ಮನೆ ಆರೋಗ್ಯ ಮೈಕಾಂತಿ ವೃದ್ಧಿಗೆ, ಚರ್ಮ ಸುಕ್ಕಾಗುವುದನ್ನು ತಡೆಯಲು ತ್ರಿಫಲ

ಮೈಕಾಂತಿ ವೃದ್ಧಿಗೆ, ಚರ್ಮ ಸುಕ್ಕಾಗುವುದನ್ನು ತಡೆಯಲು ತ್ರಿಫಲ

0

ಸಮಭಾಗ ತ್ರಿಫಲ ಚೂರ್ಣ, ಮೆಂತ್ಯದ ಪುಡಿ, ಕಡಲೆ ಹಿಟ್ಟು ಮತ್ತು ಸೀಗೆಕಾಯಿ ಪುಡಿ . ಇವುಗಳನ್ನು ಮಿಶ್ರಣ ಮಾಡಿ ಸ್ನಾನದ ಪುಡಿ ತಯಾರಿಸಿಕೊಂಡು ಮೈ ಮತ್ತು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಮೈ ಕಾಂತಿಯುಕ್ತವಾಗುತ್ತದೆ. ವಯಸ್ಸಿನ ಕಾರಣದಿಂದ ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. ತಲೆಯ ಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತದೆ. ಮೇಲಿನ ದ್ರವ್ಯಗಳಲ್ಲಿ ಯಾವುದಾದರೂ ಒಂದು ಅಲರ್ಜಿಯಾಗುವಂತಿದ್ದರೆ ಅಂತಹ ದ್ರವ್ಯವನ್ನು ಹೊರತು ಪಡಿಸಿ ಉಳಿದವುಗಳನ್ನು ಉಪಯೋಗಿಸಬಹುದು.

Join Our Whatsapp Group

10 .ರೋಗ ನಿರೋಧಕ ಶಕ್ತಿಯನ್ನುಂಟು ಮಾಡುಲ ಚಿಕಿತ್ಸೆ :

ಹಲವಾರು ಜೈವಿಕ ಕ್ರಿಯೆಗಳಿಂದ ಉತ್ಪತ್ತಿಯಾಗುವ ಅಧಿಕ ಪ್ರಮಾಣದ ಕ್ರಿಯಾತ್ಮಕ ಆಮ್ಲಜನಕ ಕಣಗಳು ದೇಹದ ಬಹುತೇಕ ಕಾಯಿಲೆಗಳ ಉತ್ಪತ್ತಿಗೆ ಕಾರಣ ಎಂಬುದನ್ನು ಆಧುನಿಕ ವಿಜ್ಞಾನ ಸಾಬೀತು ಪಡಿಸಿದೆ. ಇಂತಹ ಕ್ರಿಯಾತ್ಮಕ ಆಮ್ಲಜನಕ ಕಣಗಳನ್ನು ನಿವಾರಣೆ ಮಾಡುವುದರ ಮೂಲಕ ದೇಹವನ್ನು ಕಾಪಾಡುವ (ಆ್ಯಂಟಿಆಕ್ಸಿಡೆಂಟ್) ಗುಣ ತ್ರಿಫಲಕ್ಕೆ ಇದೆಯೆಂದು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ಜೊತೆಗೆ ತ್ರಿಫಲಕ್ಕೆ ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನ ಗೊಳಿಸುವ ಮತ್ತು ಉಂಟು ಮಾಡುವ ಸಾಮರ್ಥ್ಯವಿದೆ. ಆದುದರಿಂದ ನಿಯಮಿತವಾಗಿ ತ್ರಿಫಲ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯುಂಟಾಗುತ್ತದೆ. ರೋಗ ರಹಿತ ಜೀವನ ನಡೆಸಬಹುದು.

