ಮನೆ ಅಂತಾರಾಷ್ಟ್ರೀಯ ಇಸ್ರೇಲ್‌ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಮಾಸ್‌ ಬಂಡುಕೋರರಿಗೆ ಟ್ರಂಪ್ ಕೊನೆಯ ಎಚ್ಚರಿಕೆ

ಇಸ್ರೇಲ್‌ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಮಾಸ್‌ ಬಂಡುಕೋರರಿಗೆ ಟ್ರಂಪ್ ಕೊನೆಯ ಎಚ್ಚರಿಕೆ

0

ವಾಷಿಂಗ್ಟನ್‌: ಇಸ್ರೇಲ್‌ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಮಾಸ್‌ ಬಂಡುಕೋರರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಎಚ್ಚರಿಕೆ ನೀಡಿದ್ದಾರೆ.

Join Our Whatsapp Group

ಈ ಕೂಡಲೇ ಗಾಜಾ ತೊರೆಯುವಂತೆಯೂ ಹಮಾಸ್ ನಾಯಕರಿಗೆ ಹೇಳಿದ್ದಾರೆ.

ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಿ. ನಿಮ್ಮಿಂದ ಹತ್ಯೆಯಾಗಿರುವ ಒತ್ತೆಯಾಳುಗಳ ಮೃತದೇಹಗಳನ್ನೂ ಹಿಂತಿರುಗಿಸಿ. ನಿಮ್ಮ ಕಾಲ ಮುಗಿದಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.

ಅನಾಗರಿಕರಷ್ಟೇ ಮೃತದೇಹಗಳನ್ನು ಇಟ್ಟುಕೊಳ್ಳಲು ಸಾಧ್ಯ. ನೀವು ಅಂತಹದ್ದೇ ಜನ. ನಾನು ಹೇಳಿದ ಹಾಗೆ ಮಾಡದಿದ್ದರೆ ಒಬ್ಬನೇ ಒಬ್ಬ ಹಮಾಸ್ ಸದಸ್ಯ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಬಿಡುಗಡೆಯಾದ ಒತ್ತೆಯಾಳುಗಳನ್ನು ನಾನು ಭೇಟಿ ಮಾಡಿದ್ದೇನೆ. ನೀವು ಅವರ ಜೀವನವನ್ನು ನಾಶ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.

ಇದು ನಿಮಗೆ ಕೊನೆಯ ಎಚ್ಚರಿಕೆಯಾಗಿದೆ. ಗಾಜಾ ತೊರೆಯಲು ನಿಮಗೆ ಇದು ಸೂಕ್ತ ಸಮಯ. ಗಾಜಾ ಜನರಿಗಾಗಿ ಸುಂದರ ಭವಿಷ್ಯ ಕಾಯುತ್ತಿದೆ. ಆದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೇ ಅದು ಸಾಧ್ಯವಿಲ್ಲ. ಒತ್ತೆಯಾಳುಗಳ್ನು ಬಿಡುಗಡೆ ಮಾಡದಿದ್ದರೆ ನೀವು ಸಾಯುತ್ತೀರಿ. ಒಳ್ಳೆಯ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದ್ದಾರೆ.