ಮನೆ ಯೋಗಾಸನ ತ್ರ್ಯಂಗ ಮುಖೈಕಪಾದ ಪಶ್ಚಿಮೋತ್ತಾನಾಸನ

ತ್ರ್ಯಂಗ ಮುಖೈಕಪಾದ ಪಶ್ಚಿಮೋತ್ತಾನಾಸನ

0

 ತ್ರ್ಯಂಗವೆಂದರೆ ಮೂರಂಗಗಳು, ಇಲ್ಲವೇ ಅದರ ಭಾಗಗಳು ಈ ಆಸನದಲ್ಲಿಯ ಮೂರು ಅಂಗಗಳೆಂದರೆ,ಪಾದಗಳು, ಮಂಡಿಗಳು ಮತ್ತು ಪೃಷ್ಠಗಳು ‘ಮುಖೈಕಪಾದ’ವೆಂದರೆ (ಮುಖ + ಏಕಪಾದ ) ಮುಖ ಮತ್ತು ಒಂದು ಕಾಲು.ಇವು ಒಂದನ್ನೊಂದು ಮುಟ್ಟುವುದೆಂದರ್ಥ. ‘ಪಶ್ಚಿ ಮೋತ್ತಾನಾಸನ’ದಲ್ಲಿ ಶರೀರದ ಹಿಂಬದಿ, ಅಂದರೆ ಬೆನ್ನಿನಭಾಗ ಪೂರಾ ಸೆಳೆತಕ್ಕೆ ಒಳಗಾಗುತ್ತದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಕುಳಿತು,ಮುಂಗಡೆಗೆ ಕಾಲುಗಳನ್ನು ನೀಳವಾಗಿ ಚಾಚಿಡ ಬೇಕು

2. ಬಳಿಕ,ಬಲಗಾಲನ್ನು ಮಂಡಿಯಲ್ಲಿ ಬಾಗಿಸಿ, ಬಲಪಾದವನ್ನು ಹಿಂದಕ್ಕೆ ಸರಿಸಿ ಆಮೇಲೆ ಬಲಟೊಂಕದ ಕೀಲಿನ ಪಕ್ಕದಲ್ಲಿ ಅದನ್ನಿಟ್ಟು ಕಾಲ್ಬೇ ರಳುಗಳನ್ನು ಹಿಮ್ಮೊಗಮಾಡಿ,ಅವನ್ನು ನೆಲದ ಮೇಲೆ ಊರಿಡಬೇಕು.ಆಗ ಬಲ ಮೀನಖಂಡದ ಒಳಬದಿ ಬಲತೊಡೆಯ ಹೊರ ಬದಿಯನ್ನು ಮುಟ್ಟಿಕೊಂಡಿರುತ್ತದೆ.

3. ಆಮೇಲೆ ದೇಹದ ಹೊರ ಯೆಲ್ಲವನ್ನೂ ಬಲಮಂಡಿಗೆ ಹೊರಿಸಿ ಮೇಲೆ ವಿವರಿಸಿದ ಭಂಗಿಯಲ್ಲಿಯೇ ಸಮತೋಲನ ಮಾಡಬೇಕು.ಮೊದಮೊದಲು ದೇಹವು ಚಾಚಿಟ್ಟಿ ಕಾಲಿನ ದಿಕ್ಕಿಗೆ ವಾಲುತ್ತದೆ. ಆದುದರಿಂದ ಕಾಲುಗಳು ಮತ್ತು ಅವುಗಳ ಬೆರಳುಗಳನ್ನು ಚಾಚಿ ಮುಂತುದಿ ಮಾಡಿರಿಸಿ,ದೇಹವನ್ನು ಈ ಭಂಗಿಯಲ್ಲಿ ಸಮತೋಲನವಾಗಿಡುವುದನ್ನು ಕಲಿಯಬೇಕು.