11. ಹಲ್ಲಿನ ಮೇಲೆ ಕರೆ ಕಟ್ಟುವುದನ್ನು, ಹಲ್ಲು ಹುಳುಕಾಗುವುದನ್ನು ಮತ್ತು ವಸಡಿನ ರೋಗಗಳು (Gingivitis) ಉಂಟಾಗದಂತೆ ತಡೆಯಲು ಚಿಕಿತ್ಸೆ

ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ತ್ರಿಫಲ ಚೂರ್ಣದಿಂದ ಹಲ್ಲು ಉಜ್ಜುವ ಅಭ್ಯಾಸ ಬೆಳೆಸಿ ಕೊಳ್ಳುವುದರಿಂದ ಅಥವಾ ಟೂತ್ ಪೇಸ್ಟ್ ಉಪಯೋಗಿಸಿ ಬ್ರಷ್ ಮಾಡಿದ ನಂತರ ಅರ್ಧ ಚಮಚ ತ್ರಿಫಲವನ್ನು ಸ್ವಲ್ಪ ನೀರಿನಲ್ಲಿ ಕದಡಿ 5 ನಿಮಿಷ ಬಾಯಿ ಮುಕ್ಕಳಿಸುವ ಅಭ್ಯಾಸ (ದಿನಕ್ಕೆ 5 ಬಾರಿ) ಬೆಳೆಸಿಕೊಂಡರೆ, ಹಲ್ಲಿನ ಮೇಲೆ ಕರೆ ಕಟ್ಟುವುದಾಗಲಿ, ಹಲ್ಲು ಹುಳುಕಾಗುವುದಾಗಲಿ ಅಥವಾ ವಸಡಿನ ಉರಿಯೂತ (Gingivitis) ವಾಗಲಿ ಉಂಟಾಗುವುದಿಲ್ಲ. ಈ ಚಿಕಿತ್ಸೆಯನ್ನು ಸಾವಿರಾರು ರೋಗಿಗಳ (ಎಲ್ಲಾ240 ವಯೋಮಾನದವರು ಮೇಲೆ ನಡೆಸಿ ಉಪಯುಕ್ತವೆಂದು ದೃಢಪಟ್ಟಿದೆ ತ್ರಿಪಲ ಕಷಾಯ  ಚೂರ್ಣದಷ್ಟೇ ಪರಿಣಾಮಕಾರಿ

 *12.ಸಾಮಾನ್ಯ ಜ್ವರ, ಶೀತ, ನೆಗಡಿ ಮತ್ತು ಗಂಟಲು ಕೆರೆತಕ್ಕೆ ಚಿಕಿತ್ಸೆ :

ದಿನಕ್ಕೆ 2 ಬಾರಿ, ಪ್ರತಿ ಬಾರಿಗೆ ತಲಾ* ಅರ್ಧ ಚಮಚ ತಿಫಲ ಮತ್ತು ತಿಕಟು ಚೂರ್ಣವನ್ನು ಜೇನುತುಪ್ಪದೊಡನೆ, :

