಾಡದ ಮತ್ತು ಪರಿಣಾಮಕಾರಿಯಾದ ಔಷಧಿಯನ್ನು ಕಂಡು ಹಿಡಿಯುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.

★ ನೀರು, ಮದ್ಯಸಾರ ಮತ್ತು ಅಸಿಟೋನ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ವವವನ್ನು ಪ್ರಯೋಗ ಶಾಲೆಯಲ್ಲಿ ಸಂರಕ್ಷಿಸಿದ ವಿವಿಧ ಬಗೆಯ ಕ್ಯಾನ್ಸರ್ ಕೋಶಗಳ ಮೇಲೆ (ಚರ್ಮದ ಕ್ಯಾನ್ಸರ್ ಕೋಶ, ಕೊರಳ ಕ್ಯಾನ್ಸರ್ ដា Cervical adenocarcinoma HeLa cell line), (Pancreatic adenocarcinoma – PANC-1) (Breast carcinoma cells – MBA-MB 231 ಸ್ಥನದ ಕ್ಯಾನ್ಸರ್ Shionogi 115 (S’115), MCF-7, MCF-10F, P53), – (Capan 3, BxPC-3, HFDE 6), ಉದರದ ಕ್ಯಾನ್ಸರ್ ಕೋಶ (Gastric carcinoma – CCK – B) ಮನುಷ್ಯರ ದೊಡ್ಡ ಕರುಳಿನ ಕ್ಯಾನ್ಸರ್ ಕೋಶ HCT- 116) ಪ್ರಯೋಗಿಸಿ ಪರೀಕ್ಷಿಸಿದಾಗ ಎಲ್ಲಾ ಬಗೆಯ ಸತ್ವಗಳಿಗೆ ಕ್ಯಾನ್ಸ‌ರ್ ವಾಸಿ ಮಾಡುವ ಗುಣವಿದೆಯೆಂದು ಕಂಡುಬಂದಿದೆ. ಸತ್ತದ ಈ ಗುಣಕ್ಕೆ ಅದಕ್ಕೆ ಇರುವ ಆ್ಯಂಟಿಆಕ್ಸಿಡೆಂಟ್ ಗುಣ ಮತ್ತು ಸತ್ವದಲ್ಲಿ ಅಡಕವಾಗಿರುವ ಗ್ಯಾಲಿಕ್ ಆಮ್ಲ ಮತ್ತು ಪಾಲಿಫೀನಾಲ್ಸ್ ಕಾರಣವೆನ್ನಲಾಗಿದೆ .

•★ ತ್ರಿಫಲ, ಕ್ಯಾನ್ಸ‌ರ್ ವಾಸಿ ಮಾಡುವ ಗುಣ ಹೊಂದಿದೆ ಎಂಬ ವಿಷಯದ ಬಗ್ಗೆ ಪ್ರಕಟವಾದ ಸಂಶೋಧನಾ ಪ್ರಬಂಧಗಳನ್ನು ಆಧರಿಸಿ ತಯಾರಿಸಿದ ವಿಮರ್ಶಾ ಪ್ರಬಂಧದ ಪ್ರಕಾರ, ತ್ರಿಫಲ ಸತ್ವಕ್ಕೆ ಹಲವು ಬಗೆಯ ಕ್ಯಾನ್ಸ‌ರ್ ದೇಹದಲ್ಲಿ ಉಂಟಾಗದಂತೆ ತಡೆಯುವ ಮತ್ತು ಅವುಗಳನ್ನು ಗುಣ ಪಡಿಸುವ ಸಾಮರ್ಥ್ಯವಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ತ್ರಿಫಲವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ದಿಕ್ಕಿನಲ್ಲಿ ಗಮನ ಹರಿಸಬೇಕಾಗಿದೆ

