ಮನೆ ಅಪರಾಧ ತುಮಕೂರು: ಲಾರಿ – ಟೆಂಪೋ ನಡುವೆ ಅಪಘಾತ: 9 ಜನರ ಸಾವು

ತುಮಕೂರು: ಲಾರಿ – ಟೆಂಪೋ ನಡುವೆ ಅಪಘಾತ: 9 ಜನರ ಸಾವು

0

ತುಮಕೂರು(Tumkur): ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ಮಧ್ಯೆ ನಡೆದ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದು, 13 ಜನ ಗಾಯಗೊಂಡಿರುವ ಘಟನೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗ್ಗೆ  ನಡೆದಿದೆ.

ರಾಯಚೂರು ಜಿಲ್ಲೆಯ ವಿವಿಧೆಡೆಗಳಿಂದ ಬೆಂಗಳೂರಿಗೆ ಹೋಗುವಾಗ ಅಪಘಾತ ಸಂಭವಿಸಿದ್ದು, ಎಲ್ಲರೂ ಸಿಂಧನೂರು, ಲಿಂಗಸೂರು, ದೇವದುರ್ಗದ ನಿವಾಸಿಗಳು ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ.

ಸಂದೀಪ್, ಬಾಲಾಜಿ, ಅನಿಲ್ ಎಂಬ ಮೂರು ಜನ ಮಕ್ಕಳು ಸೇರಿದಂತೆ ಒಟ್ಟು 12 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವದುರ್ಗ ತಾಲ್ಲೂಕಿನ ನಾಗಮ್ಮ (50) ಮತ್ತು ಉಮೇಶ್ (28) ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರು ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿರವರ ತಾಲ್ಲೂಕಿಗೆ ಸೇರಿದವರು.

ಟೆಂಪೋ ಚಾಲಕ ಕೃಷ್ಣಪ್ಪ, ಸುಜಾತ, ಬಾಲಕ ವಿನೋದ, ಲಕ್ಷ್ಮಿ ಸಹಿತ ಮೃತರ ವಿವರ ಗೊತ್ತಾಗಿದೆ. ಉಳಿದವರ ವಿವರ ಖಚಿತವಾಗಿಲ್ಲ.

ದುರುಗಮ್ಮ, ಬಾಲರಾಜು, ಸಂದೀಪ್, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜು, ಮೌನಿಕ, ನಾಗಪ್ಪ, ನಾಗಮ್ಮ, ವಸಂತ್, ವೈಷ್ಣವಿ, ವೀರಭದ್ರ, ಲತಾ ಅಪಘಾತದಲ್ಲಿ ಗಾಯಗೊಂಡವರು.

ಇಪ್ಪತ್ತು ಜನರು ಟೆಂಪೊದಲ್ಲಿ ಇದ್ದರು. ಭರ್ತಿ ಆಗಿದ್ದರಿಂದ ಮೌಲ ಮತ್ತೆ ಇನ್ನೊಬ್ಬರು ಟೆಂಪೊ ಮೇಲೆ ಮಲಗಿದ್ದರು. ಟೆಂಪೊ ಮೇಲೆ ಮಲಗಿದ್ದವರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಗಾಯಾಳುಗಳನ್ನು ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಮೃತಪಟ್ಟ ಒಂಬತ್ತು ಜನರಲ್ಲಿ ಇಬ್ಬರು ಮಕ್ಕಳಿದ್ದಾರೆ. ಎಲ್ಲರು ಸಂಬಂಧಿಕರೇ ಆಗಿದ್ದಾರೆ ಎಂದು ಹೇಳಿದರು.

ಒಂದು ಟೆಂಪೋದಲ್ಲಿ ಸುಮಾರು 24 ಜನರು ಸಂಚರಿಸುತ್ತಿದ್ದರು. ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡ ಇಬ್ಬರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಗಾಯಾಳುಗಳಿಗೆ ವ್ಯವಸ್ಥಿತವಾಗಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದರು‌.

ರಾಯಚೂರಿನಿಂದ ತುಮಕೂರಿನ ಕ್ಯಾತ್ಸಂದ್ರದ ಬಳಿಯ ಬಡ್ಡಿಹಳ್ಳಿ ಹತ್ತಿರ ಕೆಲಸ ಮಾಡಲು ಬರುತ್ತಿದ್ದ ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರುಗಮ್ಮ (45) ಅವರ ಮಕ್ಕಳಾದ ಶಿವರಾಜ್ (16), ವೈಷ್ಣವಿ ( 12) ಅವರು ಅಪಘಾತವಾದ ಟೆಂಪೋದಲ್ಲಿ ಇದ್ದರು. ಬಡ್ಡಿಹಳ್ಳಿ ಹತ್ತಿರ ಕಳೆದ‌ ಮೂರು ವರ್ಷದಿಂದ ಕೆಲಸ ಮಾಡಿಕೊಂಡು ಇದ್ದರು. ತೋಟ, ಗಾರೆ ಕೆಲಸ ಮಾಡುತ್ತಿದ್ದರು. ದುರುಗಮ್ಮ ಅವರ ಪತಿ ತುಮಕೂರಿನಲ್ಲಿಯೇ ಇದ್ದರು

ಹಿಂದಿನ ಲೇಖನಭಾರತೀಯ ಸೇನೆಯಲ್ಲಿದೆ 90 ಹುದ್ದೆ; ಪಿಯುಸಿ, ಪಿಸಿಎಂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
ಮುಂದಿನ ಲೇಖನಕಾಂಗ್ರೆಸ್’ಗಿಂತಲೂ ಹೀನಾಯವಾಗಿ ಧರ್ಮ ಒಡೆಯುವ ಕೆಲಸ ಮಾಡಿದ್ದು ಬಿಜೆಪಿ: ಹಿಂದೂ ಮಹಾಸಭಾ