ಮನೆ ರಾಜ್ಯ ತುಮಕೂರು: ಕಲುಷಿತ ನೀರು ಕುಡಿದು ಮತ್ತಿಬ್ಬರು ಸಾವು

ತುಮಕೂರು: ಕಲುಷಿತ ನೀರು ಕುಡಿದು ಮತ್ತಿಬ್ಬರು ಸಾವು

0

ತುಮಕೂರು: ಜಾತ್ರೆಯಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿಯಿಂದ ಬಳಲಿ  ವೃತಪಟ್ಟಿರುವವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Join Our Whatsapp Group

ಜಿಲ್ಲೆಯ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಜಾತ್ರೆ ಮಹೋತ್ಸವ ನಡೆಯುತ್ತಿದ್ದು, ಜಾತ್ರೆಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ನಿಶಕ್ತಿಯಿಂದ ಬಳಲಿ ಮಧುಗಿರಿ ತಾಲೂಕು ಆಸ್ಪತ್ರೆ, ತುಮಕೂರು ಜಿಲ್ಲಾ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ  ಹಲವರು ಚಿಕಿತ್ಸೆ ಪಡೆಯುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಚಿನ್ನೇನಹಳ್ಳಿ ಗ್ರಾಮದ ಪೆದ್ದಣ್ಣ (72) ಹಾಗೂ ಚಿಕ್ಕದಾಸಪ್ಪ (76) ಕಳೆದ ರಾತ್ರಿ ಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾಕ್ಷಿ ಎಂಬ 3 ವರ್ಷದ ಮಗು ಈ ಹಿಂದೆ ಮೃತಪಟ್ಟಿತ್ತು. ಈವರೆಗೆ ಮಗು ಸೇರಿ ಮೂರು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ಇಬ್ಬರು ಸಹ  ಚಿಕಿತ್ಸೆಗೆ ಸ್ಪಂಧಿಸುತ್ತಿದ್ದರು ಎನ್ನಲಾಗಿತ್ತು.

ಆದರೆ ಮಧುಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೀನಾಕ್ಷಿ ಚೇತರಿಸಿಕೊಂಡು ಮನೆಗೆ ಮರಳಿದ್ದು ಪುನಃ ಅಸ್ವಸ್ಥಗೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಮೀನಾಕ್ಷಿ ಮೃತಪಟ್ಟಿದ್ದು ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಯೋಗಕ್ಷೇಮವನ್ನ ಮಧುಗಿರಿ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವ ಕೆ .ಎನ್ ರಾಜಣ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು.

ಆದರೂ ಸಹ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದು ಆತಂಕಕ್ಕೆ ಈಡು ಮಾಡಿದೆ.

ಹಿಂದಿನ ಲೇಖನಹೆಚ್ ಎಸ್‌ ಆರ್‌ ಪಿ ಅಳವಡಿಸದವರಿಗೆ ಸಿಹಿ ಸುದ್ದಿ: ಗಡುವು ವಿಸ್ತರಣೆಗೆ ಒಪ್ಪಿಗೆ
ಮುಂದಿನ ಲೇಖನಪುರಿಯ ಶ್ರೀ ಜಗನ್ನಾಥ ದೇವಾಲಯದ 4 ದ್ವಾರಗಳು ಭಕ್ತರಿಗೆ ಮುಕ್ತ