ಮನೆ ಅಂತಾರಾಷ್ಟ್ರೀಯ ಟರ್ಕಿ ಭೂಕಂಪ: 20,450ಕ್ಕೆ ತಲುಪಿದ ಮೃತರ ಸಂಖ್ಯೆ

ಟರ್ಕಿ ಭೂಕಂಪ: 20,450ಕ್ಕೆ ತಲುಪಿದ ಮೃತರ ಸಂಖ್ಯೆ

0

ಟರ್ಕಿ: ಭೀಕರ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ದಿನ ಕಳೆದಂತೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗುರುವಾರ ಮೃತರ ಸಂಖ್ಯೆ 20,450ಕ್ಕೆ ತಲುಪಿದೆ.

ಕಾಣೆಯಾದವರಿಗೆ ಶೋಧ ನಡೆಯುತ್ತಿದೆ. ನಾಲ್ಕು ದಿನಗಳ ಹಿಂದೆ ರಿಕ್ಟರ್‌ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದ ಸಾವಿರಾರು ಮನೆಗಳು, ಕಟ್ಟಡಗಳು ಧರೆಗುರುಳಿವೆ. ಭೂಕಂ‍ಪದಿಂದ ನಲುಗಿದ ನಗರಗಳಲ್ಲಿ ಅವಶೇಷಗಳ ತೆರವು, ಬದುಕುಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.

ಟರ್ಕಿಗೆ ಪ್ರವಾಸ ಹೋಗಿದ್ದ ಭಾರತದ ಉತ್ತರಾಖಂಡದ ನಿವಾಸಿ ವಿಜಯ್‌ ಕುಮಾರ್‌ ಗೌಡ್‌ ಎಂಬುವರು ಕಾಣೆಯಾಗಿದ್ದಾರೆ. ಅವರು ಉಳಿದಿದ್ದ ಹೋಟೆಲ್‌, ಭೂಕಂಪದಿಂದ ಕುಸಿದಿದೆ. ಅವರ ಮೊಬೈಲ್‌ ರಿಂಗಣಿಸುತ್ತಿದೆ. ಆದರೆ, ಕರೆ ಸ್ವೀಕರಿಸುತ್ತಿಲ್ಲವೆಂದು ಅವರ ಕುಟುಂಬದವರು ಹೇಳಿದ್ದಾರೆ.