ಇಲ್ಲಿ ತಿಳಿಸಲಾಗಿರುವ ಔಷಧೀಯ ಉಪಯೋಗಗಳಲ್ಲದೆ, ಇತರ ಔಷಧೀಯ ದ್ರವ್ಯಗಳ ಸಹಯೋಗದೊಂದಿಗೆ ತಿಫಲ ಚೂರ್ಣವನ್ನು ಹಲವಾರು ಕಾಯಿಲೆಗಳ ಚಿಕಿತ್ಸೆಗೆ ಕೆಲವ ಕಾಯಲೆಗಳುರೆಮಾತ್ರ ಉದ ಅಜೀರ್ಣ, ಅಗ್ನಿಮಾಂದ್ಯ, ಆಸ್ತಮಾ, ಆಮ್ಲಪಿತ್ತ, ಉನ್ಮಾದ ಉರಿಮೂತ್ರ, ಉರುಸ್ತಂಬ, ಕುಕ್ಕುಲು ಕೆಮ್ಮು, ಕುಷ್ಠರೋಗ, ಕ್ಷಯರೋಗ, ಖಿನ್ನತೆ, ಗುಲ್ಮ ರೋಗ, ಗೌಟ್, ಜೋಮ, ತಲೆಸುತ್ತು, ತೊನ್ನು, ದಂತರೋಗ, ನಿದ್ರಾಹೀನತೆ, ಪಾಂಡುರೋಗ, ಪ್ರೀಹರೋಗ, ಬಾಲನೆ, ಬಿಕ್ಕಳಿಕೆ, ಭಗಂದರ, ಮಾನಸಿಕ ಒತ್ತಡ, ಮೂಲವ್ಯಾಧಿ, ಯೋನಿರೋಗ, ರಕ್ತದ ಏರೊತ್ತಡ, ರಕ್ತಹೀನತೆ, ರಕ್ತಪ್ರದರ, ವ್ರಣ, ವಾಂತಿ, ವಾಕರಿಕೆ, ವಿಸರ್ಪ, ಶ್ವೇತಪ್ರದರ, ಸನ್ನಿಪಾತ, ಹುಳಿತೇಗು, ಹೊಟ್ಟೆಯುಬ್ಬರ, ಹೃದ್ರೋಗ ಮುಂತಾದವುಗಳು.

 ತ್ರಿಫಲಯುಕ್ತ ಔಷಧಿಗಳು

 ಅಂತ್ರಕುತಾರಂ ಗುಲಿಕ – ಕರುಳು, ಮೂತ್ರಪಿಂಡ ಮತ್ತು ಗರ್ಭಕೋಶದ ತೊಂದರೆಗೆ ಮತ್ತು ಹೊಟ್ಟೆಯುಬ್ಬರ ನಿವಾರಣೆಗೆ ಚಿಕಿತ್ಸೆ [ದಿ ಆರ್ಯ ವೈದ್ಯಶಾಲ, ಕೊಟ್ಟಕಲ್‌, ಕೇರಳ],

 ಅಗ್ನಿತುಂಡಿ ವಟಿ – ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆನೋವು, ಗ್ರಹಿಣಿ ರೋಗ, ಯಕೃತ ವಿಕಾರ ಮತ್ತು ಮಲಬದ್ಧತೆಯ ಚಿಕಿತ್ಸೆಗೆ ಉಪಯುಕ್ತ ಶ್ರೀ ದೂತಪಾಪೇಶ್ವ‌ರ್, ಮಹಾರಾಷ್ಟ್ರ ಇಂಡಿಯನ್ ಮೆಡಿಸಿನ್ ಇಂಡಸ್ಟ್ರೀಸ್, ವಿಜಯವಾಡ].

 ಅಬ್ರಭಸ್ಟಂ – ಮಧುಮೇಹ, ಲೈಂಗಿಕ ದೌರ್ಬಲ್ಯ ಮತ್ತು ರೋಗನಿರೋಧಕ ಶಕ್ತಿಯ ಕೊರತೆಯ ನಿವಾರಣೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕಲ್, ಕೇರಳ].

 ಅಬ್ರಲೋಹ ಮಾತ್ರೆಗಳು – ಕಾಮಾಲೆ , ದೈಹಿಕ ದೌರ್ಬಲ್ಯ, ಗರ್ಭಿಣಿಯರ ರಕ್ತಹೀನತೆ, ಜೀರ್ಣ ಜ್ವರ, ಭೇದಿ, ಅಗ್ನಿಮಾಂದ್ಯ ಮತ್ತು ಪಿತ್ತಜನಕಾಂಗದ ತೊಂದರೆಗಳಿಗೆ ಉಪಯುಕ್ತ ಶ್ರೀ ದೂತಪಾಪೇಶ್ವರ್, ಮಹಾರಾಷ್ಟ್ರ).

