ಮನೆ ಆರೋಗ್ಯ ಕ್ಷಯ

ಕ್ಷಯ

0

1. ರೋಗಮುಕ್ತರಾದ ಕ್ಷಯ ರೋಗಿಗಳು ದಿನವೂ ಬೆಳ್ಳುಳ್ಳಿಯನ್ನು ಸೇವಿಸುತ್ತಿದ್ದರೆ ರೋಗ ಮರಿಕಳಿಸುವುದಿಲ್ಲ.

Join Our Whatsapp Group

2. ಕ್ಷಯರೋಗಗಳಿಗೆ ಬೆಳ್ಳುಳ್ಳಿಯ ಬಳಕೆ ಅನುಕೂಲ.

3. ಮೋಸಂಬಿ ರಸವನ್ನು ಚೆನ್ನಾಗಿ ಸೇವಿಸುವುದರಿಂದ ಕ್ಷಯರೋಗ ಬಾರದು.

 ಸಿಡುಬು :

1. ಬೇವಿನಸೊಪ್ಪನ್ನು ಉಪ್ಪಿನೊಂದಿಗೆ ಅರಿಶಿನ ಮಿಶ್ರಮಾಡಿ, ಚೆನ್ನಾಗಿ ಅರೆದು, ನುಣ್ಣನೆಯ ರಸವನ್ನು ಮೈಗೆ ಹಚ್ಚುವುದರಿಂದ ಸಿಡುಬು.

 ಮೇಲಾಗುವುದು

 ಬಹುಮೂತ್ರ ನಿವಾರಣೆ :

1. ಮಲಗುವ ಮೊದಲು ದಿನವೂ ಒಂದೊಂದು ಚಮಚದಷ್ಟು ಜೇನುತುಪ್ಪ ತಿನ್ನುತ್ತಿದ್ದರೆ ಬಹುಮೂತ್ರ ನಿವಾರಣೆ ಆಗುವುದು.

2. ದಾಲ್ಚಿನ್ನಿ ಪುಡಿಯನ್ನು ಜೇನುತುಪ್ಪದಲ್ಲಿ ಕದಡಿ, ಕೆಲ ದಿನಗಳವರೆಗೆ ತಿನ್ನುತ್ತಿರು ವುದರಿಂದ ಬಹುಮೂತ್ರ ರೋಗ ನಿಲ್ಲುವುದು.

ದೇಹದ ಅತಿಯಾದ ಬೆವರುತ್ತಿದ್ದರೆ :

1. ಅಳಲೆಕಾಯಿಯ ಸಿಪ್ಪೆಯನ್ನು ಬಿಸಿನೀರಿನಲ್ಲಿ ನುಣ್ಣಗೆ ಅರೆದು ಹಚ್ಚಿಕೊಂಡು ಒಂದು ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವ ರೂಢಿಯನ್ನು ಮಾಡುತ್ತಿದ್ದರೆ ದೇಹದಲ್ಲಿ ಅತಿಯಾಗಿ ಬೆವರುವುದು ನಿಲ್ಲುವುದು.

2. ಬದನೆಕಾಯಿ ಹೋಳುಗಳನ್ನು ನೆನೆಸಿದ ನೀರಿನಲ್ಲಿ ಕೈ ತೊಳೆಯುತ್ತಿದ್ದರೆ ಬೆವರುವುದು ಕಡಿಮೆ ಆಗುವುದು.

 ಉಗುರುಸುತ್ತು ಎದ್ದಿದ್ದರೆ :

ನಿಂಬೆಹಣ್ಣಿನ ಸ್ವಲ್ಪ ಭಾಗವನ್ನು ತೂತು ಮಾಡಿ ಉಗುರುಸುತ್ತು ಆಗಿರುವ ಬೆರಳಿಗೆ ಒಂದೆರಡು ದಿನ ಇಡುವುದರಿಂದ ಉಗುರು ಸುತ್ತಿನ ಬಾಧೆ ಕಡಿಮೆಯಾಗುವುದು.