ಮನೆ ರಾಷ್ಟ್ರೀಯ ಟ್ರಕ್‌ – ಎಸ್‌ ಯುವಿ ಅಪಘಾತ: 18 ತಿಂಗಳ ಮಗು ಸೇರಿದಂತೆ ನಾಲ್ವರು ಸಾವು

ಟ್ರಕ್‌ – ಎಸ್‌ ಯುವಿ ಅಪಘಾತ: 18 ತಿಂಗಳ ಮಗು ಸೇರಿದಂತೆ ನಾಲ್ವರು ಸಾವು

0

ಜೈಪುರ:  ಟ್ರಕ್‌ ಹಾಗೂ ಎಸ್‌ಯುವಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 18 ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಿಕಾನೇರ್‌ನಲ್ಲಿ ಶುಕ್ರವಾರ(ಫೆ.16 ರಂದು) ನಡೆದಿದೆ.

ಭಾರತ್ಮಾಲಾ ಎಕ್ಸ್‌ ಪ್ರೆಸ್‌ ವೇಯಲ್ಲಿ ನೌರಂಗದೇಸರ್-ರಾಸಿಸ್ಸಾರ್ ಬಳಿ ಅಪಘಾತ ಸಂಭವಿಸಿದ್ದು, ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಐದು ಜನರಲ್ಲಿ ನಾಲ್ವರು ವೈದ್ಯರಾಗಿದ್ದು, ಅವರನ್ನು ಡಾ. ಪ್ರತೀಕ್, ಅವರ ಪತ್ನಿ ಡಾ. ಹೇತಲ್, ಡಾ. ಪೂಜಾ ಮತ್ತು ಅವರ ಪತಿ ಡಾ. ಕರಣ್ ಎಂದು ಗುರುತಿಸಲಾಗಿದೆ. ಕರಣ್‌ ದಂಪತಿಯ ಮಗು ಪೂಜಾ(18 ತಿಂಗಳು) ಮೃತಪಟ್ಟಿದೆ. ಐವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಮೃತರು ಗುಜರಾತ್‌ ನ ಕಚ್ ನಿವಾಸಿಗಳಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಜಮ್ಮು-ಕಾಶ್ಮೀರದಿಂದ ಪ್ರವಾಸಕ್ಕೆಂದು ತೆರಳಿದ್ದ ಅವರು ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಘಟನೆಯ ಕುರಿತಯ ಕುಟುಂಬಸ್ಥರೊಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಶಿವಮೊಗ್ಗ: ರಾಹುಲ್ ಹುಂಡೈ ಕಾರು ಶೋರೂಂನಲ್ಲಿ ಅಗ್ನಿ ಅವಘಡ- 3 ಕಾರು ಸಂಪೂರ್ಣ ಭಸ್ಮ
ಮುಂದಿನ ಲೇಖನಚಿಕ್ಕಮಗಳೂರು: ಯುವಕನ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