ಮನೆ ಆರೋಗ್ಯ ಗಂಟಲು ನೋವಿಗೆ ಅರಿಶಿನ ಪವರ್ ಫುಲ್ ಮನೆಮದ್ದು

ಗಂಟಲು ನೋವಿಗೆ ಅರಿಶಿನ ಪವರ್ ಫುಲ್ ಮನೆಮದ್ದು

0

ಮನುಷ್ಯನಿಗೆ ಯಾವಾಗ ಆರೋಗ್ಯ ಹದಗೆಡುತ್ತದೆ ಎಂದು ಹೇಳುವುದು ಕಷ್ಟ. ಅದರಲ್ಲೂ ಈಗ ಬಿಸಿಲು ಮತ್ತು ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿವೆ. ಈ ಸಂದರ್ಭದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಆರೋಗ್ಯ ತೊಂದರೆ ತಪ್ಪಿದ್ದಲ್ಲ. ಈ ಸಂದರ್ಭದಲ್ಲಿ ಶೀತ ನೆಗಡಿ ಉಂಟಾಗುತ್ತದೆ. ಇದರ ಜೊತೆ ಗಂಟಲು ನೋವು ಸಹ ಬರುತ್ತದೆ…

ಗಂಟಲು ನೋವಿಗೆ ಅರಿಶಿನ

• ಸಾಮಾನ್ಯವಾಗಿ ಗಂಟಲು ನೋವು ಬಂದಾಗ ಬಳಸುವ ಏಕೈಕ ಆಯುರ್ವೇದ ಗಿಡಮೂಲಿಕೆ ಎಂದರೆ ಅದು ಅರಿಶಿನ. ಏಕೆಂದರೆ ಇದರಲ್ಲಿ ಆಂಟಿ ಇನ್ಫಾಮೇಟರಿ, ಆಂಟಿಬಯೋಟಿಕ್ ಮತ್ತು ಅನಲ್ಗೆಸಿಕ್ ಗುಣಲಕ್ಷಣಗಳ ಜೊತೆಗೆ ವಾಸಿ ಮಾಡುವ ಲಕ್ಷಣಗಳು ಸಹ ಇವೆ.

• ಆಯುರ್ವೇದ ಶಾಸ್ತ್ರದಲ್ಲಿ ಇದನ್ನು ಹರಿದ್ರ ಎಂದು ಕರೆಯುತ್ತಾರೆ. ಸ್ವಲ್ಪ ಕಹಿ ಮತ್ತು ಗಾಢವಾದ ರುಚಿ ಒಳಗೊಂಡಿರುವ ಅರಿಶಿನ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತದೆ. ಸುಲಭವಾಗಿ ವಾತ ಮತ್ತು ಕಫ ಸಮಸ್ಯೆಯನ್ನು ಪರಿಹರಿಸುತ್ತದೆ. ಇದರಲ್ಲಿ ಸ್ವಲ್ಪ ಕಹಿ ಲಕ್ಷಣ ಕೂಡ ಇರುವುದರಿಂದ ಪಿತ್ತ ಪ್ರಭಾವವನ್ನು ಕೆಲವು ಹಂತದವರೆಗೆ ಇದು ಸಮತೋಲನ ಮಾಡುತ್ತದೆ.

ಶೀತ, ಕೆಮ್ಮು, ನೆಗಡಿ, ಗಂಟಲು ನೋವಿಗೆ ಅರಿಶಿನ

ಅರಿಶಿನವನ್ನು ನಾವು ನಮಗೆ ಶೀತ, ಕೆಮ್ಮು, ನೆಗಡಿ, ಗಂಟಲು ನೋವು ಬಂದಾಗ ಉಪಯೋಗಿಸುತ್ತೇವೆ. ಅಷ್ಟೇ ಅಲ್ಲದೆ ಗಾಯವನ್ನು ವಾಸಿ ಮಾಡಲು, ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ಮಾಡಲು, ಮೈಕೈ ನೋವು, ಆರ್ಥ್ರೈಟಿಸ್, ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಇನ್ನಿತರ ತೊಂದರೆಗಳಿಗೆ ಪರಿಹಾರವಾಗಿ ಬಳಸಬಹುದಾಗಿದೆ.

ಅರಿಶಿನದ ನೀರಿನಿಂದ ಬಾಯಿ ಮುಕ್ಕಳಿಸುವುದು

ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಚಮಚ ಅರಿಶಿನ ಪುಡಿಯನ್ನು ಸೇರಿಸಿ ಮೂರರಿಂದ ಐದು ನಿಮಿಷಗಳು ಚೆನ್ನಾಗಿ ಕುದಿಸಬೇಕು. ದಿನದಲ್ಲಿ ಮೂರು ಬಾರಿ ಈ ರೀತಿ ಮಾಡುವುದ ರಿಂದ ಗಂಟಲು ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಅರಿಶಿನದ ಜೊತೆ ಕಾಳು ಮೆಣಸು

1 ಟೀಚಮಚ ಅರಿಶಿನ, ಒಂದು ಅಥವಾ ಎರಡು ಕುಟ್ಟಿ ಪುಡಿ ಮಾಡಿದ ಕಾಳು ಮೆಣಸು ಮತ್ತು ಒಂದು ಟೀ ಚಮಚ ಜೇನುತುಪ್ಪ ಎಲ್ಲವನ್ನು ಮಿಶ್ರಣ ಮಾಡಿ ಊಟಕ್ಕೆ ಒಂದು ಗಂಟೆ ಮುಂಚೆ ಅಥವಾ ನಂತರದಲ್ಲಿ ದಿನದಲ್ಲಿ ಎರಡರಿಂದ ಮೂರು ಬಾರಿ ಸೇವಿಸುವ ಅಭ್ಯಾಸವಿಟ್ಟುಕೊಳ್ಳಿ. ಇದು ಸಹ ಗಂಟಲು ನೋವಿಗೆ ಒಂದು ಒಳ್ಳೆಯ ಪರಿಹಾರ.

ಅರಿಶಿನ ಮಿಶ್ರಿತ ಹಾಲು

ರಾತ್ರಿ ಮಲಗುವ ಸಂದರ್ಭದಲ್ಲಿ ಈ ಪರಿಹಾರವನ್ನು ಮಾಡಿ ಕೊಳ್ಳಬಹುದು. ಪ್ರತಿದಿನ ಮಲಗುವಾಗ ನಿಮಗೆ ಒಂದು ವೇಳೆ ಹಸುವಿನ ಹಾಲು ಲಭ್ಯವಿದ್ದರೆ, ಅದನ್ನು ಒಂದು ಲೋಟ ತೆಗೆದುಕೊಂಡು ಅದಕ್ಕೆ ಒಂದು ಟೀ ಚಮಚ ಅರಿಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

ಹಿಂದಿನ ಲೇಖನಬಿಜೆಪಿಗೆ ಸ್ಪಷ್ಟ ಬಹುಮತ: ಜಗದೀಶ ಶೆಟ್ಟರ್ ವಿಶ್ವಾಸ
ಮುಂದಿನ ಲೇಖನತಂತ್ರಜ್ಞಾನ ಬಳಸಿಕೊಂಡು ಹೆಚ್ಚು ಮತದಾನ ಮಾಡಿಸಬೇಕು: ಜಿ.ಪಂ. ಸಿಇಓ ಗಾಯತ್ರಿ