★ಆಯುರ್ವೇದ ಶಾಸ್ತ್ರೀಯ ಗ್ರಂಥಗಳನ್ನು ಪರಾಮರ್ಶಿಸಿದಾಗ ತ್ರಿಫಲಕ್ಕೆ ಕ್ಯಾನ್ಸರ್ ಚಿಕಿತ್ಸೆಗೆ ಔಷಧಿಯಾಗುವ ಸೂಚನೆಗಳಿವೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಗಾಯ ವಾಸಿ ಮಾಡುವ ಗುಣ :

         ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ಗಾಯವೆಂದು ಕರೆಯುತ್ತಾರೆ. ಗಾಯವಾಗುವುದಕ್ಕೆ ಹಲವಾರು ಕಾರಣಗಳಿವೆ. ಆಕಸ್ಮಿಕ ಅಗ್ನಿ ಅವಗಢದಿಂದ, ಹರಿತವಾದ ಆಯುಧ, ಚೂಪಾದ ವಸ್ತು ತಾಗುವುದರಿಂದ, ಶಸ್ತ್ರ ಚಿಕಿತ್ಸೆ ನಡೆಸಿ ಚರ್ಮದ ಅನವಶ್ಯಕ ಭಾಗವನ್ನು ತೆಗೆಯುವುದರಿಂದ ಗಾಯ ಉಂಟಾಗುತ್ತದೆ. ಗಾಯದಲ್ಲಿ 2 ಬಗೆಗಳಿವೆ. (1) ತೀಕ್ಷವಾದ ಗಾಯ ಮತ್ತು (2) ದೀರ್ಘಕಾಲದ ಗಾಯ. ತೀಕ್ಷತರನಾದ ಗಾಯ ಮಂದಗತಿಯಲ್ಲಿ ವಾಸಿಯಾಗುತ್ತದೆ. ದೀರ್ಘ ಕಾಲದವರೆಗೆ ಗಾಯ ವಾಸಿಯಾಗದೆ ಇರುವುದಕ್ಕೆ ಹಲವು ಕಾರಣಗಳಿವೆ.

1) ಬ್ಯಾಕ್ಟಿರಿಯ ಸೋಂಕು ಉಂಟಾಗುವುದರಿಂದ

2) ಗಾಯದ ಜಾಗಕ್ಕೆ ರಕ್ತ ಸರಿಯಾಗಿ ಪೂರೈಕೆಯಾಗದಿರುವುದು

3) ಮಧುಮೇಹದಂತಹ ದೀರ್ಘ ಕಾಲದ ಕಾಯಿಲೆ ಇರುವುದು.

ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎರಡು ಬಗೆಯ ಗಾಯಗಳೆಂದರೆ

1) ಒತ್ತಡದಿಂದ ಉಂಟಾಗುವ ಗಾಯ

2) ಗ್ಯಾಂಗ್ರೀನ್

 ಒತ್ತಡದಿಂದ ಉಂಟಾಗುವ ಗಾಯ —ದೀರ್ಘಕಾಲ ಹಾಸಿಗೆ ಮಲಗುವಂತಹ ಕಾಯಿಲೆ ಅಥವಾ ಸಂದರ್ಭ ಉಂಟಾದಾಗ ಹಾಸಿಗೆಯ ಹುಣ್ಣು ಉಂಟಾಗುತ್ತದೆ. ದೇಹದ ಪೂರ್ಣ ಒತ್ತಡ ಸದಾಕಾಲ ಪಾದದ ಯಾವುದೊ ಒಂದು ಭಾಗದ ಮೇಲೆ ಬೀಳುವುದರಿಂದ ಒತ್ತಡದ ಗಾಯ (Pressure wound) ಉಂಟಾಗುತ್ತದೆ. ಇಂತಹ ಒತ್ತಡದ ಗಾಯ ಮಧುಮೇಹಿಗಳ ಪಾದ ಹೆಬ್ಬೆಟ್ಟಿನ ಬುಡದಲ್ಲಿ ಉಂಟಾಗುತ್ತದೆ.

