ತ್ರ್ಯಂಗ (ತ್ರಿ+ ಅಂಗ) = ಮೂರು ಅಂಗಗಳು, ಮುಖ = ಮೊಗ, ಮುಂದಾಳು, = ಅತಿಯಾಗಿ ಹಿಗ್ಗುವುದು. ಬೆನ್ನನ್ನು ಬಾಗಿಸುವ ಈ ಭಂಗಿಯಲ್ಲಿ ತೋಳುಗಳು, ಕಾಲುಗಳು ಮತ್ತು ಇಡೀ ಮುಂಡಭಾಗಗಳು ಒತ್ತಾಯವಾದ ಹಿಗ್ಗುವಿಕೆಗೆ ಒಳಗಾಗುವುದರಿಂದ ಆಸನಕ್ಕೆ ಈ ಹೆಸರು,
ಅಭ್ಯಾಸ ಕ್ರಮ
೧. ಮೊದಲು, ‘ತಾಡಾನಸ’ದ ಭಂಗಿಯಲ್ಲಿ ನಿಂತು, ಕಾಲುಗಳನ್ನು ಒಂದಡಿಯಷ್ಟು ಆಗಲಿಸಿ, ಅಂಗೈಗಳನ್ನು ಟೊಂಕಗಳ ಮೇಲಿರಿಸಬೇಕು.
೨. ಬಳಿಕ, ವಸ್ತಿಕುಹರದ ಪ್ರದೇಶವನ್ನು ಮುಂದೂಡಿ (ಚಿತ್ರ 483), ಉಸಿರನ್ನು ಹೊರಬಿಟ್ಟು ಮುಂಡವನ್ನು ಹಿಂದಕ್ಕೆ ಬಿಲ್ಲಿನಂತೆ ಬಗ್ಗಿಸಿ, ದೇಹದ ಭಾರವನ್ನು ತೊಡೆ ಮತ್ತು ಪಾದಗಳಗೇ ವಹಿಸಬೇಕು (ಚಿತ್ರ 484).
೩. ಆಮೇಲೆ, ತೋಳುಗಳನ್ನು ತಲೆಯ ಮೇಲ್ಬಾಗಕ್ಕೆ ತಂದು ಕೈಗಳನ್ನು ನೆಲದಮೇಲೆ ಜಾರಿಬಿಡಬೇಕು . ಒಡನೆಯೇ ಮೊಣಕೈಗಳಲ್ಲಿ ಕೈಗಳನ್ನು ನೇರಮಾಡಿ, ಅಂಗೈಗಳನ್ನು ನೆಲದಮೇಲೆ ಒರಗಿಸಬೇಕು. ಈಗ ಇದು ‘ಊರ್ಧ್ವ ಧನುರಾಸನ’ದ ಭಂಗಿಯಲ್ಲಿರುತ್ತದೆ
೪. ಆಮೇಲೆ, ಹಿಮ್ಮಡಿಗಳ ಸ್ಥಾನವನ್ನು ಕದಲಿಸದೆ ಕಾಲೆರಳುಗಳ ನಡುವಣಂತರವನ್ನು ಹೆಚ್ಚಿಸಿ, ಪಾದಗಳನ್ನು ಸಮಾಂತರವಾಗಿಸದೆ, ಅವುಗಳ ಮಧ್ಯೆ ಒಂದು ಕೋನವಾಗುವಂತಿಡ ಬೇಕು.
೫. ಆ ಬಳಿಕ, ಉಸಿರನ್ನು ಹೊರಬಿಟ್ಟು ಮುಂಡವನ್ನು ನೆಲದಮೇಲೆ ಆದಷ್ಟು ಎತ್ತರವಾಗಿ ಹಿಗ್ಗಿಸಿ, ಕೈಗಳಿಂದ ಪಾದಗಳನ್ನು ಮುಟ್ಟಿಸಬೇಕು . ಅನಂತರ ಕೆಲವು ಸಲ ಉಸಿರಾಟ ನಡೆಸಬೇಕು. ಕಿಬ್ಬೊಟ್ಟೆ ಎದೆ, ಬೆನ್ನುಗಳನ್ನು ಅತಿ ಹೆಚ್ಚಾಗಿ ಈ ಭಂಗಿಯಲ್ಲಿ ಹಿಗ್ಗಿಸಬೇಕಾಗಿರುವುದರಿಂದ ಉಸಿರಾಟವು ಅತಿ ವೇಗ ಮತ್ತು ಶ್ರಮಗಳಿಂದ ಕೂಡಿರುತ್ತದೆ.
