ಮನೆ ರಾಷ್ಟ್ರೀಯ ಸಿಲಿಂಡರ್ ಮೇಲೆ ಮೋದಿ ಭಾವಚಿತ್ರ, ಬೆಲೆ ನಮೂದಿಸಿದ ಟಿಆರ್‌ಎಸ್ ಕಾರ್ಯಕರ್ತರು

ಸಿಲಿಂಡರ್ ಮೇಲೆ ಮೋದಿ ಭಾವಚಿತ್ರ, ಬೆಲೆ ನಮೂದಿಸಿದ ಟಿಆರ್‌ಎಸ್ ಕಾರ್ಯಕರ್ತರು

0

ಹೈದರಾಬಾದ್(Hyderabad): ತೆಲಂಗಾಣದ ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ಕಾಣದಿರುವುದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತರಾಟೆಗೆ ತೆಗೆದುಕೊಂಡಿರುವವಿಚಾರಕ್ಕೆ ತಿರುಗೇಟು ನೀಡಿರುವ ಟಿಆರ್‌ಎಸ್ ಕಾರ್ಯಕರ್ತರು, ಸಿಲಿಂಡರ್‌ಗಳ ಮೇಲೆ ಮೋದಿ ಚಿತ್ರದ ಜೊತೆಗೆ ಬೆಲೆಯನ್ನು ನಮೂದಿಸಿರುವ ಪೋಸ್ಟರ್ ಅಂಟಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ಬೆಲೆ 1,105ಕ್ಕೆ ತಲುಪಿರುವುದನ್ನು ಉಲ್ಲೇಖಿಸಿರುವ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪ್ರತೀ ಸಿಲಿಂಡರ್ ಬೆಲೆ 410 ರೂ. ಆಗಿತ್ತು. ಈಗ ಸಾವಿರ ದಾಟಿದೆ ಎಂದು ಟಿಆರ್‌ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ನಿಮಗೆ ಮೋದಿಜೀಯವರ ಚಿತ್ರ ಬೇಕಲ್ಲವೇ ನಿರ್ಮಲಾ ಸೀತಾರಾಮನ್‌ ಜೀ?. ಇಲ್ಲಿದೆ ನೋಡಿ ಎಂದು ಟಿಆರ್‌ಎಸ್ ನಾಯಕ ಕ್ರಿಷಾಂಕ್ ಮನ್ನೆ ಸಿಲಿಂಡರ್ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಪಡಿತರ ಕೇಂದ್ರಗಳಲ್ಲಿ ಮೋದಿಯವರ ಚಿತ್ರ ಹಾಕದಿದ್ದಕ್ಕೆ ಶುಕ್ರವಾರ ನಿರ್ಮಲಾ ಸೀತಾರಾಮನ್ ಅವರು, ಕಾಮರೆಡ್ಡಿ ಜಿಲ್ಲೆಯ ಡಿಸಿ ಜಿತೇಶ್ ವಿ ಪಾಟೀಲ್ ಅವರನ್ನು ಪ್ರಶ್ನಿಸಿದ್ದರು.