4. ಆ ಬಳಿಕ ಎಡಪಾದವನ್ನು ಎರಡೂ ಅಂಗೈಗಳಿಂದಲೂ, ಅಂಗಾಲಿನ ಎರಡು ಬದಿಗಳಲ್ಲಿ ಬಿಗಿದು ಹಿಡಿಯಬೇಕು. ಸಾಧ್ಯವಾದರೆ ಮುಂಡವನ್ನು ಮುಂಬಾಗಿಸಿ,ಚಾಚಿದ ಎಡಗಾಲ ಪಾದದ ಸುತ್ತ ಕೈಗಳನ್ನು ತಂದು, ಒಂದು ಹಸ್ತದಿಂದ ಮತ್ತೊಂದರ ಮಣಿಕಟ್ಟನ್ನು ಬಿಗಿಯಾಗಿ ಹಿಡಿದುಕೊಂಡು ಆಮೇಲೆ ಎರಡು ಸಲ ಉಸಿರಾಟ ನಡೆಸಬೇಕು.ಹೀಗೆ ಮಣಿಕಟ್ಟನ್ನು ನೋವು ಕೈಯಿಂದ ಹಿಡಿಯುವುದನ್ನು ಸಾಧಿಸಲು ತಿಂಗಳುಗಟ್ಟಲೆ ಅಭ್ಯಾಸ ನಡೆಸಬೇಕು. ಅಲ್ಪ ಸ್ವಲ್ಪ ಪ್ರಯತ್ನದಿಂದ ಇದನ್ನು   ಸಾಧಿಸಲಾಗದಿದ್ದರೆ ಎಂದಿಗೂ ಎದೆಗೆಡದೆ ಇದನ್ನು ಸಾಧಿಸಲು  ಮತ್ತೆ ಮತ್ತೆ ಯತ್ನಿಸಬೇಕು.

5. ಅನಂತರ ಮಂಡಿಗಳನ್ನು ಸೇರಿಸಿ ಉಸಿರನ್ನು ಹೊರಕ್ಕೆ ಬಿಟ್ಟು, ಮುಂದಕ್ಕೆ ಬಾಗಿ ಮೊದಲು ಹಣೆ, ಆಮೇಲೆ ಮೂಗು,ಬಳಿಕ ತುಟಿಗಳು ಕಡೆಗೆ ಗದ್ದ ಇವನ್ನು ಕ್ರಮವಾಗಿ ಎಡಮಂಡಿಯ ಮೇಲೆ ಊರಿಡಬೇಕು. ಇದನ್ನು ಸಾಧಿಸಲು ಮೊಣಕೈಗಳನ್ನಗಲಿಸಿ,  ಉಸಿರನ್ನು ಹೊರಬಿಡುತ್ತ, ಮುಂಡವನ್ನು ಮುಂಗಡೆಗೆ ದೂಡಬೇಕು.

6. ಎಡಮೊಣಕೈಯನ್ನು ನೆಲದ ಮೇಲೆ ಊರಬಾರದು. ಮೊದಮೊದಲು ಅಭ್ಯಾಸಿಯು ಸಮತೋಲನಸ್ಥಿತಿಯನ್ನು ಸಾಧಿಸಲಾಗದೆ,ಚಾಚಿದ ಕಾಲ ಪಕ್ಕದಲ್ಲಿಯೇ ಹೊರಳಿ ಬೀಳುತ್ತಾನೆ.ಆದುದರಿಂದ ಮಡಿಸಿಟ್ಟ .ಕಾಲಿನ ಪಕ್ಕಕ್ಕೆ ಸ್ವಲ್ಪ ವಾಲಿಸಿಟ್ಟು ದೇಹದ ಭಾರವನ್ನೆಲ್ಲ ಮಡಿಸಿಟ್ಟ ಮಂಡಿಗೇ ಹೊರೆಸಬೇಕು.

7. ಈ ಭಂಗಿಯಲ್ಲಿ ಸಮವಾಗಿ ಉಸಿರಾಡುತ್ತ ಅರ್ಧ ನಿಮಿಷದಿಂದ ಒಂದು ನಿಮಿಷದವರೆಗೂ ನೆಲೆಸಬೇಕು.

8. ಉಸಿರನ್ನು ಒಳಕ್ಕೆಳೆದು, ತಲೆ ಮುಂಡವನ್ನು ಮೇಲೆತ್ತಿ,ಕೈಗಳನ್ನು ಸಡಿಲಿಸಿ, ಮಡಿಸಿಟ್ಟ ಕಾಲನ್ನು ನೇರ ಮಾಡಿ ಒಂದನೇ ಸ್ಥಿತಿಗೆ ಬರಬೇಕು.

9. ಈ ಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಅಭ್ಯಸಿಸಬೇಕು. ಇಲ್ಲಿ ಬಲಗಾಲನ್ನು ನೆಲದಮೇಲೆ ಚಾಚಿಟ್ಟು ಎಡಮಂಡಿಯನ್ನು ಭಾಗಿಸಿ, ಎಡಟೊಂಕದ ಕೀಲಿನ ಪಕ್ಕದಲ್ಲಿಡಬೇಕು. ಎರಡೂ ಕಡೆಯ ಬಂಗಿಗಳಲ್ಲಿ ಸಮಕಾಲ ನೆಲೆಸಬೇಕು.