 ಗ್ಯಾಂಗ್ರೀನ್ :

ಮಧುಮೇಹಿಗಳಲ್ಲಿ, ಕಾಯಿಲೆಯನ್ನು ನಿಯಂತ್ರಣದಲ್ಲಿಡದ ಸಂದರ್ಭದಲ್ಲಿ ಸಾಮಾನ್ಯವಾಗಿ ಉಂಟಾದ ಗಾಯ, ಗ್ಯಾಂಗ್ರಿನ್ ಗಾಯವಾಗಿ ಪರಿವರ್ತನೆಯಾಗುತ್ತದೆ. ಗ್ಯಾಂಗ್ರಿನ್ ಗಾಯವಾಗುವುದಕ್ಕೆ ಮುಖ್ಯ ಕಾರಣ ಗಾಯದ ಜಾಗಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಸಂಚಾರವಾಗದೆ ಇರುವುದು, ನರಗಳು ಸ್ಪರ್ಶ ಗುಣವನ್ನು ಕಳೆದುಕೊಂಡು ನೋವಿನ ಕೊರತೆಯಿಂದ ಜೀವಕೋಶಗಳು ಕೊಳೆಯುವಿಕೆ, ಮುಂತಾದವುಗಳು,

     ಮಧುಮೇಹಿಗಳಲ್ಲಿ ಉಂಟಾಗುವ ಎಲ್ಲಾ ಬಗೆಯ ಗಾಯಗಳನ್ನು ಪರಿಣಿತ ವೈದ್ಯರ ಚಿಕಿತ್ಸೆ ಮಾಡಬೇಕಾಗುತ್ತದೆ.

ಸಾಮಾನ್ಯವಾದ ಗಾಯ ವಾಸಿಯಾಗುವ ಪ್ರಕ್ರಿಯೆ 4 ಹಂತವನ್ನು ಒಳಗೊಂಡಿದೆ.

1) ರಕ್ತ ಹೆಪ್ಪುಗಟ್ಟುವ ಹಂತ

2) ಉರಿಯೂತ ಉಂಟಾಗುವ ಹಂತ

3) ಜೀವಕೋಶಗಳ ಉತ್ಪತ್ತಿ ಮತ್ತು ಬೆಳವಣಿಗೆಯ ಹಂತ

4) ಪಕ್ಷತೆಯ ಹಂತ

 ರಕ್ತ ಹೆಪ್ಪುಗಟ್ಟುವ ಹಂತ :

     ಗಾಯವಾದ ಕೂಡಲೇ ದೇಹ ತುರ್ತಾಗಿ ರಕ್ತ ಹೆಪ್ಪು ಗಟ್ಟುವ ಪ್ರಕ್ರಿಯೆಗೆ ಪ್ರಚೋದನೆ ನೀಡುತ್ತದೆ. ಈ ಸಮಯದಲ್ಲಿ ಪ್ಲೇಟ್ಲೆಲೆಟ್ ಗಳು ಅಥವಾ ಫ್ರಾಂಟೊಸೈಟ್ ಗಳು (ರಿಕ್ಷದಲ್ಲಿರುವ ಬಣ್ಣವಿಲ್ಲದ ಕೋಣೆಗಳು ಕೆಂಪು ಮತ್ತು ಬಿಳಿ ರಕ್ಷಗಳ ಜೊತೆ ಇರುತ್ತವೆ.) ಕೊಲ್ಲಾಜನ್ ಎಂಬ ಪ್ರೊಟೀನ್‌ಗಳ ಜೊತೆಗೂಡಿ ರಕ್ತ ಹೆಪ್ಪುಗಟ್ಟುತ್ತದೆ. ಈ ಕ್ರಿಯೆಗೆ ಫ್ರಾಂಬಿನ್ ಎಂಬ ಕಿಣ್ಣ ಮಧ್ಯಸ್ತಿಕೆ ವಹಿಸುತ್ತದೆ.

