ಮನೆ ಆರೋಗ್ಯ ಕ್ಷಯ ರೋಗ

ಕ್ಷಯ ರೋಗ

0

ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಕ್ಷಯ ಬರುತ್ತದೆ. ಕ್ಷಯರೋಗ ಇರುವವರು ಮಕ್ಕಳ ಮುಖದ ಬಳಿ ಕೆಮ್ಮುವುದು, ಸೀನುವುದು, ಮಾಡುವುದೇ ಈ ಮಕ್ಕಳಿಗೆ ಕ್ಷಯರೋಗ ಬರಲು ಮುಖ್ಯ ಕಾರಣ. ಮಕ್ಕಳಿರುವ ಪರಿಸರದಲ್ಲಿ ಕ್ಷಯರೋಗವಿರುವವರು ಉಗಿಯುವುದು ಕೂಡ ಕಾರಣವಾಗುತ್ತದೆ. ಉಗಿದ ಕಫ ಒಣಗಿ, ಅದರಲ್ಲಿರುವ ರೋಗಾಣುಗಳು ಮಕ್ಕಳ ಶ್ವಾಸಕೋಶ ಸೇರುತ್ತದೆ. ಮಕ್ಕಳಿಗೆ ಕ್ಷಯರೋಗ ಬಾರದಿರಲು ಕ್ಷಯರೋಗಿಗಳನ್ನು ಮಕ್ಕಳಿಂದ ದೂರವಿರಿಸಬೇಕು.

ಕ್ಷಯರೋಗ ಪೀಡಿತ ಮಕ್ಕಳು :-

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 1ಕೋಟಿ 50 ಲಕ್ಷ ಕ್ಷಯರೋಗಿಗಳಿದ್ದಾರೆ. ಇದರಲ್ಲಿ 35 ಲಕ್ಷ ಜನಕ್ಕೆ ಕಫದಲ್ಲಿ ಟಿ.ಬಿ. ರೋಗಾಣುಗಳಿರುತ್ತದೆ. ವರ್ಷಕ್ಕೆ ಒಂದೂವರೆ ಲಕ್ಷ ಜನ ಹೊಸದಾಗಿ ಸೇರ್ಪಡೆಯಾಗುತ್ತಾರೆ. ಕ್ಷಯ ರೋಗದಿಂದ ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ. ಒಟ್ಟು ಕ್ಷಯರೋಗಿಗಳಲ್ಲಿ 5-10% ರಷ್ಟು ಮಕ್ಕಳಿದ್ದಾರೆ.

ಮಕ್ಕಳಿಗೆ ಈ ರೋಗದ ರೋಗಾಣುಗಳು ಮೊದಲು ಶ್ವಾಸಕೋಶದಲ್ಲಿ ಸೇರಿಕೊಳ್ಳುತ್ತದೆ. ಅಲ್ಲಿಂದ ರಕ್ತಕ್ಕೆ, ಲಿಂಫೋಟಿಕ್ ನಾಳಕ್ಕೆ ಸೇರಿ ಶರೀರದ ಇತರ ಭಾಗಗಳಿಗೂ ಹರಡುತ್ತದೆ. ಬಹಳಷ್ಟು ಮಕ್ಕಳಿಗೆ ಈ ರೋಗಾಣುಗಳು ಒಳ ಸೇರಿದ್ದರು ಕಂಡು ಬರುವುದಿಲ್ಲ. ಆರೋಗ್ಯವಾಗಿಯೇ ಇರುತ್ತಾರೆ. ಇಂತಹ ಮಕ್ಕಳಿಗೆ ಮೆಂಟೊಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತದೆ. ಟಿ.ವಿ. ರೋಗಾಣುಗಳು ಪ್ರವೇಶಿಸುವುದರಿಂದ ಆ ಮಕ್ಕಳಿಗೆ 8-10 ದಿನ ಸ್ವಲ್ಪ ಮಟ್ಟಿಗೆ ಅನಾರೋಗ್ಯದ ಲಕ್ಷಣಗಳು ಕಾಣಿಸುತ್ತದೆ. ಆದರೆ ಆ ಅನಾರೋಗ್ಯ ಟಿ.ಬಿ. ರೋಗಾಣುಗಳಿಂದ – ಎಂದು ಗುರುತಿಸಲಾಗುವುದಿಲ್ಲ.

ದೊಡ್ಡವರಲ್ಲಿ ಕ್ಷಯದ ಲಕ್ಷಣಗಳು :-

ದೊಡ್ಡವರಿಗೆ ಕ್ಷಯರೋಗ ಬಂದಾಗ ಸಾಮಾನ್ಯವಾಗಿ ಈ ಕೆಳಗಿನ ಲಕ್ಷಣಗಳಿರುತ್ತದೆ. ಜ್ವರ, ಕೆಮ್ಮು, ಹಸಿವಿಲ್ಲದಿರುವುದು, ಕಫ ಬೀಳುವುದು ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಬೆವರು ಬರುವುದು, ಕತ್ತು ಮತ್ತು ಕಂಕುಳಲ್ಲಿ ಲಿಂಫ್ ಗ್ರಂಥಿಗಳ ಭಾವು ಬರುವುದು ಎದೆಯಲ್ಲಿ ನೋವು, ಕೆಮ್ಮಿನೊಂದಿಗೆ ರಕ್ತ ಬೀಳುವುದು. ವ್ಯಕ್ತಿ ಬಹಳ ಕ್ಷೀಣಿಸುವುದು.

