ಮನೆ ರಾಜ್ಯ ತುಮಕೂರು: ಪುಡಿ ರೌಡಿಗಳಂತೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು- ಪೊಲೀಸರಿಂದ ಬುದ್ದಿವಾದ

ತುಮಕೂರು: ಪುಡಿ ರೌಡಿಗಳಂತೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು- ಪೊಲೀಸರಿಂದ ಬುದ್ದಿವಾದ

0


ತುಮಕೂರು: ನಗರದ ಮುಖ್ಯ ರಸ್ತೆಯಲ್ಲೇ ಪುಡಿ ರೌಡಿಗಳಂತೆ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದು, ವಿದ್ಯಾರ್ಥಿಗಳ ಹೊಡೆದಾಟದ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.


ತುಮಕೂರು ಜಿಲ್ಲೆ, ತಿಪಟೂರು ನಗರದಲ್ಲಿ ವಿದ್ಯಾರ್ಥಿಗಳ ಪುಂಡಾಟ ಹೆಚ್ಚಾಗಿದ್ದು, ಓದೋಕೆ ಕಾಲೇಜಿಗೆ ಬಂದು ಗ್ಯಾಂಗ್ ಕಟ್ಟಿಕೊಂಡು ವಿದ್ಯಾರ್ಥಿಗಳು ಬಡಿದಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ‌ .

ಗಣರಾಜ್ಯೋತ್ಸವ ಆಚರಣೆ ಮಾಡಿ ತೆರಳುವ ವೇಳೆ ತಿಪಟೂರು ನಗರದ ಐ.ಬಿ ಸರ್ಕಲ್ ನಿಂದ ಸರ್ಕಾರಿ ಜೂನಿಯರ್ ಕಾಲೇಜಿನವರೆಗೆ ಪ್ರಾಣದ ಮೇಲಿನ ಭಯ ಬಿಟ್ಟು ಹೊಡೆದಾಡಿಕೊಂಡು ವಿದ್ಯಾರ್ಥಿಗಳು ಸಾಗಿದ್ದಾರೆ.
ಪದೇ ಪದೇ ಹೀಗೆ ಹೊಡೆದಾಡುತ್ತಿರುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ವಿದ್ಯಾರ್ಥಿಗಳ ಬೀದಿ ಕಾಳಗಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಕೆಲ ಹೊರಗಿನ ಪುಂಡರ ಸಾಥ್ ನೀಡುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಹೊರಗಿನಿಂದ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೊಡೆದಾಡಿಕೊಂಡಿದ್ದ ಒಂದಷ್ಟು ವಿದ್ಯಾರ್ಥಿಗಳನ್ನ ಕರೆಸಿ ಬುದ್ದಿ ಹೇಳಿ ವಾಪಸ್ ಕಳಿಸಿದ್ದಾರೆ.