  ಅಭಯಾಮೃತ ರಸಾಯನಂ – ಶ್ರೀಘ್ರ* ವೀರ್ಯಸ್ಟಲನ ಮತ್ತು ಸ್ವಪ್ನ ಸ್ಥಲನ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕಲ್‌, ಕೇರಳ]

 ಆಭಯಾಲೇಪ — ಮೂಲವ್ಯಾಧಿಗೆ ಮತ್ತು ಗುದದ್ವಾರ ಬಿರುಕಿಗೆ ಬಾಹ್ಯ ಲೇಪನಕ್ಕೆ ಉಪಯುಕ್ತ. ನವೆ, ಉರಿ ಮತ್ತು ಊತ ಶೀಘ್ರದಲ್ಲಿ ಕಡಿಮೆಯಾಗುತ್ತದೆ ದಿ ಸದ್ದೆದ ಶಾಲಾ ಪ್ರೈ. ಲಿ., ಜನಗೂಡು, ಬಿ.ವಿ. ಪಂಡಿತ್, ನಂಜನಗೂಡು.

 ಎ ಅಮ್ನಾತಾರಿ ರಸ್ – ಮೂತ್ರಕಾರಕ, ವಾಯುನೋವು, ಗೆಣ್ಣು ನೋವು, ಮೈ-ಕೈ ನೋವು ಮತ್ತು ಉರಿಯೂತದ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್].

 ಆಮರ ಸುಂದರಿವಟಿ – ಹೊಟ್ಟೆನೋವು , ಹೊಟ್ಟೆಯುಬ್ಬರ, ಗೆಣ್ಣುನೋವು, ಆಸ್ತಮಾ, * ಮೊಳೆರೋಗ, ಉನ್ಮಾದ ಮುಂತಾದ ನರ ಸಂಬಂಧದ ರೋಗಗಳಿಗೆ ಉಪಯುಕ್ತ [ವೈದ್ಯನಾಥ್].

 ಅಮೃತಾದಿ ಗುಲಿಕ – ವಿವಿಧ ಬಗೆಯ ಚರ್ಮದ ಕಾಯಿಲೆ, ಇಸಬು, ಕುಷ್ಠರೋಗ, ಅಮವಾತ, ಮೊಳೆರೋಗ, ಭಗಂದರ, ಬಹುಮೂತ್ರ ಮತ್ತು ಆಪ್ಲಪಿತ್ತ ಚಿಕಿತ್ಸೆಗೆ ಉಪಯುಕ್ತ ಶ್ರೀ ದೂತಪಾಪೇಶ್ವರ್, ಮಹಾರಾಷ್ಟ್ರ).

 ಆರಣ್ಯ ತುಳಸ್ವಾದಿ ಕೇರತೈಲಂ – ಇಸಬು, ವಿಸರ್ಪ ಮುಂತಾದ ಚರ್ಮದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].

 ಆರವಿಂದಾಸವ – ಮಕ್ಕಳಿಗೆ ಉತ್ತಮ ಟಾನಿಕ್, ರಿಕೆಟ್ಸ್, ಜ್ವರ, ಭೇದಿ, ಕೆಮ್ಮು, ಮಲಬದ್ಧತೆ ಮತ್ತು ಹಲ್ಲು ನೋವಿನ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್, ಇಂಡಿಯನ್ ಮೆಡಿಸಿನ್ ಇಂಡಸ್ಟ್ರೀಸ್, ವಿಜಯವಾಡ].

 ಆರಿಮೇದಾದಿ ತೈಲಂ – ಹಲ್ಲುನೋವು ಮತ್ತು ವಸಡಿನ ತೊಂದರೆಗಳಿಗೆ ಉಪಯುಕ್ತ ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].