 ಉರಿಯೂತ ಉಂಟಾಗುವ ಹಂತ :

     ಈ ಹಂತದಲ್ಲಿ ಬಿಳಿಯ ರಕ್ತ ಕಣಗಳು ಬ್ಯಾಕ್ಟಿರಿಯಗಳನ್ನು ನಾಶಪಡಿಸುತ್ತವೆ. ನ್ಯೂಟ್ರೋಫಿಲ್ ಉತ್ಪತ್ತಿಯಾಗುತ್ತವೆ. ಇವೂ ಸಹ ಒಂದು ಬಗೆಯ ಬಿಳಿಯ ರಕ್ತ ಕಣಗಳು. ಇವು ಗಾಯದ ಅವಶೇಷಗಳನ್ನು ನಿರ್ಮೂಲನೆ ಮಾಡುತ್ತವೆ. ಈ ಹಂತದಲ್ಲಿ ಉರಿಯೂತವಿರುತ್ತದೆ.

 ಜೀವಕೋಶಗಳ ಉತ್ಪತ್ತಿ ಮತ್ತು ಬೆಳವಣಿಗೆ :

     ಈ ಹಂತದಲ್ಲಿ ಗಾಯದ ಅಂಚಿನಿಂದ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಆರಂಭಿಸಿ ಗಾಯವನ್ನು ಮುಚ್ಚುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಕ್ರಿಯೆ ಪೂರ್ಣಗೊಳ್ಳಲು 24 ದಿನಗಳು ಬೇಕಾಗುತ್ತದೆ. ಈ ಹಂತದಲ್ಲಿ ಕೊಲ್ಲಾಜನ್‌ನ ಅವಶ್ಯಕತೆ ಇರುತ್ತದೆ.

 ಪಕ್ಷತೆಯ ಹಂತ

      ಈ ಹಂತದಲ್ಲಿ ಮಂದಗತಿಯಲ್ಲಿ ಚರ್ಮ ತನ್ನ ಮೊದಲಿನ ಬಿಗಿತನ ಮತ್ತು ಸ್ಥಿತಿ ಸ್ಥಾಪಕತ್ವವನ್ನು ಪಡೆಯುತ್ತದೆ. ಈ ಹಂತ ಪೂರ್ಣವಾಗಲು 24 ದಿನಗಳಿಂದ 2 ವರ್ಷ ಬೇಕಾಗಬಹುದು. ಇದು ಗಾಯದ ತೀರ್ವತೆಯನ್ನು ಅವಲಂಬಿಸುತ್ತದೆ.

 ಪ್ರಸ್ತುತ ಸಂಶೋಧನೆಗಳಲ್ಲಿ ಆಯುಧದಿಂದಾದ ಗಾಯದ ಬಗ್ಗೆ ಚರ್ಚಿಸಲಾಗಿದೆ.

 ★ತ್ರಿಫಲದ ಸತ್ಯ ಉಪಯೋಗಿಸಿ ತಯಾರಿಸಿದ ಆಯಿಂಟ್ ಮೆಂಟ್ ಅನ್ನು (10% ww) ಗಾಯದ ಮೇಲೆ ಲೇಪಿಸಿ ಪರೀಕ್ಷಿಸಿದಾಗ ತ್ರಿಫಲ ಆಯಿಂಟ್ ಮೆಂಟ್‌ ಗೆ ಸೋಂಕಿನಿಂದ ಕೂಡಿದ ಗಾಯವನ್ನು ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ. ತ್ರಿಫಲದ ಈ ಗುಣಕ್ಕೆ ಅದಕ್ಕೆ ಇರುವ ಬ್ಯಾಕ್ಟಿರಿಯ ನಾಶಕ ಗುಣ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಕಾರಣವೆನ್ನಲಾಗಿದೆ.

