ಮನೆ ರಾಜಕೀಯ ತುಂಗಭದ್ರಾ ಗೇಟ್​ ಕಟ್​; ಚೀಫ್ ಇಂಜಿನಿಯರ್ ​ಗೆ ಎಷ್ಟು ಫಿಕ್ಸ್ ಮಾಡಿದ್ದೀರಿ: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್...

ತುಂಗಭದ್ರಾ ಗೇಟ್​ ಕಟ್​; ಚೀಫ್ ಇಂಜಿನಿಯರ್ ​ಗೆ ಎಷ್ಟು ಫಿಕ್ಸ್ ಮಾಡಿದ್ದೀರಿ: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ ​ಡಿಕೆ ಪ್ರಶ್ನೆ

0

ಬೆಂಗಳೂರು: ತುಂಗಭದ್ರಾ ಜಲಾಶಯ ಗೇಟ್​ನ ಚೈನ್​ ಲಿಂಕ್​ ಕಟ್​ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ‘ಸೇಫ್ಟಿ ಮೆಜಾರಿಟಿ ಕಮಿಟಿಗೆ ಒಂದು ಫಾರ್ಮೇಟ್ ಕೊಟ್ಟಿರುತ್ತಾರೆ. ಪ್ರತಿಯೊಂದು ವಸ್ತುಗಳನ್ನು ಚೆಕ್ ಮಾಡಬೇಕು. ಪ್ರತಿವರ್ಷ ಲೂಬ್ರಿಕೇಷನ್ ಮಾಡಬೇಕಾಗುತ್ತದೆ. ಈ ಹಿನ್ನಲೆ ಕೇಂದ್ರ ಸರ್ಕಾರ 2021 ರಲ್ಲಿ ಹೊಸ ಕಾನೂನು ತಂದರು, ಇದರ ಪ್ರಕಾರ ಕೇಂದ್ರ ಸರ್ಕಾರದಿಂದ ಒಬ್ಬ , ರಾಜ್ಯ ಸರ್ಕಾರದಿಂದ ಒಬ್ಬ ಅಧಿಕಾರಿ ಇರುತ್ತಾರೆ. ಚೀಫ್ ಇಂಜಿನಿಯರ್​ನ ನೇಮಕ ಮಾಡೋಕೆ ಎಷ್ಟೆಷ್ಟು ಫಿಕ್ಸ್ ಮಾಡಿದ್ದಿರಾ ಅದನ್ನ ನಿಲ್ಲಿಸಿ. ಇದನೆಲ್ಲಾ ನಾನು ಅನುಭವಿಸಿದ್ದೇನೆ. ಎಂಡಿ, ಚೀಫ್ ಇಂಜಿನಿಯರ್​ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಕಿಡಿಕಾರಿದರು.

Join Our Whatsapp Group

ತುಂಗಭದ್ರಾ ಡ್ಯಾಂಗೆ 70 ವರ್ಷ ಆಗಿದೆ. ಇದು ಟಿಬಿ ಬೋರ್ಡ್​ಗೆ ಬರುತ್ತದೆ. ಆಂಧ್ರ, ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ. ಈ ಕುರಿತು ರಿಪೊರ್ಟ್ ಕೊಡೊದಕ್ಕೆ ಎಂದು ಒಂದು ಕಮಿಟಿ ಇದೆ. 122 ಟಿಎಂಸಿ ನಮ್ಮ ರಾಜ್ಯಕ್ಕೆ ಸಿಗಬೇಕು, 73 ಟಿಎಂಸಿ ನೀರು ಆಂಧ್ರಕ್ಕೆ ಸಿಗಬೇಕು. 103 ಟಿಎಂಸಿ ಈಗ ಸಿಗ್ತಿದೆ. ಇನ್ನು ದುಡ್ಡು ಕೊಟ್ಟು ಬಂದವನು ಈ ಡ್ಯಾಂ ಏನಾಗಿದೆ, ಗೇಟ್ ಏನಾಗಿದೆ ಅಂತಾ ಯಾಕೆ ನೋಡ್ತಾನೆ ಎಂದರು. ಈಗ ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಆಗುವುದು ಬೇಡ, ರೈತರಿಗೆ ಕಾನ್ಫಿಡೆನ್ಸ್ ಬರುವಂತೆ ಮಾಡಿ. ನಿಮ್ಮ ಊಹೆ ಮೇಲೆ ನಿರ್ಧಾರ ಮಾಡಿ ರೈತರ ಬೆಳೆ ನಷ್ಟ ಮಾಡಬೇಡಿ ಎಂದು ಕೈ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಕೊಪ್ಪಳ ತಾಲೂಕಿನ ಮುಶಿರಾಬಾದ್​​ ಬಳಿಯಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎರಡು ದಿನದಲ್ಲಿ 14 ಟಿಎಂಸಿ ನೀರು ಹರಿದು ಹೋಗಿದೆ. ಈ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಆಗಸ್ಟ್ 10ರಂದು ಡ್ಯಾಮ್​ನಲ್ಲಿ ಬರೋಬ್ಬರಿ 105 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ ಡ್ಯಾಂನಲ್ಲಿ 91.979 ಟಿಎಂಸಿ ನೀರು ಸಂಗ್ರಹ ಇದೆ. ಇನ್ನು ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್​​​​ ಮಂಡಳಿ ನಿರ್ಧಾರ ಕೈಗೊಂಡಿದ್ದು, ಗೇಟ್​ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ.