ಮನೆ ಆರೋಗ್ಯ ಬಿಪಿ ಲೋ ಆದಾಗ ಈ ಮನೆ ಮದ್ದು ಟ್ರೈ ಮಾಡಿ

ಬಿಪಿ ಲೋ ಆದಾಗ ಈ ಮನೆ ಮದ್ದು ಟ್ರೈ ಮಾಡಿ

0

ರಕ್ತದ ಒತ್ತಡ ಯಾರಿಗೆ ಯಾವಾಗ ಬೇಕಾದರೂ ಏರುಪೇರು ಆಗಬಹುದು. ಅಧಿಕ ರಕ್ತದ ಒತ್ತಡ ಒಂದು ಕಡೆಯಾದರೆ ಕಡಿಮೆ ರಕ್ತದ ಒತ್ತಡ ಇನ್ನೊಂದು ಕಡೆ. ಆದರೆ ಎರಡು ಕೂಡ ತುಂಬಾ ಡೇಂಜರ್. ನಾವೆಲ್ಲ ಇದುವರೆಗೂ ಅಂದುಕೊಂಡಿರುವುದು ಏನೆಂದರೆ ಅಧಿಕ ರಕ್ತದ ಒತ್ತಡ ಮಾತ್ರ ಮನುಷ್ಯನಿಗೆ ಒಳ್ಳೆಯದಲ್ಲ.

ಆದರೆ ರಕ್ತದ ಒತ್ತಡ ಕಡಿಮೆಯಾಗಿ ಲೋ ಬಿಪಿ ಆದರೂ ಕೂಡ ಅದರಿಂದ ಹೃದಯಘಾತ, ಪಾರ್ಶ್ವವಾಯು ಮತ್ತು ಕಿಡ್ನಿ ತೊಂದರೆಗಳು ಕಂಡುಬರುವ ಸಾಧ್ಯತೆ ಇರುತ್ತದೆ.

ಲೋ ಬಿಪಿ ಆದಾಗ ಏನು ಮಾಡಬೇಕು?

• ಯಾರು ಲೋ ಬಿಪಿ ಸಮಸ್ಯೆಗೆ ಒಳಗಾಗಿರುತ್ತಾರೆ ಅವರನ್ನು ಆದಷ್ಟು ಬೇಗನೆ ಸಹಜ ಸ್ಥಿತಿಗೆ ತರಲು ಪ್ರಯತ್ನಿಸಬೇಕು. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ರಕ್ತದ ಒತ್ತಡವನ್ನು ಸಮತೋಲನ ಮಾಡಿಕೊಳ್ಳಲು ಉಪ್ಪಿನ ನೀರು, ಸಕ್ಕರೆ ಮಿಶ್ರಿತ ನೀರು ಅಥವಾ ಎಲೆಕ್ಟ್ರೋಲೈಟ್ ಕೊಡಲಾಗುತ್ತದೆ.

• ಮುಂಬೈನ ಒಂದು ಪ್ರತಿಷ್ಠಿತ ಆಸ್ಪತ್ರೆಯ ಫಿಜಿಷಿಯನ್ ಆದಂತಹ ಡಾ. ಸಂದೀಪ್ ರಕ್ತದ ಒತ್ತಡ ಕಡಿಮೆಯಾದಾಗ ಏನು ಮಾಡಬೇಕೆಂದು ಇಲ್ಲಿ ಹೇಳಿದ್ದಾರೆ.

ಉಪ್ಪಿನ ನೀರು

• ಯಾರಿಗೆ ರಕ್ತದ ಒತ್ತಡ ಕಡಿಮೆ ಇರುತ್ತದೆ ಅವರಿಗೆ ಮೇಲೆ ಹೇಳಿದಂತೆ ಉಪ್ಪಿನ ನೀರು ಅಥವಾ ಉಪ್ಪು ತಿನ್ನಲು ಹೇಳಬೇಕು.

• ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇಲ್ಲವಾಗಿ ದೇಹದಲ್ಲಿ ಎಲೆ ಕ್ಟ್ರೋಲೈಟ್ ಸಮತೋಲನ ಉಂಟಾಗಿ ಕಡಿಮೆ ಆದ ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳುತ್ತದೆ. ಉಪ್ಪಿನ ನೀರು ರಕ್ತದಲ್ಲಿ ನೀರಿನ ಅಂಶ ಇರುವಂತೆ ನೋಡಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸಕ್ಕರೆ ತಿನ್ನಬೇಕು

ಕೇವಲ ರಕ್ತದ ಒತ್ತಡ ಏರುಪೇರಾಗಿದ್ದರೆ ನೀವು ಸಕ್ಕರೆ ತಿನ್ನಬಹುದು ಅಥವಾ ನೀರಿಗೆ ಸಕ್ಕರೆ ಹಾಕಿ ಮಿಶ್ರಣ ಮಾಡಿ ಕುಡಿಯಬಹುದು. ಆದರೆ ಒಂದು ವೇಳೆ ನೀವು ಮಧುಮೇಹಿ ಸಹ ಆಗಿದ್ದರೆ, ಅಂತಹ ಸಂದರ್ಭ ದಲ್ಲಿ ಸಕ್ಕರೆ ಮಿಶ್ರಿತ ನೀರು, ಸಿಹಿ ಪದಾರ್ಥ ಸೇವನೆ ಮಾಡುವುದು ಅಷ್ಟು ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ.

ಎಲೆಕ್ಟ್ರೋಲೈಟ್ ಸಲ್ಯೂಷನ್ ಕುಡಿಯುವುದು

• ಇದು ಬೆಸ್ಟ್. ಲೋ ಬಿಪಿ ಆಗಿರುವ ಯಾವುದೇ ವ್ಯಕ್ತಿಗಳಿಗೆ ಇದನ್ನು ಕುಡಿಯಲು ಕೊಡಬಹುದು. ಮೆಡಿಕಲ್ ಶಾಪ್ ಗಳಲ್ಲಿ ಎಲೆಕ್ಟ್ರೋಲೈಟ್ ಸಲ್ಯೂಷನ್ ಪಾಕೆಟ್ ಸಿಗುತ್ತವೆ.

• ನೀವು ಮನೆಯಲ್ಲಿ ಕೂಡ ಸಕ್ಕರೆ ಮತ್ತು ಉಪ್ಪಿನ ಮಿಶ್ರಣದ ಸೊಲ್ಯೂಷನ್ ತಯಾರಿಸಿಕೊಳ್ಳ ಬಹುದು. ಆದರೆ ಮಧುಮೇಹಿಗಳು ಏನಾದರೂ ಇದ್ದರೆ ಸಕ್ಕರೆ ಹಾಕಬೇಡಿ ಎಂಬುದು ವೈದ್ಯರ ಸಲಹೆ.