★ತ್ರಿಫಲ ಚೂರ್ಣವನ್ನು ಎಳ್ಳೆಣ್ಣೆಯಲ್ಲಿ ಕಲಸಿ ಮುಲಾಮು ತಯಾರಿಸಿ, ಪ್ರಯೋಗ ಶಾಲೆಯಲ್ಲಿ ಗಾಯ ಮಾಡಿದ ಇಲಿಗಳಿಗೆ ಲೇಪಿಸಿ ಪರೀಕ್ಷಿಸಿದಾಗ ತ್ರಿಫಲ ಚೂರ್ಣಕ್ಕೆ ಗಾಯ ವಾಸಿ ಮಾಡುವ ಗುಣವಿದೆಯೆಂದು ತಿಳಿದುಬಂದಿದೆ. ಆದರೆ, ಈ ಗುಣ, ಯಷ್ಟಿಮಧು (Glycyrrhiza glabra) ಉಂಟು ಮಾಡುವ ಪ್ರಭಾವಕ್ಕಿಂತ ಸ್ವಲ್ಪ ಕಡಿಮೆಯೆಂದು ಕಂಡುಬಂದಿದೆ .

ಗಾಯ ಬೇಗ ವಾಸಿಯಾಗುವಂತೆ ಮಾಡಲು ಗಾಯದ ಮೇಲೆ ಕೊಲ್ಲಾಜನ್ ಸ್ಟಾಂಜ್ (Collagen sponge) ಎಂಬ ಒಂದು ಬಗೆಯ ಪ್ಲಾಸ್ಟ‌ರ್ ಅನ್ನು ಅಂಟಿಸುತ್ತಾರೆ. ಇದರಲ್ಲಿರುವ ಕೊಲ್ಲಾಜನ್ ಸತ್ಯ ಗಾಯದ ತೇವಾಂಶವನ್ನು ಕಾಪಾಡುವುದರ ಜೊತೆಗೆ ಜೀವಕೋಶಗಳು ವೃದ್ಧಿಯಾಗುವಂತೆ ಮಾಡಿ ಗಾಯ ವಾಸಿಯಾಗುವಂತೆ ಮಾಡುತ್ತದೆ. ಇಂತಹ ಕೊಲ್ಲಾಜನ್ ಸ್ಟಾಂಜ್ಗೆ, ಮೆಥನಾಲ್ ದ್ರಾವಣ ಉಪಯೋಗಿಸಿ ತ್ರಿಫಲ ಚೂರ್ಣದಿಂದ ತಯಾರಿಸಿದ ಸತ್ವವನ್ನು ಸಂಯೋಜನೆಗೊಳಿಸಿ ಗಾಯದ ಮೇಲೆ ಅಂಟಿಸಿದರೆ ಸೋಂಕಿನಿಂದ ಕೂಡಿದ ಗಾಯವೂ ಸಹ ವಾಸಿಯಾಗುತ್ತದೆಯೆಂದು.

★ಕೊಲ್ಲಾಜನ್ (Collagen) ಎಂಬುದು ಒಂದು ಬಗೆಯ ಪ್ರೊಟೀನ್, ಸ್ನಾಯುವಿನ ಬಿಗಿತನಕ್ಕೆ ಚರ್ಮದ ಬೆಳವಣಿಗೆಗೆ ಮತ್ತು ಮೂಳೆ ಗಟ್ಟಿಯಾಗಲು ಈ ಕೊಲ್ಲಾಜನ್ ಉಪಯುಕ್ತ, ಗಾಯ ವಾಸಿಯಾಗುವುದಕ್ಕೆ ಈ ಪ್ರೊಟೀನ್ ಅತ್ಯಾವಶ್ಯಕ. ತ್ರಿಫಲ ಚೂರ್ಣಕ್ಕೆ ಕೊಲ್ಲಾಜನ ಉತ್ಪತ್ತಿಯಾಗುವಂತೆ ಪ್ರಚೋದಿಸುವ ಗುಣವಿದೆಯೆಂದು ತನ್ಮೂಲಕ ಗಾಯವನ್ನು ವಾಸಿ ಮಾಡುವ ಸಾಮರ್ಥ್ಯ ಹೊಂದಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ .

ಒಟ್ಟಾರೆ ತ್ರಿಫಲ ಚೂರ್ಣ, ಗಾಯ ವಾಸಿ ಮಾಡುವಂತಹ ಉತ್ತಮ ಔಷಧಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.