6. ೬. ಈಗ ಆಳವಾಗಿ ಉಸಿರನ್ನು ಹೊರಹೋಗಿಸುತ್ತ ಕೈಗಳನ್ನು ಕ್ರಮವಾಗಿ ನೇದಿನ ಮೇಲಿತ್ರಿ ಅವುಗಳಿಂದ ಕಾಲ್ಗಿಣ್ಣುಗಳ ಮೇಲಿನ ಕಣಕಾಲಿನ ಭಾಗವನ್ನು ಹಿಡಿದುಕೊಳ್ಳಬೇಕೆ ಆಮೇಲೆ, ಕಾಲೆರಳುಗಳನ್ನು ಒಳಭಾಗಕ್ಕೆ ಸರಿಸಿ ಸಮತೋಲಿಸಬೇಕು, ಇದು ಇ ಭಂಗಿಯ ಕಡೆಯ ಹಂತ. ಅಭ್ಯಾಸಿಯು ತನ್ನ ಶಕ್ತಿಗನುಗುಣವಾಗಿ ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತು, ಕೈಗಳನ್ನು ಒಂದೊಂದಾಗಿ ತೆಗೆದು ನೆಲದಮೇಲೂರಿ ‘ಊರ್ಧ್ವ ಧನುರಾಶನ’ ಭಂಗಿಗೆ ಬಂದು, ಬಳಿಕ ‘ತಾಂಡಾಸನದಲ್ಲಿ ನಿಲ್ಲಬೇಕು. ಈ ಅಭ್ಯಾಸಕ್ರಮದಲ್ಲಿ ನೈವುಣ್ಯವನ್ನು ಗಳಿಸಿದ ಮೇಲೆ, ಆಭ್ಯಾಸಿಯು ಕೈಗಳನ್ನು ಸಡಿಲಿಸಿ ‘ಊರ್ಧಧನುರಾಸನ’ಕ್ಕೆ ಹಿಂದಿರುಗದಂತೆಯೇ ‘ತಾಡಾಸನ’ದಲ್ಲಿ ನಿಲ್ಲಬೇಕು.
ಪರಿಣಾಮಗಳು
ಅತಿ ಕ್ಲಿಷ್ಟವಾದ ಈ ಆಸನದ ಭಂಗಿಯು ಕಾಲುಗಳಲ್ಲಿ ಶಕ್ತಿಯನ್ನು ಮೂಡಿಸುವುದಲ್ಲದೆ ಬೆನ್ನುದಂಡಿಗೂ ಮತ್ತು ಕಿಬ್ಬೊಟ್ಟೆಯೊಳಗಿನ ಅಂಗಗಳಿಗೂ ಹುರುಪುಕೊಟ್ಟು ಅವುಗಳು ನವಚೈತನ್ಯವನ್ನು ಮೂಡಿಸುತ್ತದೆ. ಅಲ್ಲದೆ, ಇದರಲ್ಲಿ ಎದೆ ಮತ್ತು ಭುಜದಕೀಲುಗಳು ಪೂರಾ ಹಿಗ್ಗುತ್ತವೆ ಮತ್ತು ವಸ್ತಿಕುಹರದ ಭಾಗವು ಹೆಚ್ಚಿನ ಪ್ರಮಾಣದ ರಕ್ತ ಪರಿಚಲನೆಯನ್ನು ಗಳಿಸಿ, ಮೂಲಕ ಹೆಚ್ಚಿನ ಆರೋಗ್ಯಭಾಗ್ಯವನ್ನು ಪಡೆಯುತ್ತದೆ.