ಪರಿಣಾಮಗಳು

 ಪಾದದಲ್ಲಿಯ ಕಮಾನುಗಳು ಇಳಿ ಬಿದ್ದು ಚಪ್ಪಟೆಯಾದ ಪದಗಳುಳ್ಳ ವರಿಗೆ ಈ ಆಸನವು ಬಹಳ ಪ್ರಯೋಜನಕಾರಿಯಾಗಿದೆ. ಅಲ್ಲದೆ ಮಂಡಿಯಲ್ಲಿ ಮತ್ತು ಹರಡುಗಳೀ ರುವ ಕಾಲಿನಗಿಣ್ಣು ಪ್ರದೇಶಗಳಲ್ಲಿ ನರ ಹೊರಳಿದ್ದರೆ ಈ ಆಸನದಿಂದ ಅದು ಸರಿ ಹೋಗುತ್ತದೆ. ಮತ್ತು ಈ ಭಾಗಗಳಲ್ಲಿ ಊತವಿದ್ದರೆ ಅದು ತಗ್ಗಿ ಹೋಗುವುದು.

    ‘ಜಾನು ಶ್ರೀರ್ಷಾಸನ’ ಮತ್ತು   ಅರ್ಧಬಬ್ಧಪದ್ಮಪಶ್ಚಿಮೋತ್ತಾನಾಸನ’ಗಳ ಜೊತೆಗೆ ಈ ಆಸನವೂ ಕೂಡ ಕಿಬ್ಬೊಟ್ಟೆಯಲ್ಲಿಯ ಅಂಗಗಳಿಗೆ ಹುರುಪುಕೊಟ್ಟು ಅವುಗಳಲ್ಲಿಯ ತಾಮಸತನವನ್ನು ದೂಡಿಬಿಡುತ್ತದೆ.ನಾವು ಅನೇಕ ವೇಳೆ ಅತಿಲೋಲುಪತೆಯಿಂದಲೋ, ಇಲ್ಲವೆ ಸಮಾಜಮರ್ಯಾದೆಯನ್ನು ಪಾಲಿಸಲೆಂದೋ, ನಮ್ಮ ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ ಮಿತಿಮೀರಿದ ಆಹಾರವನ್ನೊದ ಗಿಸುವುದರ ಮೂಲಕ ಒಂದು ಅಪಚಾರವನ್ನೇ ಮಾಡುತ್ತಿರುತ್ತೇವೆ. ನಮಗೆ ಸಂಭವಿಸುವ ಅನೇಕ ರೋಗಗಳು ಅಂದರೆ ಅಜೀರ್ಣಾದಿಗಳು, ಕಿಬ್ಬೊಟ್ಟೆಯ ಅಂಗಗಳಲ್ಲಿಯೇ ಹುಟ್ಟುತ್ತವೆ. ಆದುದರಿಂದಲೇ ನಮ್ಮ ಪೂರ್ವಿಕರಾದ ಋಷಿಗಳು ಯೋಗಸನಾಭ್ಯಾಸದಿಂದ ದೀರ್ಘಾಯಸ್ಸನ್ನೂ ಸುಖ ಸಂತೋಷಗಳನ್ನೂ ಮನಶಾಂತಿಯನ್ನು ಪಡೆಯ ಬಯಸುವವರಿಗೆ ಆಹಾರ ನಿಯಮಾಚರಣೆಯು ಅತಿ ಮುಖ್ಯವೆಂದು ಒತ್ತಿ ಹೇಳಿದ್ದಾರೆ. ಈ ಮುಂಬಾಗುವ ಆಸನಗಳು  ಕಿಬ್ಬೊಟ್ಟೆಯೊಳಗಿನ ಅಂಗಗಳನ್ನು ಆರೋಗ್ಯದಿಂದವಡುವುದಲ್ಲದೆ, ಅವನ್ನು ಉತ್ತಮಸ್ಥಿತಿಯಲ್ಲಿ ನಿಲ್ಲಿಸುವುದು.ಅಲ್ಲದೆ ಈ ಆಸನಗಳು ದೇಹದೊಳಗಿನ ಮಾಂಸ ಖಂಡಗಳನ್ನು ಸ್ವಾಭಾವಿಕವಾದ ಆಕಾರಗಳಲ್ಲಿಟ್ಟು ಅಂಗಗಳ ಮೇಲೆ ಪರಿಣಾಮಕಾರಿ ಯಾಗುವಂತೆ ಮಾಡುತ್ತವೆ.

ಹಿಂದಿನ ಲೇಖನಒಡೆದಿರುವುದು ಗಂಟಲು ಬಾವು
ಮುಂದಿನ ಲೇಖನಹಾಸ್ಯ