ತುಮಕೂರು: ವ್ಯಕ್ತಿಯೊಬ್ಬರ ಮೇಲೆ ಅಪರಿಚಿತರು ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ.
ಪಾವಗಡ ಪಟ್ಟಣದ ಬಾಬಯ್ಯನ ಬೀದಿಯ ನಿವಾಸಿ ನಾರಾಯಣಿ (35) ಹತ್ಯೆಯಾದ ವ್ಯಕ್ತಿ.
ಜಿಲ್ಲೆಯ ಪಾವಗಡ ಪಟ್ಟಣದ ಮೀನಾ ನರ್ಸಿಂಗ್ ಹೋಮ್ ಹಿಂಭಾಗದಲ್ಲಿ ಮೇ. 21ರ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆಯ ಪಿಎಸ್ಐ ವಿಜಯ್ ಕುಮಾರ್ ಮತ್ತು ಖಾಸಿಂ ಸೇರಿದಂತೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿ ಪತ್ನಿ, ಓರ್ವ ಪುತ್ರಿ, ತಂದೆ ತಾಯಿಯನ್ನು ಅಗಲಿದ್ದಾರೆ.
Saval TV on YouTube