 ಅಲರ್ಜಿನ್ (ಗ್ರಾನ್ಯೂಲ್ಸ್) – ಅಲರ್ಜಿಗೆ, ಅಲರ್ಜಿಯಿಂದ ಬಂದಂತಹ ಶೀತ, ನೆಗಡಿ, ಪಿತ್ತದ ಗಂಧೆಗೆ ಉಪಯುಕ್ತ [ನಾಗಾರ್ಜುನ].

 ಆವಿಪತ್ತಿಕರ ಚೂರ್ಣ – ಆಮ್ಲಪಿತ್ತ ಮತ್ತು ಇದರಿಂದ ಉಂಟಾಗುವ ಇತರ ತೊಂದರೆಗಳ

ಚಿಕಿತ್ಸೆಗೆ ಉಪಯುಕ್ತ. ಜೀರ್ಣಕಾರಕ, ಹೊಟ್ಟೆನೋವು ಮತ್ತು ಮಲಬದ್ಧತೆಗೂ ಉಪಯುಕ್ತ \ಬೈದ್ಯನಾಥ್, ಇಂಪ್ ಕಾಪ್ಸ್, ಚೆನ್ನೈ, ಇಂಡಿಯನ್ ಮೆಡಿಸಿನ್ ಇಂಡಸ್ಟ್ರೀಸ್, ವಿಜಯವಾಡ; ಶ್ರೀ ಶ್ರೀ ಆಯುರ್ವೇದ, ಬೆಂಗಳೂರು; ಶ್ರೀ ದೂತ ಪಾಪೇಶ್ವರ್, ಮಹಾರಾಷ್ಟ್ರ),

 ಆಶ್ವಕಂಚುಕಿ ರಸ್ (ಮಾತ್ರೆಗಳು) – ಭೇದಿಕಾರಕ, ಜ್ವರ ನಿವಾರಕ, ದೊಡ್ಡದಾದ ಪಿತ್ತಜನಕಾಂಗ ಮತ್ತು ಸ್ನೇಹದ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್].

 ಆಶ್ವಿನಿ ಕುಮಾರ್ ರಸ್ ( ಮಾತ್ರೆಗಳು) – ಜ್ವರ ಮತ್ತು ಉದರ ಸಂಬಂಧದ ತೊಂದರೆಗಳಿಗೆ

 ಆಶೋಕಾರಿಷ್ಟ – ಶ್ವೇತ ಪ್ರದರ, ರಕ್ತಮೂತ್ರ, ಮುಟ್ಟಿನ ತೊಂದರೆ, ಜ್ವರ ಮತ್ತು ಹಸಿವಿಲ್ಲದಿರುವಿಕೆಗೆ ಉಪಯುಕ್ತ ಬೈದ್ಯನಾಥ್, ದಿ ಆರ್ಯ ವೈದ್ಯಶಾಲ, ಕೊಟ್ರಕ್ಕಲ್, ಕೇರಳ. ೫ ಶ್ರೀ ದೂತಪಾಪೇಶ್ವ‌ರ್, ಮಹಾರಾಷ್ಟ್ರ),

 ಆದಿತ್ಯ ಪಾಕ ತೈಲಂ – ಕಜ್ಜಿ, ಇಸಬು ಮತ್ತು ಇತರ ಚರ್ಮದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].

 ಆಮ್ಲಪಿತ್ತ ಮಿಶ್ರಣ – ಆಮ್ಲಪಿತ್ತ, ವಾಕರಿಕೆ, ಶಿರಶೂಲ ಮತ್ತು ಉದರ ಶೂಲ ಚಿಕಿತ್ಸೆಗೆ ಉಪಯುಕ್ತ |ಶ್ರೀ ದೂತ ಪಾಪೇಶ್ವರ್, ಮಹಾರಾಷ್ಟ್ರ),

 ಆರೋಗ್ಯವರ್ಧಿನಿ ವಟಿ – ಜೀರ್ಣಕಾರಕ , ಹೊಟ್ಟೆನೋವು, ರಕ್ತಹೀನತೆ, ಕಾಮಾಲೆ,, ಪಿತ್ತಜನಕಾಂಗದ ತೊಂದರೆ, ದೊಡ್ಡದಾದ ಸ್ವೀಹ, ಜಲೋದರ ಮುಂತಾದ ತೊಂದರೆಗಳಿಗೆ ಉಪಯುಕ್ತ [ಬೈದ್ಯನಾಥ್, ಝಂಡು].