ಮಕ್ಕಳಲ್ಲಿ ಕ್ಷಯದ ಲಕ್ಷಣಗಳು :-

ದೊಡ್ಡವರಲ್ಲಿರುವಂತಹ ಟಿ.ಬಿ. ಲಕ್ಷಣಗಳು ಮಕ್ಕಳಲ್ಲಿರುವುದಿಲ್ಲ. ಟಿ.ಬಿ. ರೋಗಾಣುಗಳ ಶ್ವಾಸಕೋಶಗಳಿಗೆ ಪ್ರವೇಶಿಸಿದ ನಂತರ ಅಲ್ಲಿ ಬಹಳ ಚಿಕ್ಕ ಗಡ್ಡೆಗಳಾಗುತ್ತದೆ. ಇಂತಹ ಗಡ್ಡೆಗಳನ್ನ ಪ್ರೈಮರಿ ಫೋಕಸ್ ಎನ್ನುತ್ತಾರೆ. ಅಲ್ಲಿಂದ ರೋಗಾಣುಗಳು ಲಿಂಫಾಟಿಕ್ ನಾಳಗಳ ಮೂಲಕ ಪ್ರಯಾಣ ಬೆಳೆಸಿ ಎದೆಯ ಮಧ್ಯದಲ್ಲಿರುವ ಲಿಂಫ್ ಗ್ರಂಥಿಗಳನ್ನು ಸೇರುತ್ತದೆ. ಹೀಗಾದಾಗ ತಾತ್ಕಾಲಿಕವಾಗಿ ಜ್ವರ ಬರುತ್ತದೆ. ಕೆಮ್ಮು, ಎದೆಯಲ್ಲಿ ನೋವು ಇರುತ್ತದೆ. ಹಸಿವಿರುವುದಿಲ್ಲ.

ಮಕ್ಕಳಲ್ಲಿ ಟಿ.ವಿ. ಹರಡಿದಾಗ ಶೇಕಡ 90ರಷ್ಟು ಮಕ್ಕಳಲ್ಲಿ ಸ್ಪಷ್ಟವಾದ ರೋಗಲಕ್ಷಣಗಳು ಯಾವುದೂ ಗೋಚರಿಸುವುದಿಲ್ಲ. ಆದರೆ ಈ ರೋಗ ತೀವ್ರವಾದಾಗ ರೋಗಾಣುಗಳು ವರ್ಷಾನುಗಟ್ಟಲೆ ಶರೀರದಲ್ಲಿದ್ದುಬಿಡುತ್ತದೆ. ಆಹಾರದ ಕೊರತೆಯಾದಾಗ ಈ ರೋಗ ಹೊರಬರುತ್ತದೆ. ರ್ಯಾಷ್(rash) ಫೀವ̧ರ್, ಅಮ್ಮ ಇತ್ಯಾದಿಗಳಾದಾಗ ಟಿ.ಬಿ. ಕಾಣಿಸಿಕೊಳ್ಳುತ್ತದೆ. ಪ್ರೈಮರಿ ಕಾಂಪ್ಲೆಕ್ಸ್ ಕ್ಷಯರೋಗವಾಗಿ ಹೊರಬಂದ ಮಕ್ಕಳಿಗೆ ಎಡಬಿಡದೆ ಜ್ವರವಿರುತ್ತದೆ. ಹಸಿವಿರುವುದಿಲ್ಲ. ಕೆಮ್ಮು, ತೂಕ ಕಡಿಮೆಯಾಗುವುದು, ಬೆಳವಣಿಗೆಯಾಗದಿರುವುದು, ಕತ್ತಿನ ಬಳಿ, ಕಂಕುಳಲ್ಲಿ ಗಡ್ಡೆಗಳಾಗುವುದು ಇತ್ಯಾದಿ ಲಕ್ಷಣಗಳಿರುತ್ತದೆ. ಕೆಲವರಿಗೆ ರೋಗದ ತೀವ್ರತೆ ಜಾಸ್ತಿಯಾಗಿ ಶ್ವಾಸಕೋಶದ ಪೊರೆಗಳಿಗೆ ನೀರು ಸೇರುತ್ತದೆ. ಬ್ರೋಖೋ ನ್ಯೂಮೋನಿಯಾ ಲಕ್ಷಣಗಳುಂಟಾಗುತ್ತದೆ. ಟಿಬಿ ರೋಗಾಣುಗಳು ಮೆದುಳಿಗೆ ಪ್ರವೇಶಿಸಿ ಟಿ.ಬಿ. ಮೆನಿoಜೈಟಿಸ್ ಗೆ ಕಾರಣವಾಗುತ್ತದೆ.

  • ಮುಂದುವರೆಯುತ್ತದೆ…