ನೇಪಾಳ: ಭಾರತದ ನೆರೆ ರಾಷ್ಟ್ರ ನೇಪಾಳದಲ್ಲಿ 4.8 ಹಾಗೂ 5.9 ತೀವ್ರತೆಯ ಅವಳಿ ಭೂಕಂಪ ಸಂಭವಿಸಿದೆ.
ನೇಪಾಳ ರಾಜಧಾನಿ ಕಠ್ಮಂಡುವಿನ ವಾಯುವ್ಯದಲ್ಲಿ 800 ಕಿಮೀ ದೂರದಲ್ಲಿ ಇರುವ ಬಜೂರಾ ಜಿಲ್ಲೆಯ ದಹಾಕೋಟ್‌ದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ.
ಮೊದಲ ಭೂಕಂಪವು ರಾತ್ರಿ 11.58ಕ್ಕೆ ಅಪ್ಪಳಿಸಿತ್ತು, ಮತ್ತೊಂದು ಮಧ್ಯರಾತ್ರಿ 1.30ರ ವೇಳೆಗೆ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಜೂರಾದ ಜಿಲ್ಲಾ ಪೊಲೀಸ್ ಕಚೇರಿ ಪ್ರಕಾರ, ಭೂಕಂಪನದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ನಡುಗಿದ್ದು, ಸ್ಥಳೀಯರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಶ್ಚಿಮ ನೇಪಾಳದಲ್ಲಿನ ಬಜೂರಾ ನೆರೆಹೊರೆಯ ಜಿಲ್ಲೆಗಳಲ್ಲೂ ಭೂಮಿ ನಡುಗಿದ ಅನುಭವ ಜನರಿಗೆ ಆಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.