 ಆಸನ ಮಂಜಿಷ್ಟಾದಿ ತೈಲಂ – ಕಣ್ಣಿನ ಪೊರೆ ಬೆಳೆಯದಂತೆ ತಡೆಯುತ್ತದೆ. ತಲೆ ಮತ್ತು ಕೊರಳಿನ ಕಾಯಿಲೆಯ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ,

 ಆಸನ ವಿಲ್ವಾದಿ ಕೇರ ತೈಲಂ – ಕಣ್ಣಿನ ಪೊರೆ ಬೆಳೆಯದಂತೆ ತಡೆಯುತ್ತದೆ [ದಿ ಆರ್ಯ ವೈದ್ಯಶಾಲ, ಕೊಟ್ಟಿಕ್ಕಲ್‌, ಕೇರಳ].

 ಇಂಪ್ರೊವಲ್ ಕ್ಯಾಪ್ಯೂಲ್ – ಪಿತ್ತಜನಕಾಂಗದ ಎಲ್ಲಾ ಬಗೆಯ ತೊಂದರೆಗಳಿಗೆ ಹಾಗೂ ರಕ್ತಹೀನತೆ, ಆಯಾಸ ಮತ್ತು ದೈಹಿಕ ದುರ್ಬಲತೆಯ ನಿವಾರಣೆಗೆ ಉಪಯುಕ್ತ [ಸಾಯಿರಾಮ್, ಪೊಲ್ಲಾಚಿ]

 ಇಮಿಪ್ರೋನ್-ಸಿ – ಮಕ್ಕಳ ಬೆಳವಣಿಗೆಗೆ ಉತ್ತಮ ಟಾನಿಕ್. ಮೃದು ಮೂಳೆರೋಗ (Scurvy) ವನ್ನು ಗುಣಪಡಿಸುತ್ತದೆ. ಬ್ಯಾಕ್ಟಿರಿಯ ಮತ್ತು ವೈರಾಣು ನಾಶಕ ಗುಣವಿದೆ. ಹಸಿವನ್ನುಂಟು ಮಾಡುತ್ತದೆ [ಇಂಡಿಯನ್ ಮೆಡಿಸಿನ್ ಇಂಡಸ್ಟ್ರೀಸ್, ವಿಜಯವಾಡ],

 ಈವ್‌ ಕೇರ್ (ಕ್ಯಾಫೂಲ್, ಸಿರಪ್) – ಮುಟ್ಟಿನ ಎಲ್ಲಾ ತೊಂದರೆಗಳಿಗೆ ಉಪಯುಕ್ತ ಔಷಧಿ ಅ [ದಿ ಹಿಮಾಲಯ ಡ್ರಗ್ ಕಂ., ಬೆಂಗಳೂರು].

ಏಕಾಂಗವೀರ್ ರಸ್ (ಮಾತ್ರೆಗಳು) – ಪಾರ್ಶ್ವವಾಯು, ಧನುರ್ವಾಯು, ಬೆನ್ನುನೋವು,ಹೆಪ್ಪು ಗಟ್ಟಿದ ಭುಜ, ಮುಂತಾದ ವಾತಜನ್ಯ ರೋಗಗಳ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್; ಶ್ರೀ ದೂತಪಾಪೇಶ್ವ‌ರ್, ಮಹಾರಾಷ್ಟ್ರ].

ಎಕ್ಸ್‌ಟ್ರಾ ಇಮ್ಯೂನ್ ಮಾತ್ರೆಗಳು – ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮ ಪಡಿಸುತ್ತದೆ.