ಮನೆ ಅಪರಾಧ ಗ್ಯಾಸ್ ಟ್ಯಾಂಕರ್’ಗೆ ಟ್ರಕ್ ಡಿಕ್ಕಿಯಾಗಿ ಬೆಂಕಿ: ಹಲವು ವಾಹನ ಬೆಂಕಿಗಾಹುತಿ, ಓರ್ವ ಸಾವು

ಗ್ಯಾಸ್ ಟ್ಯಾಂಕರ್’ಗೆ ಟ್ರಕ್ ಡಿಕ್ಕಿಯಾಗಿ ಬೆಂಕಿ: ಹಲವು ವಾಹನ ಬೆಂಕಿಗಾಹುತಿ, ಓರ್ವ ಸಾವು

0

ಜೈಪುರ: ಟ್ರಕ್ ಒಂದು ಗ್ಯಾಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳು ಬೆಂಕಿಗಾಹುತಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಶುಕ್ರವಾರ (ಡಿ.20) ಮುಂಜಾನೆ ಜೈಪುರದಲ್ಲಿ ಸಂಭವಿಸಿದೆ.

Join Our Whatsapp Group

ಶುಕ್ರವಾರ ಮುಂಜಾನೆ 5:30 ರ ಸುಮಾರಿಗೆ ಅಜ್ಮೀರ್ ರಸ್ತೆಯಲ್ಲಿವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಎನ್‌ಜಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಪರಿಣಾಮ ಪೆಟ್ರೋಲ್ ಬಳಿ ನಿಲ್ಲಿಸಿದ್ದ ಇತರ ವಾಹನಗಳಿಗೂ ಬೆಂಕಿ ಹೊತ್ತಿಕೊಂಡು ಆಹುತಿಯಾಗಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬಂದಿ ಹರಸಾಹಸ ಪಡುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಲಾರಿ, ಕಾರು ಸೇರಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳುಗಳನ್ನು ಭೇಟಿ ಮಾಡಲು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಆಸ್ಪತ್ರೆಗೆ ಧಾವಿಸಿ ವೈದ್ಯರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.